ಪುಟ:ಅಶೋಕ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, + + + - - ++ * * * * * * * + + G & P P +++ # • # + \+ * * * * * * * * ••••vv೩ ತ್ರವನ್ನು ಬರೆದವನು ಈ ನಾಲಂದಾ ವಿಹಾರದಲ್ಲಿ ಪ್ರಾಚೀನ ಬೌದ್ಧಗ್ರಂಥಗಳು, ಮುಂ ದಿನ ಕಾಲದ ೧೮ ಬೌದ್ದ ಸಾಂಪ್ರದಾಯಗಳ ಗ್ರಂಥಗಳು, ಇವಲ್ಲದೆ ಸಂಸ್ಕೃತ ಶಾಸ್ತ್ರ .ಗಳು, ಹಿಂದು ಜನರ ವೇದಗಳು ಇವೆಲ್ಲವು ಅಭ್ಯಾಸಿಸಲ್ಪಡುತ್ತಿದ್ದವೆಂದು ಬರೆದಿರುವನು. ವೃದ್ಧರೂ ತರುಣರೂ ಎಲ್ಲರೂ ಈ ಗ್ರಂಥಸಮಾಲೋಚನೆಯಲ್ಲಿ ಸೇರುತ್ತಿದ್ದರು, ತ್ರಿಪಿ ಟಕದಲ್ಲಿ ಸೇರಿದ ಎಲ್ಲ ವಿಷಯಗಳ ಜ್ಞಾನವಿಲ್ಲದವರಿಗೆ ಆ ಕಾಲದಲ್ಲಿ ಜನರಲ್ಲಿ ಮನವು ಸಿಗುತ್ತಿರಲಿಲ್ಲವಾದುದರಿಂದ ಆ ವಿಷಯಗಳ ಜ್ಞಾನವನ್ನು ಸಂಪಾದಿಸುವ ಇಚ್ಛೆಯುಳ್ಳವ ರೆಲ್ಲರು ಈ ವಿಹಾರಕ್ಕೆ ಅಧ್ಯಯನಕ್ಕಾಗಿ ಬರುತ್ತಿದ್ದರು. ಈ ಸ್ಥಳದಲ್ಲಿ ಅಧ್ಯಯನ ಮಾಡಿ ದವರ ಪ್ರಸಿದ್ದಿಯು ನಾಲ್ಕೂ ಕಡೆಗೆ ಆಗುತ್ತಿತ್ತು, ನಾಲಂದಾ ವಿಹಾರದ ವಿದ್ಯಾರ್ಥಿ ಯೆಂದು ಹೇಳಿದರೆ ಜನರಲ್ಲಿ ಮಾನವು ದೊರೆಯುತ್ತಿತ್ತು. ಇದರಿಂದ ಎಲ್ಲ ವಿದ್ಯಾರ್ಥಿ rಳು ತಾವು ನಾಲಂದಾವಿಹಾರದವರೆನಿಸಿಕೊಳ್ಳಲಪೇಕ್ಷಿಸುತ್ತಿದ್ದರು. ಈ ವಿಹಾರದಿಂದ ಮುಂದೆ ಎಷ್ಟು ಜನ ಮಹಾಕವಿಗಳು, ದಾರ್ಶನಿಕರು, ವಿದ್ವಾಂಸರು ಹೊರಟು ಭರತ ಖಂಡಕ್ಕೆ ಅಲಂಕಾರವಾಗಿದ್ದರೆಂಬದರ ಲೆಕ್ಕವೇ ಇಲ್ಲ. ಯಾವನೊಬ್ಬ ವಿದ್ಯಾರ್ಥಿಯು ನಾಲಂದಾವಿಹಾರದ ಪ್ರಸಿದ್ಧಿಯನ್ನು ಕೇಳಿ ಅಧ್ಯಯನಕ್ಕೆ ಅಲ್ಲಿಗೆ ಬಂದರೆ ಆತನ ವಿದ್ಯಾಬುದ್ಧಿಗಳನ್ನು ಪರೀಕ್ಷಿಸುವದಕ್ಕಾಗಿ ದ್ವಾರರಕ್ಷಕರು ಎಷ್ಟೋ ಗೂಢ ಪ್ರಶ್ನೆಗ ಳನ್ನು ಕೇಳುವರು. ಎಷ್ಟೋ ವಿದ್ಯಾರ್ಥಿಗಳು ಅಲ್ಲಿಂದಲೇ ನಿರಾಶರಾಗಿ ತಿರುಗಿ ಹೋಗುತ್ತಿದ್ದರು. ಈ ನಾಲಂದಾವಿಹಾರದಲ್ಲಿ ನಿಜವಾದ ಜ್ಞಾನಿಗಳ ಮತ್ತು ಪ್ರತಿಭಾ ಶಾಲಿಗಳ ಕೊರತೆಯಿರಲಿಲ್ಲ. ಧರ್ಮ ಪಾಲ, ಚಂದ್ರಪಾಲ, ಗುಣಮತಿ, ಸ್ಥಿರಮತಿ, ಪ್ರಭಾಮಿತ್ರ, ಜಿನಮಿತ್ರ, ಜ್ಞಾನಚಂದ್ರ, ಶೀಲಭದ್ರ ಮೊದಲಾದ ಪಂಡಿತರ ಕೀರ್ತಿಯು ಇಡಿ ದೇಶದಲ್ಲೆಲ್ಲ ಹಬ್ಬಿತ್ತು, ಅವರೆಲ್ಲರೂ ಬೌದ್ಧಧರ್ಮದ ಗ್ರಂಥಗಳನ್ನೂ ಭಾಷ್ಯಾದ ಗಳನ್ನೂ ರಚಿಸಿರುವರು. ಕ್ರಿ. ೭ನೆಯ ಶತಮಾನದಲ್ಲಿ ಚೀನ ಪ್ರವಾಸಿ ಇಸಿಂಗ (Itsing ) ಎಂಬವನು ಭರತಖಂಡದಲ್ಲಿ ಬಂದಾಗ ಅವನು ಇಲ್ಲಿ↑ ೧೦ ವರ್ಷ ಎಸ ಮಾಡಿದ್ದನು. ( ಕ್ರಿ. ೬೭೫ರಿಂದ ೬೮೫ರ ವರೆಗೆ ) ನಾಲಂದಾ (ನಾಲಂದ್ರ) ವಿಶ್ವವಿದ್ಯಾ ಯದಲ್ಲಿ ೧೧ ದೊಡ್ಡ ದೊಡ್ಡ ಸಭಾಗೃಹಗಳೂ, ವಿದ್ಯಾರ್ಥಿಗಳ ವಾಸಕ್ಕಾಗಿ 400 ಬೇರೆ ಬೇರೆ ಕಟ್ಟಡಗಳೂ, ಇದ್ದವೆಂದು ಆತನು ವರ್ಣಿಸಿರುವನು. ಬೇರೆ ಬೇರೆ ಕೆಲ ಗಳಲ್ಲಿ ಬೇರೆ ಬೇರೆ ರಾಜರು ೨೦ ಗ್ರಾಮಗಳನ್ನು ಈ ವಿಹಾರಕ್ಕೆ ದಾನಮಾಡಿದ್ದರು. ಅವುಗಳ ಉತ್ಪನ್ನ ದಿಂದ ವಿಹಾರದ ವೆಚ್ಚವು ನಡೆಯುತ್ತಿತ್ತು. ನಾಲಂದಾನಿಹಾರವು ಯಾವಕಾಲದಲ್ಲಿ ಸ್ಥಾಪಿಸಲ್ಪಟ್ಟಿತ್ತೆಂಬದನ್ನು ನಿರ್ಣಯಿಸು ವದು ಕಠಿಣವು, ಪಾಲಿಗ್ರಂಥಗಳಲ್ಲಿ ಅಲ್ಲಲ್ಲಿ ಇದರ ಉಲ್ಲೇಖವು ದೊರೆಯುತ್ತಿದ್ದರೂ t Tukakaszt's ttsing, ....€ Turapath's History of Buddhistp.