ಪುಟ:ಅಶೋಕ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧LX 44L + •414 yuw t+++rs, 4/ \r\ # v \ /y • • •y vvvvy 14 /\ \/ \/s VVy \r\/wx ವಿಸ್ತಾರವಾಗಿ ಬರೆದಿರುವರು. ಮೌರ್ಯ ರಾಜರು ಒಟ್ಟಿಗೆ ೧೩೭ ವರ್ಷ ಆಳಿದರು. ಕೊನೆಗೆ ಕ್ರಿ, ವೂ, ೧೮೪ರಲ್ಲಿ ಕೊನೆಯ ಅರಸನಾದ ಬೃಹದ್ರಥನು ಅವನ ಸೇನಾಪತಿ ಯಾದ ಪುಷ್ಯಮಿತ್ರನಿಂದ ಕೊಲ್ಲಲ್ಪಟ್ಟನು, ಪುಷ್ಯಮಿತ್ರನು ಬಳಿಕ ತಾನೇ ಸಿಂಹಾಸನ ವನ್ನೇರಿದನು. ಅಂದಿನಿಂದ ಪಾಟಲಿಪುತ್ರದಲ್ಲಿ ಶುಂಗವಂಶದ ಆರಂಭವಾಯಿತು. ಮೌರ್ಯಕಾಲದ ಇತಿಹಾಸವನ್ನು ಬರೆದವರಲ್ಲಿ ಕೆಲವರು-ಅಶೋಕನು ದೇಹ ವಿಟ್ಟ ಕೂಡಲೆ ಅಶೋಕನು ಆರಂಭಿಸಿದ ಶಾಸನತಂತ್ರದೊಡನೆ ಬ್ರಾಹ್ಮಣ್ಯಶಕ್ತಿಯ ಹೋರಾಟವು ಆರಂಭವಾಯಿತೆಂದೂ, ಅದರಿಂದ ಈ ವಿಶಾಲವಾದ ಮೌರ್ಯ ಸಾಮ್ರ ಜ್ಯವು ವಿನಾಶಹೊಂದಿತೆಂದೂ ಹೇಳುವರು. ಅಶೋಕನು ತಾನೇ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದನು. ರಾಜ್ಯದಲ್ಲೆಲ್ಲಿಯೂ ಯಜ್ಞಕ್ಕೊಸ್ಕರ ಪಶುವಧವು ನಿಷೇಧಿಸಲ್ಪ ಟ್ಟಿತ್ತು. ಈ ಹೊಸ ನಿಯಮವು ಬ್ರಾಹ್ಮಣರಿಗೆ ಸೇರಲಿಲ್ಲ. ಯಾಕಂದರೆ ಆಗ ಅವರು ಇನ್ನೂ ಪಶುವಧದಲ್ಲಿ ಬಹಳ ಅಭಿಮಾನವುಳ್ಳವರಿದ್ದರು. ( ಇದುವರೆಗೆ ಯಾರು ದೇವತೆಗಳೆಂದು ಪೂಜಿಸಲ್ಪಡುತ್ತಿದ್ದರೋ ಅವರು ಈಗ ಸುಳ್ಳೆನಿಸುತ್ತಿರುವರು ” ಶಿಲಾ ಲಿಪಿಯಲ್ಲಿ ಅಶೋಕನು ಈ ವಾಕ್ಯವನ್ನು ಬರೆದದ್ದನ್ನು ನೋಡಿ ಇದು ಬ್ರಾಹ್ಮಣರ ಮೇಲೆಯೇ ಕಟಾಕ್ಷವಿಟ್ಟು