ಪುಟ:ಅಶೋಕ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

`ಅಶೋಕ ಅಥವಾ ಪ್ರಿಯದರ್ಶಿ. ೧೭ - - - - ** *ಳ ಸಗಳವರೆಗೆ ಅರಸೊತ್ತಿಗೆಯನ್ನ ನುಭವಿಸು, ಬಳಿಕ ನಿನಗೆ ಮರಣ ಶಿಕ್ಷೆಯು ಕೊಡಲ್ಪಡು ವದು ಎಂದು ಹೇಳಿದನು. ವಿಗತಾಶೋಕನು ಪ್ರಾಣಭಯದಿಂದ ಕಂಗೆಟ್ಟು ಸ್ಥವಿರಯಶನ ಬಳಿಯಲ್ಲಿ ಧರ್ಮದ ಶಾಂತಿದಾಯಕವಾದ ತತ್ವಗಳನ್ನು ಕೇಳಿ ಬೌದ್ಧ ಧರ್ಮವನ್ನು ಆಶ್ರ ಯಿಸಿದನು. ಬಳಿಕ ಆತನು ಭಿಕ್ಷುವ್ರತವನ್ನು ಸ್ವೀಕರಿಸುತ್ತೇನೆಂದು ಅಶೋಕನ ಒಪ್ಪಿಗೆ ಯನ್ನು ಕೇಳಿದನು. ಅಶೋಕನು ದುಃಖದಿಂದ ಒಪ್ಪಿಗೆಯನ್ನಿತ್ತನು. ಭಿಕ್ಷುಗಳ ಕಠೋರ ನಿಯಮಗಳನ್ನು ಪಾಲಿಸುವದಾಗಲಾರದೆಂದು ಅಶೋಕನು ಅರಮನೆಯಲ್ಲಿಯೇ ಅವನಿ ಗೊಂದು ಕುಟೀರವನ್ನು ಹಾಕಿಸಿಕೊಟ್ಟನು. ವಿಗತಾಶೋಕನು ಆ ಸ್ಥಳವನ್ನು ಬಿಟ್ಟು ಕುಕ್ಕುಟಾರಾಮಕ್ಕೆ ಹೊರಟು ಹೋದನು. ಕೆಲವು ದಿವಸ ಅಲ್ಲಿ ಇದ್ದು ಮುಂದೆ ವಿದೇ ಹವಿಹಾರಕ್ಕೆ (ಈಗಿನ ತಿರಹುತ) ಹೋಗಿ ಅರ್ಹತ್ಪದವನ್ನು ಹೊಂದಿದನು, ಮುಂದೆ ಚೀರ ಕೌಪೀನಧಾರಿಯಾಗಿ ವಿಗತಾಶೋಕನು ಪಾಟಲಿಪುತ್ರಕ್ಕೆ ಬರಲು ಅಶೋಕನು ಆತನಿಗೆ ಬಹಳ ಸತ್ಕಾರಮಾಡಿದನು, ಅಲ್ಲಿಂದ ಮೇರೆಯ ಪ್ರದೇಶಕ್ಕೆ ಹೋಗಿ ಅಲ್ಲಿ ಬೇರೆಬಿದ್ದನು. ಅಶೋಕನು ಅವನಿಗೆ ಔಷಧೋಪಚಾರಗಳ ವ್ಯವಸ್ಥೆಯನ್ನು ಮಾಡಿಸಲು ಅವನು ಆರೋ ಗ್ಯವನ್ನು ಹೊಂದಿದನು. ವಂಗದೇಶದಲ್ಲಿ ಪೌಂಡ್ರವರ್ಧನನೆಂಬ ಗ್ರಾಮದಲ್ಲಿ ಒಬ್ಬ ಬ್ರಾಹ್ಮಣನು ಬುದ್ಧ ದೇವನ ಮೂರ್ತಿಯನ್ನು ಒಡೆದನೆಂಬ ಸುದ್ದಿಯನ್ನು ಕೇಳಿ ಅಶೋಕನು ಕ್ರೋಢಾಂಧನಾ ದನು. ರಾಜನ ಅಪ್ಪಣೆಯಿಂದ ಆ ಊರಲ್ಲಿ ೧೮೦ ಜನರು ಕೊಲ್ಲಲ್ಪಟ್ಟರೆಂದು ಪ್ರವಾದ ವುಂಟು, ಕೆಲವು ದಿವಸಗಳ ತರುವಾಯ ಪಾಟಲಿಪುತ್ರದಲ್ಲಿ ಒಬ್ಬ ವಿರಕ್ತ ಬಾಹ್ಮಣನು ಬುದ್ಧನ ಮೂರ್ತಿಯನ್ನು ಒಡೆದ ಸುದ್ದಿಯನ್ನು ಕೇಳಿ ಅಶೋಕನು ಆ ಬ್ರಾಹ್ಮಣನ ಬಂಧು ಬಳಗವನ್ನೆಲ್ಲ ಜೀವಂತ ಸುಡಬೇಕೆಂದು ಅಪ್ಪಣೆಮಾಡಿದನು. ಯಾವನು ಆ ಬ್ರಾಹ್ಮಣನ ತಲೆಗಡಿದು ತಲೆಯನ್ನು ತಂದು ತೋರಿಸುವನೋ ಅವನಿಗೆ ಒಂದು ದೀನಾ ರವು ಇನಾಮಾಗಿ ಕೊಡಲ್ಪಡುವದು ಎಂದು ಡಂಗುರ ಹೊಡೆಯಿಸಿದನು. ಈ ಭಯಂಕರ ವಾದ ಅಪ್ಪಣೆಯಾದ ಕೆಲವು ದಿವಸಗಳ ತರುವಾಯ ಮುಂಡಿತಮಸ್ತಕನಾಗಿ ಚೀರಗ ಳನ್ನು ಧರಿಸಿದ ವಿಗತಾಶೋಕನು ಒಬ್ಬ ಗೋವಳಿಗನ ಮನೆಯಲ್ಲಿ ಇಳಿದುಕೊಂಡಿದ್ದನು. ಆ ಗೋವಳಿಗನ ಹೆಂಡತಿಯು ಇವನನ್ನು ನೋಡಿ ಈತನೇ ಬುದ್ದ ಮೂರ್ತಿಯನ್ನು ಒಡೆದ ಬ್ರಾಹ್ಮಣನಾಗಿರಬೇಕೆಂದು ನಿಶ್ಚಯಿಸಿ ಗಂಡನಿಗೆ ಈತನ ತಲೆಯನ್ನು ಕೊಯ್ದು ಒಯ್ದು ರಾಜನಿಗೆ ತೋರಿಸಿದರೆ ಹೆಚ್ಚಿನ ಇನಾಮು ದೊರೆಯುವದೆಂದು ಹೇಳಿದಳು. ಆಗ ಆ ಗೋವಳಿಗನು ಮರೆಯಲ್ಲಿ ವಿಗತಾಶೋಕನ ಕೊಲೆಮಾಡಿ ಆತನ ತಲೆಯನ್ನು ರಾಜಸಭೆಗೆ' ಒಯ್ದು ಇನಾಮನ್ನು ಕೇಳಿದನು. ಅಶೋಕನು ತನ್ನ ತಮ್ಮನ ತಲೆಯನ್ನು ನೋಡಿ ಬಹಳ ದುಃಖಬಟ್ಟನು, ಮತ್ತು ಕೂಡಲೆ ಆ ನಿಷ್ಕರುಣವಾದ ಅಪ್ಪಣೆಯನ್ನು ರಹಿತಪಡಿಸಿದನು, ಆ ದಿವಸದಿಂದ ರಾಜ್ಯದಲ್ಲಿ ಮರಣ ಶಿಕ್ಷೆಯು ರಹಿತವಾಯಿತು.