ಪುಟ:ಅಶೋಕ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೧೬೧ ಯಿಂದ ಬಳಲುತ್ತಿದ್ದನು. ಕಾಮದಾರರು ಆತನನ್ನು ಅರಸಿಯ ಬಳಿಗೆ ಕಳುಹಿದರು. ತಿಷ್ಯ ರಕ್ಷಿತೆಯು ಆತನನ್ನು ಏಕಾಂತಸ್ಥಳದಲ್ಲಿ ಕೊಂದಳು, ಬಳಿಕ ಆ ಗೋವಳಿಗನ ಹೆಣವನ್ನು ಕೊಯ್ದು ನೋಡುತ್ತಾಳೆ- ಆತನ-ಅನ್ನ ಕೋಶದಲ್ಲಿ ಕೃಮಿಗಳು ತುಂಬಿಹೋಗಿವೆ. ಆ ಕೃಮಿಗಳಮೇಲೆ ಹಸಿಶುಂಠಿ ಮೆಣಸುಗಳನ್ನು ಪ್ರಯೋಗಿಸಲು ಅವು ಸಾಯಲಿಲ್ಲ. ಆದರೆ ನೀರುಳ್ಳಿಯ ರಸವು ಹತ್ತಿದೊಡನೆ ಅವೆಲ್ಲ ಸತ್ತು ಹೋದವು, ಈ ಮೇರೆಗೆ ಬೇನೆಯ ಮೂಲವನ್ನೂ ಔಷಧವನ್ನೂ ಕಂಡುಹಿಡಿದು ತಿಷ್ಯರತೆಯು ಅರಸನಿಗೆ ನೀರುಳ್ಳಿಯನ್ನು ತಿನ್ನುವ ವ್ಯವಸ್ಥೆ ಮಾಡಿದಳು, ಅದರಿಂದ ಸ್ವಲ್ಪ ಕಾಲದಲ್ಲಿ ಅರಸನಿಗೆ ಗುಣವಾಯಿತು. ತರು ಣಿಯಾದ ತಿಮ್ಮರಕ್ಷತೆಗೆ ತನ್ನ ರೂಪಯೌವನಗಳ ಗರ್ವವಿತ್ತು. ಅಶೋಕನಿಗೆ ಬೋಧಿವೃ ಕ್ಷದ ಮೇಲೆ ಬಹಳ ಭಕ್ತಿಯಿರುವದನ್ನು ಕಂಡು ಆಕೆಯು ತನಗಿಂತ ಬೋಧಿವೃಕ್ಷದ ಮೇಲೆ ಯೇ ಅರಸನ ಅನುರಾಗವು ಹೆಚ್ಚಾಗಿರುವದೆಂದು ತಿಳಿದಳು. ಇದರಿಂದ ಅಸೂಯೆಬಟ್ಟು ಬೋಧಿವೃಕ್ಷವನ್ನು ನಾಶಪಡಿಸುವ ಹಲವು ಹಂಚಿಕೆಗಳನ್ನು ಮಾಡಿದಳು. ಆದರೆ ದೈವ ಯೋಗದಿಂದ ಆಕೆಯ ಉಪಾಯಗಳೆಲ್ಲ ವ್ಯರ್ಥವಾದವು. ಈ ಸಂಗತಿಯು ಒದಗಿ ೪ ವರ್ಷಗಳಾದ ತರುವಾಯ ಅಶೋಕನು ತನ್ನ ಆಳಿಕೆಯ ೩೭ನೆಯ ವರ್ಷ ಈ ಲೋಕ | ವನ್ನು ಬಿಟ್ಟು ಹೋದನು. ಕೊನೆಯ ಕಾಲ. ಅಶೋಕನು ಬೌದ್ಧ ಧರ್ಮವನ್ನು ಪ್ರಚಾರಪಡಿಸುವ ಕೆಲಸದಲ್ಲಿ ೧೦ ಕೋಟಿ ಸುವರ್ಣ ಮೊಹರುಗಳನ್ನು ವ್ಯಯಮಾಡಬೇಕೆಂದು ಮಾಡಿದ್ದನು. ಅವನು ೯ ಕೋಟಿ ೬೦ ಲಕ್ಷ ಮೊಹರುಗಳನ್ನು ದಾನಮಾಡಿ ಕೊನೆಗೆ ವೃದ್ಧಾಪ್ಯದಲ್ಲಿ ಬೊಕ್ಕಸದಿಂದ ದಿನಾಲು ಬಹಳ ಮಟ್ಟಿಗೆ ಬಂಗಾರ ಬೆಳ್ಳಿಗಳನ್ನು ಕುಕ್ಕುಟಾರಾಮಕ್ಕೆ ಕಳಿಸಹತ್ತಿದನು, ಮಂತ್ರಿಗಳು ಬೊಕ್ಕಸವು ತೆರವಾಗುತ್ತಿರುವದನ್ನು ನೋಡಿ ವ್ಯಥೆಬಟ್ಟರು, ಕುನಾಲನ ಮಗನಾದ ಸಂಪಾ ದಿಯು ಆಗ ಯುವರಾಜನು, ಮಂತ್ರಿಗಳು ಸಂಪಾದಿಗೆ ಎಲ್ಲ ವೃತ್ತಾಂತವನ್ನು ಹೇಳಿ ಮಹಾ ರಾಜರು ಇದೇ ಮೇರೆಗೆ ದಾನಮಾಡಹತ್ತಿದರೆ ಸ್ವಲ್ಪ ದಿವಸಗಳಲ್ಲಿ ಬೊಕ್ಕಸವು ಪೂರ್ಣವಾಗಿ ತೆರವಾಗುವದು; ಆಗ ಪರಚಕ್ರದ ದಾಳಿಯನ್ನು ತಡೆಯುವದೂ ರಾಜ್ಯ ವನ್ನು ಕಾಪಾಡುವದೂ ಕಠಿಣವಾಗುವದು ಎಂದು ಹೇಳಿದರು, ಆಗ ಯುವರಾ ಜನು ಮಂತ್ರಿಗಳು ಹೇಳುವದನ್ನು ಕೇಳಿ ಕೋಶಾಧಿಕಾರಿಗೆ ಅರಸನ ಅಪ್ಪಣೆಯನ್ನು ಪಾಲಿಸದಿರುವಂತೆ ಹೇಳಿದನು. ಅಶೋಕನು ಬೊಕ್ಕಸದಿಂದ ಏನೂ ದೊರೆಯದಂತಾ ಗಲು ತನ್ನ ಬೆಳ್ಳಿ ಬಂಗಾರದ ಪಾತ್ರೆಗಳನ್ನು ಒಂದೊಂದನ್ನೇ ದಾನಮಾಡಹತ್ತಿದನು. ಧಾತುಪಾತ್ರೆಗಳೆಲ್ಲ ಹೋಗಿ ಅವುಗಳ ಬದಲು ಅರಮನೆಯಲ್ಲಿ ಮಣ್ಣಿನ ಪಾತ್ರೆಗಳ ಆರಂಭವಾಗಲು ಆಗ ಮನಸ್ಸು ಉಕ್ಕಿ ಬರಲು ಅಶೋಕನು ಮಂತ್ರಿಗಳನ್ನು ಕುರಿತು ಈ ರಾಜ್ಯದ ಒಡೆಯರಾರು ಎಂದು ಕೇಳಿದನು. ಆಗ ಮಂತ್ರಿಗಳು ಮಹಾರಾಜರೇ 21