ಪುಟ:ಅಶೋಕ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ಅಶೋಕ ಅಥವಾ ಪ್ರಿಯದರ್ಶಿ wwwಒ೦೦೦••••••••••• + ೭ ಮೈಲಿನ ಮೇಲೆ ಇರುವದು, ಹುಯೆನ್ ತ್ಸಾಂಗನಮತದಂತೆ ನಾಲಂದಾನಿಹಾರವು ಬುದ್ದಗಯೆಯ ಬೋಧಿ ವೃಕ್ಷದಿಂದ ೪ ಮೈಲು ದೂರದಲ್ಲಿತ್ತು. ಫಾಹಿಯಾನನು ನಾಲಂದಾಸ್ಥಾನವು ಸಾರಿಪುತ್ರ ಮತ್ತು ಮಹಾಮೌದ್ದ ಲಾಯನ ಇವರ ಜನ್ಮ ಸ್ಥಾನ ವೆಂದು ಹೇಳಿರುವನು. ಆದರೆ ಹುಯೆನ್ ತ್ಸಾಂಗನು ಈ ಮತವನ್ನು ಸಮರ್ಥಿಸಿಲ್ಲ. ತಿಬೇಟದ ದುಲ್ಲಾ ಗ್ರಂಥದಲ್ಲಿ ಸಾರಿಪುತ್ರನ ತಾಯಿಯೂ ಅಜ್ಜನೂ (ತಾಯಿಯ ತಂದೆ) 'ನಾಲಂದಾವಾಸಿಗಳೆಂದು ಹೇಳಿದೆ. ಬಡಗಾಂವೆಯ ಅವಶೇಷವು ಬಹು ವಿಸ್ತಾರವಾ ಗಿದೆ. ಇಟ್ಟಿಗೆಗಳಿಂದ ಕಟ್ಟಿದ ಎಷ್ಟೋ ಕಟ್ಟಡಗಳ ಅವಶೇಷಗಳು ಅಲ್ಲಿ ಈಗಲೂ ಇರುವವು. ಬಹು ದೂರದವರೆಗೆ ಹಬ್ಬಿದ ಒಂದು ಎತ್ತರವಾದ ಸ್ಥಳವು ಇನ್ನೂ ಅಲ್ಲಿ ಕಾಣುತ್ತಿರುವದು, ಅದು ಆ ಕಾಲದ ಉಪ್ಪರಿಗೆ ಮೊದಲಾದ ವಿಹಾರಗಳಿದ್ದ ಸ್ಥಳ ಎಂದು ಹಲವರು ಹೇಳುವರು. ಈ ಇಟ್ಟಿಗೆಯ ರಾಶಿಯ ಸುತ್ತಲೂ ಒಂದು ಪುಷರಿ ೬ಳೆಯು ಇತ್ತು, ವಿಸ್ತಾರವಾದ ಈ ಪ್ರದೇಶವನ್ನು ನೋಡಿದರೆ ನಾಲಂದಾವಿಶ್ವವಿದ್ಯಾ ಲಯದ ಅದ್ಭುತ ವ್ಯಾಪಾರದ ಕಲ್ಪನೆಯು ಸ್ವಲ್ಪ ಮಟ್ಟಿಗೆ ಬರುವದು. ಈ ವಿಶ್ವವಿದ್ಯಾ ಲಯದ ಮತ್ತು ಸುತ್ತಲಿನ ಕಟ್ಟಡಗಳ ಶಿಲ್ಪ ಚಾತುರ್ಯವು ವರ್ಣನೀಯವಾಗಿತ್ತೆಂದು ಎಲ್ಲರೂ ಒಪ್ಪುವರು. ತಕ್ಷಶಿಲೆಯ ಶಿಕ್ಷಣಮಂದಿರವೂ ದೇಶಪ್ರಸಿದ್ಧವಾಗಿತ್ತು, ಪ್ರಾಚೀನ ಸಂಸ್ಕೃತ ಗ್ರಂಥಗಳಲ್ಲಿಯೂ, ಜಾತಕ ಮೊದಲಾದ ಪಾಲೀಗ್ರಂಥಗಳಲ್ಲಿಯೂ ಇದರ ವರ್ಣನೆ ಯುಂಟು. ತಕ್ಷಶಿಲೆಯ ಶಿಕ್ಷಣಾಲಯವು ನಾಲಂದಾನಿಶ್ವವಿದ್ಯಾಲಯಕ್ಕಿಂತ ಪ್ರಾಚೀ ನವ, ಆತ್ರೇಯ ಮಹರ್ಷಿಯು ಒಂದಾನೊಂದು ಕಾಲದಲ್ಲಿ ಈ ವಿದ್ಯಾಲಯದಲ್ಲಿ ಮುಖ್ಯಾಧ್ಯಾಪಕನಾಗಿದ್ದನು. ಈ ವಿದ್ಯಾಲಯದಲ್ಲಿ ಆಯುರ್ವೇದದ ಅಧ್ಯಯನವೂ ನಡೆಯುತ್ತಿತ್ತು. ಸುಪ್ರಸಿದ್ದ ವೈಯಾಕರಣನಾದ ಪಾಣಿನಿಮಹರ್ಷಿಯೂ, ಮಹಾಭಾ ಷ್ಯಕಾರನಾದ ಪತಂಜಲಿಯೂ ಈ ವಿದ್ಯಾಲಯದಲ್ಲಿಯೇ ಅಧ್ಯಯನ ಮಾಡಿದರೆಂದು ಪ್ರವಾದವುಂಟು, ಈ ಎರಡು ಮುಖ್ಯ ಶಿಕ್ಷಣ ಕೇಂದ್ರಸ್ಥಳಗಳ ಹೊರತು ದೇಶದಲ್ಲಿ ಎಷ್ಟೋ ಕಡೆಗೆ ವಿಹಾರಾದಿಗಳು ಇದ್ದವು. ಈ ವಿಹಾರಗಳಲ್ಲಿ ಧರ್ಮ ಪ್ರಚಾರವೂ ಧರ್ಮಾಲೋಚನೆಯೂ ನಡೆಯುತ್ತಿದ್ದಂತೆ ವಿದ್ಯಾರ್ಥಿಗಳ ಶಿಕ್ಷಣವೂ ನಡೆಯುತ್ತಿತ್ತು. ಈ ವರ್ಣನೆಯಿಂದ ಮೌರ್ಯ ರಾಜನಾದ ಅಶೋಕನು ಶಿಕ್ಷಣ ವಿಷಯವಾಗಿ ಹೆಚ್ಚು ಮನಸ್ಸಿಟ್ಟದ್ದನೆಂದು ಸ್ಪಷ್ಟ ವಾಗುವದು, ಜನಸಾಮಾನ್ಯದಲ್ಲಿ ಶಿಕ್ಷಣವು ಆರಂಭವಾ ದದ್ದು ಬೌದ್ಧ ಯುಗದಿಂದಲೇ, ಅಶೋಕನ ಪ್ರಯತ್ನದಿಂದ ಲೋಕ ಶಿಕ್ಷಣವು ಹೆಚ್ಚು ವಿಸ್ತಾರವಾಗಿತ್ತು. ಅಶೋಕನ ಕಾಲದಲ್ಲಿ ಸಮಾಜವು ಯಾವ ಸ್ಥಿತಿಯಲ್ಲಿತ್ತೆಂಬದರ ವಿವರಣವು ಎಲ್ಲಿಯೂ ದೊರೆಯುವದಿಲ್ಲ, ಶಿಲಾಲಿಧಿಗಳು, ಅನುಶಾಸನಗಳು ಇವುಗಳಿಂದ ಸ್ವಲ್ಪಮ