ಪುಟ:ಅಶೋಕ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧wa Ahhhhhhhhhht h "nthr\ hhhhhr /sh An ೧೧೧೧r /AAAAp೧೧೧೧೧೧೧೧,೧೯ - Alt+A <ht೧ •ANAnonnec ಕಾರುವಾಕಿ ಎಂಬ ಇನ್ನೊಬ್ಬ ಅರಸಿಯ ಉಲ್ಲೇಖವುಂಟು, ಏನೇ ಇರಲಿ, ಅಶೋಕ ನಿಗೆ ಬಹುಜನ ಹೆಂಡಿರಿದ್ದರೆಂಬದು ಇದರಿಂದ ಸ್ಪಷ್ಟವಾಗುವದು. ಅಶೋಕನಿಗೆ ಎಷ್ಟು ಜನ ಮಕ್ಕಳಿದ್ದರೆಂಬದನ್ನು ನಿರ್ಣಯಿಸುವದು ಕಠಿಣವು, ಅಶೋಕಾವದಾನದಲ್ಲಿ ಕುನಾ ಲನೆಂಬ ಒಬ್ಬ ಮಗನ ಉಲ್ಲೇಖವುಂಟು, ಅಶೋಕನಿಗೆ ಜಾಲೂಕನೆಂಬ ಒಬ್ಬ ಮಗನೂ ಇದ್ದನು. ಅವನು ಒಂದು ಕಾಲದಲ್ಲಿ ಕಾಶ್ಮೀರದ ಕಾರಭಾರಿಯಾಗಿದ್ದನು. ಆತನ ಆರ ಸಿಯ ಹೆಸರು ಈಶಾನೀದೇವಿ, ಅಶೋಕನ ಚಾರುಮತಿ ಎಂಬ ಮಗಳ ಉಲ್ಲೇಖವು ಹಲವು ಕಡೆಗೆ ಇರುವದು. ಮಹಾವಂಶದಲ್ಲಿ ಮಹೇಂದ್ರನೆಂಬ ಮಗನ, ಮತ್ತು ಸಂಘ ಮಿತ್ರೆಯೆಂಬ ಮಗಳ ಉಲ್ಲೇಖವಿರುವದು, ಉಜ್ಜಯಿನಿಯಲ್ಲಿ ಹುಟ್ಟಿದ್ದರಿಂದ ಉಜ್ಞೆ ನಿಯ ಎಂಬ ಹೆಸರಿಟ್ಟ ಒಬ್ಬ ಮಗನ ಉಲ್ಲೇಖವೂ ಇರುವದು. ಆತನು ಮಹೇಂದ್ರನ ತಮ್ಮನು. ಅಶೋಕಾನದಾನದಲ್ಲಿ ಮಹೇಂದ್ರನು ಅಶೋಕನ ತಮ್ಮನೆಂದು ಹೇಳಿದೆ. ತರುಣನಾದ ಮಹೇಂದ್ರನು ದುರಾಚಾರಿಯೂ, ಬಹಳ ವೆಚ್ಚದವನೂ ಆಗಿದ್ದನು. ಆತನು ಅರಸನಂತೆ ಉಡಿಗೆ ತೊಡಿಗೆಗಳನ್ನು ಧರಿಸುತ್ತಿದ್ದನು. ಒಂದು ಸಾರೆ ಮಂತ್ರಿಗಳು ಆತನು ಮಾಡಿದ ಪ್ರಜೋಪದ್ರವವನ್ನು ಅರಸನೆದುರಿಗೆ ಹೇಳಿದರು. ಆಗ ಅಶೋಕನು ಮಹೇಂದ್ರನನ್ನು ಕರೆದು-« ಪ್ರಜೆಗಳನ್ನು ಕಾಪಾಡುವದು ಅರಸನ ಕೆಲಸವು, ನಾನು ನಿನ್ನ ಅಪರಾಧಕ್ಕಾಗಿ ನಿನಗೆ ಶಿಕ್ಷೆಯನ್ನು ವಿಧಿಸಿದರೆ ಸ್ವರ್ಗವಾಸಿ ಪಿತೃಗಣವು ನನಗೆ ಶಾಪಕೊಡುವದು; ಇನ್ನು ನಿನ್ನ ಅಪರಾಧವನ್ನು ಕ್ಷಮಿಸಿದರೆ ಪ್ರಜೆಗಳು ನನ್ನಲ್ಲಿ ಅಸಂತು ಸ್ಮ'ರಾಗುವರು. ನೀನು ನನ್ನ ಸೋದರನಾಗಿದ್ದು ನನ್ನ ಪ್ರೀತಿ ವಿಶ್ವಾಸಗಳಿಗೆ ಎರವಾ ಗುವ ಕೆಲಸವನ್ನು ಏಕೆ ಮಾಡುವೆ? ಸರಿಯಾಗಿ ವಿಚಾರಮಾಡಿ ನಿನಗೆ ಶಿಕ್ಷೆಯನ್ನು ಕೊಡುವೆನು ” ಎಂದು ಹೇಳಿದನು. ಮಹೇಂದ್ರನು ಅಶೋಕನ ಮಾತನ್ನು ಕೇಳಿ ತಾನು ದೊಡ್ಡ ತಪ್ಪು ಮಾಡಿದೆನೆಂದು ಒಪ್ಪಿ ತಪ್ಪಿಗೆ ತಕ್ಕ ಶಿಕ್ಷೆಯನ್ನು ಹೊಂದುವ ಮೊದಲು ೬ ದಿವಸಗಳ ಅವಧಿಯನ್ನು ಬೇಡಿಕೊಂಡನು. ರಾಜನು ಅದಕ್ಕೆ ಒಪ್ಪಿ ಆತನನ್ನು ಒಂದು ಕತ್ತಲೆಯ ಕೋಣೆಯಲ್ಲಿ ಸೆರೆಹಾಕಿದನು, ಮರು ದಿವಸ ಬೆಳಗ್ಗೆ ಪಹರೆಯವನು ಹೊರ ಗಿನಿಂದ-ಒಂದು ದಿವಸವು ಹೋಯಿತು. ೬ ದಿವಸಗಳುಳಿದವು ಎಂದು ಒದರಿ ಹೇಳಿ ದನು, ಪ್ರತಿದಿವಸ ಬೆಳಗ್ಗೆ ಇದೇ ಮೇರೆಗೆ ಹೋದ ಮತ್ತು ಉಳಿದ ದಿವಸಗಳನ್ನು ತಿಳಿ ಸುತ್ತಿದ್ದನು. ಪಶ್ಚಾತ್ತಾಪದಿಂದ ಮಹೇಂದ್ರನು ಮರುಗಿದನು. ಆತನು ಹಗಲಿರುಳು ಸಾವಿನ ಚಿಂತೆಯಲ್ಲಿಯೇ ಇದ್ದನು. ಈ ಮೇರೆಗೆ ನಿರಂತರವಾಗಿ ಜಗತ್ತಿನ ಅನಿತ್ಯತ್ವ. ವನ್ನು ಧ್ಯಾನಿಸುತ್ತಿದ್ದ ಮಹೇಂದ್ರನಿಗೆ ೭ನೆಯ ದಿವಸ ಅರ್ಹತ್ಪದವು ಪ್ರಾಪ್ತವಾಯಿತು' ಅಶೋಕನು ಆತನ ಆ ಸ್ಥಿತಿಯನ್ನು ನೋಡಿ ನೀನು ಧರ್ಮದ ಪ್ರಭಾವದಿಂದ ತಪ್ಪಿನಿಂದ ಬಿಡುಗಡೆ ಹೊಂದಿದೆ, ಈಗ ಅರಮನೆಗೆ ಬಾ ಎಂದು ಹೇಳಿದನು. ಆಗ ಮಹೇಂದ್ರನು ಮಹಾರಾಜರೇ, ಸೃಥಿವಿಯ ಕ್ಷಣಿಕ ಸುಖವು ನನಗೆ ವಿಷದಂತೆ ತೋರಹತ್ತಿದೆ, ನಾನು