ಪುಟ:ಅಶೋಕ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧wb ಅಶೋಕ ಅಥವಾ ಪ್ರಿಯದರ್ಶಿ, •••••. = عمر عمره - * * * ممممممرمر ಬೌದ್ಧ ಧರ್ಮ ಗ್ರಂಥಗಳೆಲ್ಲ ಆಗ ಪಾಲೀಭಾಷೆಯಲ್ಲಿಯೇ ರಚಿತವಾಗಿದ್ದವು. ಸಂಸ್ಕೃತದ ಬೌದ್ಧವಾಬ್ಬಿಯವು ದೇಶದಲ್ಲಿ ಆಗ ಅಷ್ಟೊಂದು ಪ್ರಚಲಿತವಾಗಿರಲಿಲ್ಲ. ಮುಂದಿನ ಕಾಲದಲ್ಲಿ ವೈದಿಕಧರ್ಮ, ಬೌದ್ಧ ಧರ್ಮಗಳಲ್ಲಿ ವಿರೋಧವು ಉತ್ಪನ್ನ ವದಾ ಗಲೂ ಆ ಎರಡು ಮತಗಳಲ್ಲಿ ವಿರೋಧವು ಉತ್ಪನ್ನ ವಾಗಿರಲಿಲ್ಲ. ಎರಡೂ ಸಂಪ್ರದಾ ಯಗಳ ಜನರು ತಮ್ಮ ತಮ್ಮ ಧರ್ಮಮತಗಳನ್ನು ಪಾಲಿಸುತ್ತಿದ್ದರು. ಈ ಕಾಲದಲ್ಲಿ ಜನವಸತಿಯಿಂದ ದೂರದಲ್ಲಿ ಪಟ್ಟಣದ ಕೋಲಾಹಲವನ್ನು ಬಿಟ್ಟು ಅರಣ್ಯದಲ್ಲಿ ಒಂದು ವರ್ಗದ ಜನರು ವಾಸಮಾಡಹತ್ತಿದ್ದರು. ಅವರಿಗೆ ತಾಪಸ ಸಂಪ್ರದಾಯದವರೆನ್ನು ದ್ದರು. ಇವರೆಲ್ಲರೂ ತಮ್ಮ ತಮ್ಮ ಮತದ ಶಿಕ್ಷಣವನ್ನು ಕೊಡುವದರಲ್ಲಿ ಇಲ್ಲವೆ ಧ್ಯಾನಧಾರಣಾದಿಗಳಲ್ಲಿ ಮಗ್ನರಾಗಿರುತ್ತಿದ್ದರು, ಕೆಲವರು ಇಂದ್ರಿಯ ನಿಗ್ರಹಮಾಡಿ ಕೂಂಡು ಇರುತ್ತಿದ್ದರು. ಕೆಲವರು ಶಿಷ್ಯರಿಗೆ ಮೋಕ್ಷತತ್ವವನ್ನು ಉಪದೇಶಿಸುತ್ತಿ ದ್ದರು. ಈ ಅರಣ್ಯವಾಸಿಗಳಾದ ತಾಸಸರು ಫಲಮೂಲಾದಿಗಳಿಂದ ಇಲ್ಲವೆ ಭಿಕ್ಷೆ ಯಿಂದ ಉಪಜೀವಿಸುತ್ತಿದ್ದರು. ಅರಣ್ಯವಾಸಿಗಳಾದ ತಾಪಸು ಹೊರತು ಪರಿವ್ರಾಜಕವೆಂಬ ಇನ್ನೊಂದು ವರ್ಗವು ಇತ್ತು. ಜನಸಾಮಾನ್ಯಕ್ಕೆ ಶಿಕ್ಷಣ ಕೊಡುವದು ಇವರ ಮುಖ್ಯ ಕರ್ತವ್ಯವಾ ಗಿತ್ತು. ಇವರು ವರ್ಷದಲ್ಲಿ ೮೯ ತಿಂಗಳು ದೇಶದಲ್ಲಿ ಎಲ್ಲ ಕಡೆಗೆ ತಿರುಗುತ್ತ ಜನರಿಗೆ ಧರ್ಮೋಪದೇಶವನ್ನು