ಪುಟ:ಅಶೋಕ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಅಶೋಕ ಅಥವಾ ಪ್ರಿಯದರ್ಶಿ, 222 * * * * * * * * * * * * * * * * * * • • • • ••, - - * --- .. --• • • • ಯುವರಾಜನಾದ ತಿಷ್ಯನ ವಿಷಯವಾಗಿಯೂ ಒಂದು ಕಥೆಯು ಪ್ರಚಲಿತವಾಗಿ ರುವದು, ಪಾಠಕರ ತಿಳುವಳಿಕೆಗಾಗಿ ಅದನ್ನು ಇಲ್ಲಿ ಕೊಟ್ಟಿದೆ, ಒಮ್ಮೆ ಯುವರಾಜತಿ ಷ್ಯನು ಅರಣ್ಯದಲ್ಲಿ ಸಂಚರಿಸುವಾಗ ಆನಂದದಿಂದ ಸಂಚರಿಸುವ ಒಂದು ಚಿಗರೆಗಳ ಗುಂಪನ್ನು ನೋಡಿದನು. ಆಗ ಅವನ ಮನಸ್ಸಿಗೆ ಈ ಚಿಗರೆಗಳು ಅಡವಿಯಲ್ಲಿ ಹುಲ್ಲು ಕಂಟಿಗಳನ್ನು ತಿಂದುಕೊಂಡು ನಿಶ್ಚಿಂತವಾಗಿ ಹಾರಾಡುತ್ತಿವೆ; ಆದರೆ ಮನೋಹರವಾದ ವಿಹಾರದಲ್ಲಿದ್ದು ಕೊಂಡು ಒಳ್ಳೆಯ ಆಹಾರವನ್ನುಂಡು ಭಿಕ್ಷುಗಳು ವಿನೋದವಾಗಿ ಯಾಕೆ ಕಾಲಕಳೆಯುವದಿಲ್ಲ ? ಎಂದು ಅನಿಸಿತು. ಮನೆಗೆ ಬಂದು ತನ್ನ ಮನಸ್ಸಿನಲ್ಲಿ ಬಂದ ವಿಚಾರವನ್ನು ಅಣ್ಣನಾದ ಮಹಾರಾಜನಿಗೆ ಹೇಳಿದನು. ಅಶೋಕನು ಅದನ್ನು ಕೇಳಿ ನಾನು ನಿನಗೆ ಏಳು ದಿನಗಳವರೆಗೆ ಈ ವಿಶಾಲವಾದ ಸಾಮ್ರಾಜ್ಯದ ಅರಸೊತ್ತಿಗೆಯನ್ನು ಕೊಟ್ಟಿದ್ದೇನೆ. ಏಳುದಿವಸಗಳ ತರುವಾಯ ನಿನ್ನ ಶಿರಸ್ಸೇದವಾಗುವದು ಎಂದು ಹೇಳಿ ಅವನಿಗೆ ಪಟ್ಟಾಭಿಷೇಕ ಮಾಡಿಸಿದನು. ಏಳುದಿವಸಗಳಾದ ತರುವಾಯ ಅಶೋಕನು ಯುವರಾಜನನ್ನು ನೋಡಿ ನೀನು ಇಷ್ಟೊಂದು ಸೊರಗಿದ ಕಾರಣವೇನೆಂದು ಕೇಳಿ ದನು. ಆಗ ಆತನು ಮೃತ್ಯುಭಯದಿಂದ ನನ್ನ ಶರೀರಕ್ಕೆ ಈ ಅವಸ್ಥೆಯಾಯಿತೆಂದು ಹೇಳಿ ದನು. ಆಗ ಅಶೋಕನು-ಏಳು ದಿನಗಳಾದ ಬಳಿಕ ಮರಣವೊದಗುವದೆಂಬ ಅಂಜಿಕೆ ಯಿಂದ ನೀನು ವಿನೋದದಿಂದಿರಲಿಲ್ಲ, ಆದರೆ ಯಾವಾಗಲೂ ಎಲ್ಲ ವಸ್ತುಗಳ ನಶ್ವರತೆ ಯನ್ನು ಧ್ಯಾನಿಸುತ್ತಿರುವ ಭಿಕ್ಷುಗಳು ತುಚ್ಚವಾದ ವಿನೋದದಲ್ಲಿ ಹೇಗೆ ಕಾಲಕಳೆಯ ಬೇಕು. ಎಂದು ಅಂದನು. ತಿಷ್ಯನು ಇದನ್ನು ಕೇಳಿ ದಿವ್ಯಜ್ಞಾನವನ್ನು ಹೊಂದಲರ್ಹ ನಾದನು. ಬಳಿಕ ಒಂದು ದಿವಸ ತಿಷ್ಯನು ವನಕ್ಕೆ ಹೋಗಿದ್ದನು. ಅಲ್ಲಿ ಗಿಡದ ಬುಡ ದಲ್ಲಿ ಒಬ್ಬ ಅರ್ಹ೦ತನು ಕುಳಿತಿದ್ದನು. ಒಂದು ಕಾಡಾನೆಯು ಅವನ ಬದಿಯಲ್ಲಿ ನಿಂತು ಮರದ ಟೊಂಗೆಯಿಂದ ಆತನಿಗೆ ಗಾಳಿಯ ಹಾಕುತ್ತಿತ್ತು, ಇದನ್ನು ನೋಡಿ ಯುವರಾ ಜನು ಬೆರಗಾದನು. ಈ ಅರ್ಹ೦ತನ ಹೆಸರು ಮಹಾಧರ್ಮರಕ್ಷಿತನು. ಆವಾಗ ತಿಮ್ಮನು ತಾನೂ ಈ ವಿರಕನಂತೆ ವನದಲ್ಲಿದ್ದು ಯಾವಾಗ ಶಾಂತಿಯನ್ನು ಹೊ೦ದೇನೆಂದು ಆಲೋ ಚಿಸಹತ್ತಿದನು. ಮಹಾಧರ್ಮರಕ್ಷಿತನು ಯುವರಾಜನ ಮನಸ್ಸಿನಲ್ಲಿ ಧರ್ಮಬೀಜವನ್ನು ಹುಟ್ಟಿಸಬೇಕೆಂದು ಒಂದು ಅಲೌಕಿಕ ಶಕ್ತಿಯನ್ನು ತೋರ್ಪಡಿಸಿದನು. ಆ ಅರ್ಹ೦ತನು ಅಂತರಿಕ್ಷಮಾರ್ಗದಿಂದ ಹೋಗಿ ಅಶೋಕಾರಾಮದಲ್ಲಿದ್ದ ಸರೋವರದಲ್ಲಿ ಕುಳಿತಿರುವ ದನ್ನು ಶಿಷ್ಯನು ಕಂಡನು, ಆ ಮಹಾಪುರುಷನ ಈ ಅಲೌಕಿಕ ಕೃತಿಯನ್ನು ನೋಡಿ ಕೂಡಲೆ ಭಿಕ್ಷುವ್ರತವನ್ನು ಸ್ವೀಕರಿಸಬೇಕೆಂದು ನಿಶ್ಚಯಿದನು. ಅಶೋಕ ಮಹಾರಾಜನೂ ಅದಕ್ಕೆ ಒಪ್ಪಿಗೆಯನ್ನಿತ್ತನು, ತಿಷ್ಯನು ಸಂಘದ ಆಶ್ರಯಮಾಡಲು ಅಶೋಕನು ಮಹೇಂ ದ್ರನಿಗೆ ಯುವರಾಜ ಪಟ್ಟ ವಕಟ್ಟಬೇಕೆಂದು ಆಲೋಚಿಸಿದ್ದನು. ಸಿಂಹಲಕ್ಕೆ ಬೋಧಿದ್ರು ಮವನ್ನು ಕಳಿಸಿ ೧೨ ವರ್ಷಗಳಾದ ತರುವಾಯ ಆತನ ಮುಖ್ಯ ಪಟ್ಟದರಸಿಯಾದ ಅಸಂಧಿಮಿತ್ರೆಯು ಪರಲೋಕವನ್ನೈದಿದಳು.