ಬರೆಯಲ್ಪಟ್ಟಿದೆಯೆಂದು ಅವರು ಹೇಳುವರು. ಮೊದಲು ಜನಸಾಮಾನ್ಯದಲ್ಲಿ ಧರ್ಮ, ನೀತಿಗಳ ಮೇಲ್ವಿಚಾರಣೆಮಾಡುವ ಕೆಲಸವನ್ನು ಬ್ರಾಹ್ಮ ಣರೇ ಮಾಡುತ್ತಿದ್ದರು. ಈಗ ಧರ್ಮಮಹಾಮಾತ್ರರೆಂಬ ಕಾಮದಾರರು ಆ ಕೆಲಸಕ್ಕೆ ನಿಯಮಿಸಲ್ಪಟ್ಟರು. “ ದಂಡಸಮತಾ ” “ ವ್ಯವಹಾರಸಮತೆ ” ಗಳು ( ಅಂದರೆ ಜಾತಿ ವರ್ಣಗಳ ಭೇದವಿಲ್ಲದೆ ತಪ್ಪಿಗೆ ತಕ್ಕಂತೆ ಶಿಕ್ಷೆಯನ್ನು ವಿಧಿಸುವದು ) ಬ್ರಾಹ್ಮಣರಿಗೆ ಬಹಳ ವೈಮನಸ್ಯವನ್ನು ಹುಟ್ಟಿಸಿದವು, ಅಶೋಕನ ಪ್ರಬಲ ಪ್ರತಾಪದೆದುರಿಗೆ ಬ್ರಾಹ್ಮ ಣ್ಯಶಕ್ತಿಯು ಅಷ್ಟು ದಿವಸ ತಲೆವಾಗಿಸಿಕೊಂಡು ಇತ್ತು, ಆದರೆ ಆತನು ದೇಹವಿಟ್ಟ ಬಳಿಕ ಮತ್ತೆ ಬ್ರಾಹ್ಮಣರು ತಮ್ಮ ಸಾಮರ್ಥವನ್ನು ಸ್ಥಾಪಿಸುವದಕ್ಕೋಸ್ಕರ ಪ್ರಯತ್ನಿ ಸಹತ್ತಿದರು. ಬಹುಕಾಲದಿಂದ ಕ್ಷತ್ರಿಯರು ಬ್ರಾಹ್ಮಣರನ್ನು ಕಾಪಾಡುತ್ತ ಬಂದಿದ್ದರು. ನಂದವಂಶದ ಆಳಿಕೆಯ ಕಾಲದಲ್ಲಿ ಕ್ಷತ್ರಿಯ ಕುಲವು ಲೋಪವಾಗಿತ್ತು. ಈಗ ಬ್ರಹ ದ್ರಥನ ಸೇನಾಪತಿಯಾದ ಪುಷ್ಯಮಿತ್ರನು ಈ ಬ್ರಾಹ್ಮಣ್ಯಧರ್ಮವನ್ನು ರಕ್ಷಿಸುವದರಲ್ಲಿ ತೊಡಗಿದನು. ಆತನು ಬೃಹದ್ರಥನನ್ನು ಸಂಹರಿಸಿ ತಾನೇ ಮಗಧ ಸಿಂಹಾಸನವನ್ನೇ ರಿದನು, ಈ ಕಾಲದಿಂದ ಅಲ್ಲಲ್ಲಿ ಬ್ರಾಹ್ಮಣವರ್ಗವು ಮತ್ತೆ ಪ್ರಬಲವಾಗಹತ್ತಿತು. ಯಾವ ಪಾಟಲಿಪುತ್ರನಗರದಿಂದ ಯಜ್ಞಕ್ಕೋಸ್ಕರ ಪಶುವಧಮಾಡಬಾರದೆಂಬ ಅಪ್ಪಣೆ ಯು ಹೊರಟಿತ್ತೊ ಅದೇ ಪಾಟಲಿಪುತ್ರದಲ್ಲಿ ಪುಷ್ಯಮಿತ್ರನ ಕಾಲದಲ್ಲಿ ಒಂದು ದೊಡ್ಡ

  1. ವಾಯು ಪುರಾಣದಲ್ಲಿ ೧೩೩ ವರ್ಷಗಳೆಂದು ಹೇಳಿದೆ.