ಪುಟ:ಅಶೋಕ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܗܶ ಅಶೋಕ ಅಥವಾ ಪ್ರಿಯದರ್ಶಿ ••• . . . . .•..•..•..•••••••.. ---- ...' •• .ruve.www... ಆತನು ಪಾಟಲಿಪುತ್ರಕ್ಕೆ ಬಂದನು. ಒಂದುದಿವಸ ದಾರಿದ್ರದುಃಖದಿಂದ ಕಂಗೆಟು ಅಯ್ಯೋ ನಾನು ಅರಸುಮಗನಿದ್ದೆನು, ಈಗ ಭಿಕ್ಷುಕನಾಗಿರುವೆನು, ಯಾರೋ ನನ್ನ ಮೇಲೆ ಏನೋ ಒಂದು ಇಲ್ಲದ ಅಪವಾದವನ್ನು ಹೊರಿಸಿ ನನಗೆ ಈ ಅವಸ್ಥೆಯನ್ನು ತಂದಿರು ವರು, ಈ ಕಷ್ಟವನ್ನಿ ನ್ನು ತಾಳಲಾರೆನು, ನಾನು ತಂದೆಯ ಎದುರಿಗೆ ಈ ವರ್ತಮಾನ ವನ್ನ ರುಹಿ ಇದರ ಪ್ರತೀಕಾರಮಾಡುವೆನು ಎಂದು ಗೋಳಿಟ್ಟನು. ಒಮ್ಮೆ ಕುನಾಲನು ರಾಜಾಂತಃಪುರದಲ್ಲಿ ಪ್ರವೇಶಿಸಿ ಇಂಪಾದ ದನಿಯಿಂದ ಕೊಳಲಿನಲ್ಲಿ ಗಾಯನಮಾಡಹತ್ತಿ ದನು, ಅರಸನು ತಾನಿದ್ದ ಸ್ಥಳದಿಂದಲೇ ಈ ಇಂಪಾದ ಕೊಳಲಿನ ದನಿಯನ್ನು ಕೇಳಿ ಬಾಲ್ಯದಲ್ಲಿಯೇ ಕೊಳಲೂದುವದರಲ್ಲಿ ಅತಿ ನಿಪುಣನಾಗಿದ್ದ ಕುನಲನನ್ನು ನೆನೆಸಿ ಕೊಂಡು ಕೂಡಲೆ ಆ ಕೊಳಲೂದುವನನ್ನು ತನ್ನ ಬಳಿಗೆ ಕರೆತರುವದಕ್ಕೆ ಪಹರೆಯವ ರನ್ನು ಕಳುಹಿದನು. ಅಂಧ ಕುನಾಲನು ಅರಸನ ಬಳಿಗೆ ಬಂದನು. ಅಶೋಕಮಹಾ ರಾಜನು ಮಗನ ಗುರುತು ಹಿಡಿದು ಇನ್ನಿಲ್ಲದಷ್ಟು ದುಃಖಒಟ್ಟನು. ಅರಸನು ಯಾರ ತಂತ್ರದಿಂದ ಈ ಶೋಚನೀಯಾವಸ್ಥೆಯು ನಿನಗೆ ಬಂತೆಂದು ಆತನಿಗೆ ಕೇಳಿದನು. ಕುನಾ ಲನು ನಾನು ಏನೋ ಒಂದು ದೊಡ್ಡ ಅಪರಾಧವನ್ನು ಮಾಡಿರಬಹುದು; ಅದಕ್ಕೆ ತಾವು ಈ ಶಿಕ್ಷೆಯನ್ನು ವಿಧಿಸಿದೆ ಎಂದು ಮೆಲ್ಲನೆ ಉತ್ತರವಿತ್ತನು. ಅಶೋಕನು ಮಗನ ಬಾಯಿಂದ ಎಲ್ಲ ವೃತ್ತಾಂತವನ್ನು ತಿಳಿದು ತಿಷ್ಯರಕ್ಷಿತೆಯೇ ಈ ಅನರ್ಥಕ್ಕೆ ಮೂಲವೆಂದು ತಿಳಿದನು. ಆಗ ಅವನು ಅವಳನ್ನು ಜೀವಂತ ಸುಡುವದಕ್ಕೆ ಅಪ್ಪಣೆ ಮಾಡಿದನು. ಈ ತಂತ್ರದಲ್ಲಿ ಸೇರಿದವರಿಗೂ ದೇಹಾಂತಶಿಕ್ಷೆಯಾಯಿತು, ಕೆಲವರು ಒಬ್ಬ ಅರ್ಹ೦ತನ ಕೃಪೆಯಿಂದ ಕುನಾಲನಿಗೆ ಮತ್ತೆ ಕಣ್ಣುಗಳು ಬಂದಿದ್ದವೆಂದು ಹೇಳುವರು. ತಿಷ್ಯರ ಸ್ಥಿತೆಯ ಕಥೆ. ತಿಷ್ಯರಕ್ಷಿತೆಯು ತಂತ್ರದಿಂದ ಕುನಾಲನನ್ನು ತಕ್ಷಶಿಲೆಗೆ ಕಳಿಸಿದಬಳಿಕ ಸ್ವಲ್ಪ ದಿವಸಗಳಲ್ಲಿ ಅಶೋಕಮಹಾರಾಜನು ಬೇನೆಬಿದ್ದು ಅಶಕ್ತನಾದನು, ಅದರಿಂದ ಅವನು ಆಗ ರಾಜಕಾರ್ಯಗಳಲ್ಲಿ ತನ್ನ ಸ್ಥಳದಲ್ಲಿ ತಿಷ್ಯಕ್ಷತೆಯನ್ನು ನಿಯಮಿಸಿದನು. ಮುಂದೆ ತಾನು ನೆಟ್ಟಗಾದೇನೆಂಬ ಆಶೆಯು ತಪ್ಪಲು ಅಶೋಕನು ಕುನಾಲನಿಗೆ ರಾಜ್ಯಭಾರವನ್ನೂ ಪ್ಪಿಸಬೇಕೆಂದು ನಿಶ್ಚಯಿಸಿದನು. ಕುನಾಲನು ಸಿಂಹಾಸನ ವೇರಿದರೆ ತನ್ನ ಪರಿಣಾಮವು ನೆಟ್ಟಗಾಗುವದಿಲ್ಲವೆಂದು ತಿಷ್ಯರತೆಯು ತಿಳಿದಳು. ಆಗ ಅವಳು ಆಶೋಕನನ್ನು ಕುರಿತು ಮಹಾರಾಜರೇ, ತಾವು ನಿಶ್ಚಿಂತರಾಗಿ' ಇರಬೇಕು, ನಾನು ತಮ್ಮ ಬೇನೆಯನ್ನು ಕಳೆಯು ವೆನು, ಆದರೆ ತಾವು ಯಾವ ಚಿಕಿತ್ಸಕನೂ ಅರಮನೆಯಲ್ಲಿ ಪ್ರವೇಶಿಸಕೂಡದೆಂದು ಅಪ್ಪಣಮಾಡಬೇಕು ಎಂದು ಹೇಳಿದಳು, ಅದಕ್ಕೆ ರಾಜನು ಒಪ್ಪಿದನು. ಇತ್ತ ತಿರ ತೆಯು ಅರಸನ ಬೇನೆಯಂಥ ಬೇನೆಯುಳ್ಳ ಮನುಷ್ಯನು ಸಿಕ್ಕರೆ ಕೂಡಲೆ ಅವನನ್ನು ಇಲ್ಲಿಗೆ ತರಬೇಕೆಂದು ಅಪ್ಪಣೆಮಾಡಿದಳು. ಒಬ್ಬ ಗೋವಳಿಗನು ಇದೇ ತರದ ಬೇನೆ