ಪುಟ:ಅಶೋಕ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. `

  • * * * * *

ಇದೇ ಮೇರೆಗೆ ಆಜೀವಕರೆಂಬ ಒಂದು ವರ್ಗವೂ ಇತ್ತು, ಈ ಆಜೀವಕ ವರ್ಗವು ಅಶೋಕನ ಮೊಮ್ಮಗನಾದ ದಶರಥನ ಕಾಲದ ವರೆಗೂ ಸಂಘಗಳನ್ನು ಮಾಡಿಕೊಂಡು ಇರುತ್ತಿತ್ತು. ವಾಲಿ ಅಂಗುತ್ತರನಿಕಾಯ ಎಂಬ ಪುಸ್ತಕದಲ್ಲಿ ಈ ಎಲ್ಲ ಸಂಪ್ರದಾಯಗಳ ಹೆಸರು ಉಲ್ಲೇಖಿಸಲ್ಪಟ್ಟಿದೆ. ಶಾಕ್ಯಪುತ್ರ ಶ್ರಮಣ, ನಿಗ್ರ್ರಂಥ, ಆಜೀವಕ ಇವರಲ್ಲದೆ ಮುಂಡಶ್ರಾವಕ, ಜಟಿಲಿಕ, ಮಾಗಂದಿಕ, ತ್ರಿದಂಡಿಕ, ಅವಿರುದ್ಧ ಕ, ಗೌತಮಕ, ದೇವ ಧಾರ್ಮಿಕ ಮೊದಲಾದ ಬೇರೆ ಪಂಗಡಗಳೂ ಇದ್ದವು, ಈ ಎಲ್ಲ ಪಂಗಡಗಳ ಸಂಚಾ ರಕರು ( ಪರಿವ್ರಾಜಕರು ) ಧರ್ಮ ಶ್ರವಣಮಾಡಿಸುವಾಗ ಎಲ್ಲ ವರ್ಣಗಳ ಜನರೂ ಸೇರುತ್ತಿದ್ದರು, ಮತ್ತು ಬ್ರಾಹ್ಮಣೇತರ ಜಾತಿಯ ಜನರು ಕೂಡ ಈ ಪರಿವ್ರಾಜಕರ ಮುಖ್ಯಸ್ಥರ ಸ್ಥಳದಲ್ಲಿ ನಿಯಮಿಸಲ್ಪಡುತ್ತಿದ್ದರು. ಅಶೋಕನ ಕಾಲದಲ್ಲಿ ಬೌದ್ಧಧರ್ಮಾ ವಲಂಬಿಗಳಲ್ಲಿ ಹಲವು ಸಂಪ್ರದಾಯಗಳು ಹುಟ್ಟಿದ್ದವೆಂದು ಈ ಮೊದಲೇ ಹೇಳಿದೆ ಯಷ್ಟೇ ? ಈ ಸಂಪ್ರದಾಯಗಳ ಸಂಖ್ಯೆಯು ಕ್ರಮದಿಂದ ಹೆಚ್ಚಾಗುತ್ತ ಹೋಗಿ ಅವ ೧೮ ಆದವು, ಕೆಳಗೆ ಅವುಗಳ ಪಟ್ಟಿಯನ್ನು ಕೊಟ್ಟಿದೆ. ೧ ಅರ್ಯ ಸರ್ವಾಸ್ತಿ ವಾದ (೧) ವಾತೃಪ್ರಿಯ (೧) ಮೂಲ ಸರ್ವಾ ಸ್ತಿವಾದ : ೩ ಆರ್ಯಮಹಾಸಂಗಿಕ (೨) ಕಾಶ್ ಸೀಯ (೧೧) ಪೂರ್ವಶೈಲ (4) ಮಹೀಶಾಸಕ (೧೨) ಅಪರ ಶೈಲ (೪) ಧರ್ಮಗುತ್ತೀಯ (೧೩ ) ಹೈಮವತ ( ೫ ಬಹುಶ್ರುತ (೧೪) ಲೋಕೋತ್ತರವಾದ (೬) ತಾಮ್ರಶಟೇ (೧೫ ) ಪ್ರಜ್ಞಪ್ತಿ. (೭) ವಿಭಜ್ಯವಾದ ೪ ಆರ್ಯಸ್ಥವಿರ ೨ ಆರ್ಯ ಸಮ್ಮತಿಯ (೧೬ ) ಮಹಾವಿಹಾರ (೮) ಕುರು ಕುಲ್ಲಕ (೧೭) ಜೇತವನೀಯ (F ) ಆವಂತಿಕ (೧೮) ಅಭಯ ಗಿರಿವಾಸಿ ಅಶೋಕ ನರಪತಿಯು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದನೆಂದು ಈ ಮೊದಲೇ ಹೇಳಿದೆ. ಆ ಕಾಲದಲ್ಲಿ ಜೈನಧರ್ಮವೂ ಉದಯ ಹೊಂದಿತ್ತು. ಈ ಮೊದಲೇ ಸುಪ್ರ ಸಿದ್ದ ಜೈನತೀರ್ಥಂಕರನಾದ ಮಹಾವೀರ ಸ್ವಾಮಿಯ ವೈಶಾಲಿಯ ಬಳಿಯಲ್ಲಿರುವ ಜಾವಾ ಎಂಬ ಸ್ಥಳದಲ್ಲಿ ಜನ್ನಿಸಿದ್ದನು. ಆಜೀವಕರೂ, ನಿರ್ಗ೦ಥರೂ ಇವರ 11 ಅಂಹಿಸಾಶ ಪರಮೋ ಧರ್ಮಃ ?” ಶಬ್ದವು ಎಲ್ಲ ಕಡೆಯಲ್ಲಿ ಪ್ರತಿಧ್ವನಿತವಾಗುತ್ತಿತ್ತು. ಅಶೋಕನ ಅಹಿಂಸಾಪ್ರವೃತ್ತಿಯನ್ನು ನೋಡಿ ಜೈನರು ಅಶೋಕನು ಜೈನ ನರಪತಿಯೆಂದು ಹೇಳು ತಿರುವರು.