ಪುಟ:ಅಶೋಕ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ಟ್ವಿಗೆ ಅದರ ಕಲ್ಪನೆಯು ಆಗುವಂತಿರುವದು, ಆ ಕಾಲದಲ್ಲಿ ಯಾವದೊಂದು ಉತ್ಸವ ದಲ್ಲಿ ಅಥವಾ ಪರ್ವದಲ್ಲಿ ( ಹಬ್ಬ ) ಬಹು ಪ್ರಾಣಿಹಿಂಸೆಯು ಆಗುತ್ತಿದ್ದರೆ ಅಶೋಕನು ಅದಕ್ಕೆ ಪ್ರತಿಬಂಧ ಮಾಡುತ್ತಿದ್ದನು. ಅಣ್ಣತಮ್ಮಂದಿರೂ, ಬೇರೆ ಬಳಗದವರೂ ಅವಿ ಭಕ್ತರಾಗಿರುವ ಪದ್ಧತಿಯು ಇತ್ತೆಂದು ತೋರುವದು, ಮಾತಾಪಿತೃಭಕ್ತಿ, ಮಾತಾಪಿತೃ ಗಳ ಆಜ್ಞಾಪಾಲನ, ಗುರುಗಳಿಗೆ ಸಮ್ಮಾನಮಾಡುವದು, ಮೊದಲಾದ ಸದ್ಗುಣಗಳು ಜನರಲ್ಲಿ ನೆಲೆಗೊಂಡಿದ್ದವು. ಇವು ನೆಲೆಗೊಳ್ಳುವದಕ್ಕೆ ಶ್ರಮಣರೂ, ಬ್ರಾಹ್ಮಣರೂ ಸಮವಾಗಿಯೇ ಪ್ರಯತ್ನಿ ಸುತ್ತಿದ್ದರು. ಇದಲ್ಲದೆ ಆ ಕಾಲದಲ್ಲಿ ಪೌರೋಹಿತ್ಯಪದ್ಧ ತಿಯೂ ಪ್ರಚಲಿತವಾಗಿತ್ತು, ಈ ಪುರೋಹಿತರ ಪ್ರಭಾವಕ್ಕೆ ಒಂದಾನೊಂದು ಕಾಲ ದಲ್ಲಿ ಸಮಾಜದ ಎಲ್ಲರೂ ತಲೆಬಾಗಿ ನಡೆಯುತ್ತಿದ್ದರು. ಆದರೆ ಬೌದ್ದಯುಗದಲ್ಲಿ ಈ ಪ್ರಭಾವವು ಕ್ರಮವಾಗಿ ಕಡಿಮೆಯಾಗುತ್ತ ನಡೆದಿತ್ತು, ಕ್ಷತ್ರಿಯರು ವೈಶ್ಯರು ಶೂದ್ರರು, ಬಡಗಿಗಳು, ಕಮ್ಮಾರರು, ಕಣಿಗಾರರು, ಕಸಬುಗಾರರು ಮೊದಲಾದ ಹಲವು ಪಂಗಡಗಳು ಸಮಾಜದಲ್ಲಿ ಉಂಟಾಗಿದ್ದವು ಆದರೆ ಈ ಜಾತಿಭೇದದಲ್ಲಿ ಇವುಗಳ ಒಳ ಭೇದಗಳು ಇದ್ದವೋ ಇಲ್ಲವೋ ಊಹಿಸಲಿಕ್ಕಾಗುವದಿಲ್ಲ. ಅರಸು ಮನೆತನದಲ್ಲಿ ಮದು ವೆಯ ವಿಶೇಷ ವಿಧಿನಿಷೇಧಗಳಿದ್ದಂತೆ ತೋರಲಿಲ್ಲ. ಅಶೋಕ ಮಹಾರಾಜನು ಒಬ್ಬ ಶ್ರೇಷ್ಠಿಯ ಮಗಳನ್ನು