ಪುಟ:ಅಶೋಕ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೧r೩ » ಭಿಕ್ಷುವೇಷವನ್ನು ಧರಿಸಿದ್ದನು. ಬ್ರಹ್ಮ ದೇಶದಲ್ಲಿಯೂ ಅರಸರು ಭಿಕ್ಷುವ್ರತವನ್ನು ಧರಿಸಿದ ಕಥೆಗಳು ಇತಿಹಾಸದಲ್ಲುಂಟು, ಬೋಧಾಪ್ರಾ ಎಂಬವನು ಬಿಕ್ಷುವ್ರತವನ್ನು ಧರಿಸಿ ಎಷ್ಟೋ ವರ್ಷಗಳನ್ನು ಸಂಘದಲ್ಲಿ ಕಳೆದನು. ಈ ಪದ್ಧತಿಯು ಬೌದ್ದರಲ್ಲಷ್ಟೇ ಅಲ್ಲ. ಜೈನರಲ್ಲಿಯೂ ಹಿಂದುಜನರಲ್ಲಿಯೂ ಇತ್ತೆಂಬದಕ್ಕೆ ಅನೇಕ ದೃಷ್ಟಾಂತಗಳುಂಟು. ಗುಜ ರಾಥದ ಕುಮಾರಪಾಲನೆಂಬ ಜೈನರಾಜನು ೧೨ನೇ ಶತಕದಲ್ಲಿ ಆಳಿದನು. ಇವನೂ ಜೈನ ಸಂಘನಾಯಕನೆಂಬ ಉಪಾಧಿಯನ್ನು ಧರಿಸಿ, ಬೇರೆ ಬೇರೆ ಕಾಲದಲ್ಲಿ ವಿರಕ್ತ ವ್ರತದ ದೀಕ್ಷೆಯನ್ನು ತೆಗೆದುಕೊಂಡಿದ್ದನು. ಅಶೋಕನ ರಾಜ್ಯಶಾಸನ ಪದ್ದತಿ, ಆತನ ಸಾಮಾಜಿಕ ಕಾರ್ಯಗಳು, ಶಿಕ್ಷಣ ಪ್ರಸಾರ ಧರ್ಮ ಪ್ರಕಾರ ಇವುಗಳಲ್ಲೆಲ್ಲ ಬುದ್ದ ದೇವನು ತೋರಿಸಿದ ಧರ್ಮ ಮತವನ್ನು ಹಬ್ಬಿಸುವದೇ ಆತನ ಮುಖ್ಯಧೇಯವಾಗಿತ್ತು. ಈ ಉದ್ದೇಶವನ್ನು ಕೊನೆಗಾಣಿಸುವದ ಕ್ಯಾಗಿ ಅವನು ಧರ್ಮ ಮಹಾಮಾತ್ರರನ್ನು ನಿಯಮಿಸಿದ್ದು, ಕಾಮಗಾರರಿಗೆ ಈ ಉಪದೇಶವನ್ನೇ ಕೊಟ್ಟಿದ್ದನು. .ಶಿಲಾಲಿಸಿಗಳಲ್ಲಿ ಇದನ್ನೇ ಕೊರೆಸಿದ್ದನು. ಅಶೋ ಕನಿಗೆ ಬೌದ್ಧ ಧರ್ಮದಲ್ಲಿ ಅತ್ಯಂತಾನುರಾಗವಿದ್ದರೂ, ಅನ್ಯಧರ್ಮಗಳ ಮೇಲೆ ಔದಾಸೀ ನ್ಯವನ್ನು ಇಲ್ಲವೆ ತಿರಸ್ಕಾರವನ್ನು ತೋರಿಸುತ್ತಿರಲಿಲ್ಲ. ಆತನ ಧರ್ಮವು ಬಹು ಉದಾ ರವೂ ನೀತಿಪೂರ್ಣವೂ ಆಗಿತ್ತು. ಆತನ ರಾಜ್ಯಶಾಸನ ಪದ್ಧತಿಯು ಇಂಥ ಉದಾರಧ ರ್ಮದ ತಳಹದಿಯ ಮೇಲೆ ಸ್ಥಾಪಿಸಲ್ಪಟ್ಟಿತ್ತು. ಆತನ ಪ್ರಜಾವಾತ್ಸಲ್ಯವೂ, ಕರುಣಾಪೂ ರ್ಣವಾದ ಹೃದಯವೂ, ನಿಸ್ಪೃಹವಾದ ಉದಾರಭಾವವೂ, ಆತನ ಅಮೌಲ್ಯವಾದ ಅನು ಶಾಸನಗಳೂ, ಯಾವಾಗಲೂ ಎಲ್ಲ ಅರಸುಗೂ ಅನುಕರಣಾರ್ಹವಾಗಿರುವವು. ಒಬ್ಬನೇ ರಾಜನೂ, ಭಿಕ್ಷವೂ, ಚಕ್ರವರ್ತಿಯೂ, ಸಾಧುವೂ ಆದಂಥ ಕಾತ್ರ, ಬ್ರಾಹ್ಮಣ್ಯ ಶಕ್ತಿ ಗಳ ಸಮಾವೇಶ ಉಳ್ಳಂಥ ನರಪತಿಯು ಐತಿಹಾಸಿಕ ಯುಗದಲ್ಲಿ ಒಬ್ಬ ಅಶೋಕನು ಮಾತ್ರ ಇರುವನು. ಈತನು ರಾಜಕಾರ್ಯಗಳಲ್ಲಿ ಅತ್ಯಂತ ತತ್ಪರನಿದ್ದನು. ಒಂದೆಡೆಗೆ ಆತನು ಪ್ರತಿ ವೇದಕರ ಸುದ್ದಿಗಳನ್ನು ಕೇಳುವದು, ಎಲ್ಲ ಕಾಲದಲ್ಲಿ ಪ್ರಜೆಗಳ ವಿಜ್ಞಾನ ನೆಯನ್ನು ಕೇಳಿಕೊಳ್ಳುವದು, ರಾಜೂಕ, ಮಹಾಮಾತ್ರ, ಧರ್ಮ ಮಹಾಮಾತ್ರ ಮೊದ ಲಾದವರ ಮೇಲೆ ತೀಕ್ಷ, ದೃಷ್ಟಿಯನ್ನಿಟ್ಟು ರಾಜ್ಯ ಶಾಸನ ಕಾರ್ಯಗಳನ್ನು ನಿರ್ಣಯಿ ಸುವದು, ಪ್ರಜೆಗಳ ಅನುಕೂಲತೆಗಾಗಿ ಪ್ರಶಸ್ತವಾದ ರಾಜಮಾರ್ಗಗಳನ್ನು ಮಾಡಿಸು ವದು, ಜಲಾಶಯಗಳನ್ನು ತೋಡಿಸುವದು, ಕಾಮದಾರರನ್ನು ನಿಯಮಿಸುವದು, ಯುದ್ದಗ ಳಿಗೋಸ್ಕರ ಅಗಣಿತ ಸೇನೆಯನ್ನೂ ಯುದ್ಧ ಸಾಮಗ್ರಿಯನ್ನೂ ಸಜ್ಜು ಮಾಡುವದು ಈ ಕೆಲ ಸಗಳಲ್ಲಿ ತೊಡಗಿರುತ್ತಿದ್ದನು. ಇನ್ನೊಂದೆಡೆಗೆ ಆ ದೇವಪ್ರಿಯ ನರಪತಿಯು ಉಪಗುಪ್ತ ನೊಡನೆ ತೀರ್ಥಯಾತ್ರೆ ಮಾಡುವದು, ನಾಲ್ಕೂ ಕಡೆಗೆ ಗಿರಿಗಳ ಮೇಲೆ ಬೌದ್ಧ ಧರ್ಮದ ಉಪದೇಶಗಳನ್ನು ಕೊರೆಯಿಸುವದು, ಸಂಸಾರತ್ಯಾಗಿಯಾದ ಭಿಕ್ಷುವಿನಂತೆ ಯಾವಾಗಲೂ 20