ಪುಟ:ಅಶೋಕ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧ - * * * ೪ • - - - - - - - - • . ಕುನಾಲನ ಕಥೆ. ಮುಖ್ಯರಾಣಿಯಾದ ಅಸಂಧಿಮಿತ್ರೆಯು ಮರಣಹೊಂದಿದ ತರುವಾಯ ಮುದುಕ ನಾದ ಅಶೋಕನು ತಿಷ್ಯರಕ್ಷಿತೆಯನ್ನು ಮದುವೆಯಾದನು, ತಿಷ್ಯರಕ್ಷಿತೆಯು ಚಪಲೆ ಯಾಗಿ ಒಳ್ಳೆಯ ನಡೆವಳಿಯಿಲ್ಲದವಳಿದ್ದಳೆಂದು ವರ್ಣಿಸಲ್ಪಟ್ಟಿದೆ. ಸವತಿಯ ಮಗನಾದ ಅತಿಸುಂದರ ರೂಪವುಳ್ಳ ಕುನಾಲನನ್ನು ನೋಡಿ ತಿಷ್ಯರಕ್ಷತೆಯ ಮನುಸ್ಸು ಚಂಚಲವಾ ಯಿತು. ಅವಳು ಒಂದು ದಿವಸ ಏಕಾಂತದಲ್ಲಿ ಕುನಾಲನನ್ನು ಕರೆದು ತನ್ನ ಮನೋಭಾವ ವನ್ನು ಹೇಳಿದಳು, ಧಾರ್ಮಿಕನಾದ ರಾಜಪುತ್ರನು ಮಲತಾಯಿಯ ಅಸಂಗತವಾದ ಭಾಷ ಣವನ್ನು ಕೇಳಿ ಬೆರಗುವಡೆದು ಅಂಜಿದನು. ಇದರಿಂದ ತಿಷ್ಯರಕ್ಷಿತೆಯು ಸಿಟ್ಟಿಗೆದ್ದು ಆತನ ಸರ್ವಸ್ವನಾಶ ಮಾಡುವ ನಿಶ್ಚಯ ಮಾಡಿದಳು. , ತಿಷ್ಯರತೆಯು ಆ ಬಳಿಕ ಮಹಾರಾಜನ ಒಲವಿನಂತೆ ಆತನನ್ನು ಸಂತೋಷಬಡಿ ಸುವದರಲ್ಲಿ ತೊಡಗಿದಳು. ಒಂದು ದಿನ ಅವಳು ಒಳ್ಳೆಯ ಸಮಯವನ್ನು ನೋಡಿ ಕುನಾ ಲನನ್ನು ತಕ್ಷಶಿಲೆಯ ಕಾರಭಾರಿಯನ್ನಾಗಿ ಮಾಡಬೇಕೆಂದು ಪ್ರಸ್ತಾವ ತೆಗೆದಳು. ಅದಕ್ಕೆ ಅರಸನು ಒಪ್ಪಿ ಮಗನನ್ನು ಕರೆದು ನೀನು ತಕ್ಷಶಿಲೆಯ ಕಾರಭಾರವನ್ನು ಸಾಗಿಸು, ನನ್ನ ಮೊಹರು ಇದ್ದ ಬರಹವು ನನ್ನ ಅಪ್ಪಣೆಯೆಂದು ತಿಳಿ ಎಂದು ಹೇಳಿ ಕಳುಹಿದನು. ಕುನಾ ಲನು ರಾಜನ ಅಪ್ಪಣೆಯಿಂದ ತಕ್ಷಶಿಲೆಗೆ ಹೊರಟು ಹೋದನು. ಕೆಲವು ತಿಂಗಳು ಹೋದ ಬಳಿಕ ತಿಷ್ಯರಕ್ಷಿತೆಯು ಮಂತ್ರಿಗಳನ್ನು ಕರೆದು ರಾಜನ ಸ್ವಾಕ್ಷರ ( ಸಹಿ ) ವುಳ್ಳ ಒಂದು ಕೃತ್ರಿಮ ಲೇಖವನ್ನು ತಕ್ಷಶಿಲೆಗೆ ಕಳುಹಿದಳು. ಆ ಲೇಖ ದಲ್ಲಿ ಕುನಾಲನ ಕಣ್ಣುಗಳನ್ನು ಕಿತ್ತಿ ಆತನನ್ನೂ ಆತನ ಹೆಂಡತಿಯನ್ನೂ ಪರ್ವತಪ್ರದೇಶ ದಲ್ಲಿ ಬಿಟ್ಟು ಬರಬೇಕು, ಅದರಿಂದ ಅವನು ಸತ್ತು ಹೋಗಬೇಕು; ಎಂಬ ಅಭಿಪ್ರಾಯವಿತ್ತು. ಅಶೋಕನು ಮಲಗಿದಾಗ ಅರಸನ ಮೊಹರನ್ನೊತ್ತಿ ಆ ಪತ್ರವನ್ನು ತಕ್ಷಶಿಲೆಗೆ ಕಳುಹಿ ದ್ದಳು. ತಕ್ಷಶಿಲೆಯ ಮಂತ್ರಿಗಳು ಈ ಭಯಂಕರ ಪತ್ರವನ್ನೋದಿ ಬೆರಗುವಡೆದು ಮುಂದು ಗಾಣದಾದರು. ಅವರು ರಾಜಪುತ್ರನಾದ ಕುನಾಲನಿಗೆ ಎಲ್ಲ ವೃತ್ತಾಂತವನ್ನು ಹೇಳಿದರು. ಪಿತೃಭಕ್ತನಾದ ಕುನಾಲನು ರಾಜಾಜ್ಞೆಯನ್ನು ಪಾಲಿಸುತ್ತೇನೆಂದು ಅಂದನು. ಆಗ ಅವರು ಈ ಅಪ್ಪಣೆಯ ಅಭಿಪ್ರಾಯವನ್ನು ಮಹಾರಾಜರು ತಿಳಿದಿರಲಾರರು, ನಾವು ಮಹಾ ರಾಜರಿಗೆ ಈ ಪತ್ರದ ಅಭಿಪ್ರಾಯವನ್ನು ತಿಳಿಸುವೆವು, ಅದರ ಉತ್ತರವು ಬರುವವರೆಗೆ ತಾವು ಕಾರಾಗೃಹದಲ್ಲಿ ಇರಬೇಕು ಎಂದು ಆಪ್ತಾಲೋಚನೆ ಹೇಳಿದರು. ಕುನಾಲನು ಅವರ ಮಾತನ್ನು ಕೇಳಿ ಈ ಪತ್ರದ ಮೇಲೆ ರಾಜನ ಮೊಹರು ಒತ್ತಲ್ಪಟ್ಟಿದೆ; ಇದೀಗ ನಮ್ಮ ತಂದೆಯ ಅಪ್ಪಣೆಯು ಎಂದು ಹೇಳಿ ಕೊಲೆಗಡಿಕರನ್ನು ಕರೆಸಿ ತನ್ನ ಕಣ್ಣುಗಳನ್ನು ಕಿತ್ತ ಹೇಳಿದನು. ಕಣ್ಣು ಹೋದಬಳಿಕ ಕುನಾಲನು ತನ್ನ ಹೆಂಡತಿಯಾದ ಕಾಂಚನ ಮಾಲೆಯ ಕೈ ಹಿಡಿದುಕೊಂಡು ದಾರಿಯಲ್ಲಿ ಭಿಕ್ಷೆ ಬೇಡುತ್ತ ತಿರುಗಾಡಹತ್ತಿದನು. ಕೊನೆಗೆ