ಮದುವೆಯಾದದರಿಂದ ಸಮಾಜದಲ್ಲಿ ಏನೂ ಬಾಧೆಬರಲಿಲ್ಲ. ಬಿಂದುಸಾರರಾಜನು ಬಾಹ್ಮಣ ಕನ್ನೆ ಯನ್ನು ಮದುವೆಯಾದದ್ದು ಅನ್ಯಾಯವೆಂದು ಎಲ್ಲಿಯೂ ವರ್ಣಿಸಲ್ಪಟ್ಟಿಲ್ಲ. ಮೌರ್ಯ ರಾಜರ ಕಾಲದಲ್ಲಿ ಬ್ರಾಹ್ಮಣರು ಸಮಾಜದಲ್ಲಿ ತಮಗಿದ್ದ ಉಚ್ಚಸ್ಥಾನದಿಂದ ಎಷ್ಟೋ ಕೆಳಗೆ ಎಳೆಯಲ್ಪಟ್ಟಿದ್ದರೆಂದು ತೋರುವದು. ಆಗ ಸಮಾಜದ ಮತ್ತು ಧರ್ಮದ ನಾಯಕತ್ವವು ಅರಸನಿಗೇ ಇತ್ತು. ಅರಸನ ಅಪ್ಪ ಣೆಯ ಕೆಳಗೇ ಸಮಾಜವೆಲ್ಲ ನಡೆಯುತ್ತಿತ್ತು ಈ ಕಾಲದಲ್ಲಿ ಧರ್ಮದ ಸ್ಥಿತಿಯು ಯಾವ ಮೇರೆಗೆ ಇತ್ತೆಂಬದನ್ನು ಈಗ ಅಲೋ ಚಿಸಬೇಕಾಗಿರುವದು. ಅಶೋಕನ ಕಾಲದಲ್ಲಿ ಬೌದ್ದ ಸಂಪ್ರದಾಯದಲ್ಲಿ ಮತಭೇದ ಗಳುಂಟಾಗಿದ್ದ ವಿಷಯವನ್ನು ಈ ಮೊದಲೇ ಆಲೋಚಿಸಿದೆ. ಬುದ್ದದೇವನ ಪರಿನಿರ್ವಾ ಣವಾದ ೨೦೦ ವರ್ಷಗಳ ತರುವಾಯ ಬೌದ್ಧ ಧರ್ಮದಲ್ಲಿ ೧೮ ಸಂಪ್ರದಾಯಗಳುಂಟಾ ಗಿದ್ದವು ಕಾಲಕ್ರಮದಿಂದ ಈ ೧೮ ಸಂಪ್ರದಾಯಗಳಲ್ಲಿ ಒಂದೊಂದು ಸಂಪ್ರದಾ ಯವು ಲೋಪಹೊಂದುವದೂ ಮತ್ತೊಂದು ಉತ್ಪನ್ನ ವಾಗುವದೂ ನಡೆದಿತ್ತು. ಆದರೆ ಆಗ ಇನ್ನೂ ಮಹಾಯಾನ ಬೌದ್ಧಮತವು ಪ್ರಚಾರಕ್ಕೆ ಬಂದಿರಲಿಲ್ಲ.

  1. ಕ್ರಿಸ್ತಶಕದ ಆರಂಭದಲ್ಲಿ ಶಕ ಜಾತಿಯು ಭರತಖಂಡದಲ್ಲಿ ವಾಯವ್ಯ ಭಾಗವನ್ನು ಆಕ್ರಮಿಸಿ ಸಿತ್ತು. ಕಾಶ್ಮೀರದಿಂದ ಎಲ್ಲಿಯವರೆಗಿನ ಯಾವತ್ತೂ ಪ್ರದೇಶವನ್ನು ಅದು ವ್ಯಾಪಿಸಿಕೊಂಡಿತ್ತು. ಶಕನರ ಪತಿಕನಿಷ್ಠನು ಕ್ರಿ. ೭೮ ನೆಯ ವರುಷ ಸಿಂಹಾಸನವನ್ನೇರಿ ತನ್ನ ಹೆಸರಿನಿಂದ ಒಂದು ಶಕವನ್ನು ಆರಂಭಿಸಿ