ಮಾಡುವರು. ಮತ್ತು ದಾರ್ಶನಿಕ ವಿಚಾರವನ್ನು ಮಾಡುವರು. ಅಲ್ಲಲ್ಲಿಗೆ ಪರಿವ್ರಾಜಕ ಜನರಿಗೆ ವಾಸಗೃಹಗಳು ಇರುತ್ತಿದ್ದವು, ಅವುಗಳಲ್ಲಿ ಅವರು ಧರ್ಮವಿಚಾರವನ್ನೂ ದಾರ್ಶನಿಕ ವಿಚಾರವನ್ನೂ ಮಾಡುವರು. ಈ ಆವಾಸಗೃಹಗಳ ಲ್ಲಾಗಲಿ, ಮಾರ್ಗದ ಬದಿಗಳಲ್ಲಿ, ಕಟ್ಟಿಸಿದ ಪಥಿಕಾಶ್ರಮಗಳಲ್ಲಾಗಲಿ, ಮಾರ್ಗದ ಬದಿ ಗಳಲ್ಲಿ ಕಟ್ಟಿಸಿದ ಪಥಿಕಾಶ್ರಮಗಳಲ್ಲಾಗಲಿ ಅವರು ಇಳಿಯುತ್ತಿದ್ದರು. ಸ್ತ್ರೀಯರೂ ಪರಿವ್ರಾಜಿಕೆಯರಾಗಿದ್ದರು. ಇವರು ಅವಿವಾಹಿತರಾಗಿಯೇ ಕಾಲಕಳೆಯುವರು. ಈ ಪರಿವ್ರಾಜಕರಲ್ಲಿ ಹಲವು ಪಂಗಡಗಳಿದ್ದವು. ಒಂದೊಂದು ಪಂಗಡಕ್ಕೆ ಒಬ್ಬೊಬ್ಬ ಮುಖ್ಯ ಮನುಷ್ಯನಿರುವನು. ಅವನು ಪಾಂಡಿತ್ಯದಿಂದಲೂ ಆಚರಣದಿಂದಲೂ ಎಲ್ಲರ ಭಕ್ತಿಗೆ ಪಾತ್ರವಾಗಿರುತ್ತಿದ್ದನು. ಬೌದ್ದ ಸಂಪ್ರದಾಯದ ಪರಿವ್ರಾಜಕರಿಗೆ ಶಾಕ್ಯಪುತ್ರ ಶ್ರಮಣರೆಂದು ಹೆಸರು, ಜೈನಸಂಪ್ರದಾಯದ ಪರಿವ್ರಾಜಕರಿಗೆ ನಿಗ್ರ್ರ೦ಥರೆಂದು ಹೆಸರು. ದನು. ಆತನು ಬೌದ್ದ ಮತವನ್ನು ಸ್ವೀಕರಿಸಿದ್ದನು, ಆ ಬೌದ್ಧಮತಕ್ಕೆ ಮಹಾಯಾಸವೆಂಬ ಹೆಸರನ್ನು ಕೊಟ್ಟಿದ್ದನ್ನು, ಮಹಾಯಾನ ಸಂಪ್ರದಾಯದವರು ಪೂರ್ವ ದಿಂದ ನಡೆದು ಬಂದ ಪಾಲಿಗ್ರಂಥದಲ್ಲಿರುವ ಬೌದ್ದ ಮತವನ್ನು ತಿರಸ್ಕರಿಸಿ ಅದಕ್ಕೆ ಹಿನಯಾನವೆ೦ದು ಅನ್ನ ಹತ್ತಿದರು, ಕಾಲಕ್ರಮದಿಂದ ಈ ಮಹಾ ಯಾನ ಮತವು ನೇಪಾಲ, ತಿಬೇಟ, ಮೋ೦ಗೋಲಿಯಾ, ಚೀನ, ಜಪಾನ, ಕರಿಯಾ ಮೊದಲಾದ ದೇಶ ಗಳಲ್ಲಿ ಹಬ್ಬಿತ್ತು, ಹೀನಯಾನವು ಸಿಂಹಲ, ಬ್ರಹ್ಮ, ಶ್ಯಾ ದೇಶಗಳಲ್ಲಿ ನಿಂತಿತು. ಭಾರತ ವರ್ಷದಲ್ಲಿ ಎರಡೂ ಸಂಪ್ರದಾಯಗಳು ಪ್ರಚಲಿತವಾಗಿದ್ದವು.