ಪುಟ:ಅಶೋಕ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧LL ಅಶೋಕ ಅಥವಾ ಪ್ರಿಯದರ್ಶಿ. Ghh A 1 + * * * * * * * * * * * * * * * * * * * \ / 1 (1 # \ + \r\ #5/1 \ \ +1 \ * * /\ * * * * * * *

  • * * * * * * * * * - * * f\ # •y $ 17, f4

ಅಶ್ವಮೇಧಯಜ್ಞದ ಸಮಾರಂಭವು ನಡೆಯಿತು, ಪುಷ್ಯಮಿತ್ರನx ಮೊಮ್ಮಗನಾದ ವಸುಮಿತ್ರನು ಯಜ್ಞಾಶ್ವವನ್ನು ಕಾಯುವದಕ್ಕೆ ಹೊರಟಿದ್ದನು. ಮೊದಲು ಹೇಳಿದ ಮತಕ್ಕೆ ಈ ಸಂಗತಿಯನ್ನು ಅವರು ಪೋಷಕವಾಗಿ ಉದಾಹರಿಸುವರು. ಈ ತರದ ಸಿದ್ಧಾಂತವು ಅನೇಕರಿಗೆ ಸರಿದೋರುವದಿಲ್ಲ. ಇದು ಎಷ್ಟು ಮಟ್ಟಿಗೆ ನಿಜವೆಂಬದನ್ನು ನಿರ್ಣಯಿಸುವದೂ ಅಸಾಧ್ಯವು, ಅಶೋಕನ ಧರ್ಮಮತವು ಉದಾರವಾದದ್ದಿತ್ತು. ಅದರಲ್ಲಿ ಸಂಕುಚಿತತನವು ಸ್ವಲ್ಪವೂ ಇರಲಿಲ್ಲ, ಪ್ರತಿಯೊಂದು ಧರ್ಮದವರು ತಮ್ಮ ತಮ್ಮ ಧರ್ಮದಂತೆ ನಡೆಯುವದಕ್ಕೆ ಆತನು ಪೂರ್ಣವಾಗಿ ಸ್ವಾತಂತ್ರ್ಯವನ್ನು ಕೊಟ್ಟಿ ದ್ದನು, ಯಜ್ಞಕ್ಕೊಸ್ಕರ ಪಶುವಧೆಯನ್ನು ಆತನು ಪೂರ್ಣವಾಗಿ ಪ್ರತಿಬಂಧಿಸಿದ್ದ ನೆಂಬದು ಎಲ್ಲಿಯೂ ಕಂಡುಬರುವದಿಲ್ಲ. ಅಶೋಕನು ದೇಹವಿಟ್ಟ ಬಳಿಕ ಉಂಟಾದ ರಾಷ್ಟ್ರೀಯ ತಂತ್ರಗಳೇ ಮೌರ್ಯರಾಜ್ಯದ ವಿನಾಶಕ್ಕೆ ಕಾರಣವಾದವೆಂದು ನಮಗೆ ತೋರುವದು. ಅಶೋಕನ ಮೊಮ್ಮಗನಾದ ದಶರಥನ ತರುವಾಯದ ಅರಸರು ಹೆಸ ರಿಗೆ ಮಾತ್ರ ಅರಸರಾಗಿದ್ದರು. ಅವರ ಸಾಮರ್ಥ್ಯದ ನಿದರ್ಶನವೆಲ್ಲಿಯೂ ಕಂಡುಬರುವ ದಿಲ್ಲ. ಈ ಕಾಲದಲ್ಲಿ ಕಲಿಂಗ, ವಿದರ್ಭ, ಆಂಧ್ರದೇಶಗಳು ತಮ್ಮ ತಮ್ಮ ಸ್ವಾತಂತ್ರ್ಯ ವನ್ನು ಪ್ರಕಟಿಸಿ ಮೌರ್ಯ ಸಾಮ್ರಾಜ್ಯದಿಂದ ಬೇರೆಯಾದವು, ಮತ್ತು ಅದೇ ಕಾಲದಲ್ಲಿ ಪ್ರಬಲ ಗ್ರೀಕವೀರನಾದ ಮಿನಾಂಡರನು ತನ್ನ ಶೌರ್ಯದಿಂದ ಪಂಚನದವನ್ನು ದಾಟಿ ಭರತಖಂಡದ ಮಧ್ಯದವರೆಗೆ ತನ್ನ ಜಯಪತಾಕೆಯನ್ನು ನಿಲ್ಲಿಸಿದ್ದನು; ಆದರೆ ಪುಷ್ಯ ಮಿತ್ರನ ಪರಾಕ್ರಮದೆದುರಿಗೆ ಏನೂ ಸಾಗದೆ ಅವನು ಅಪಜಯವನ್ನೊಪ್ಪಿ ಈ ದೇಶ ವನ್ನು ಬಿಟ್ಟು ಹೋಗಬೇಕಾಯಿತು. ಆ ಕಾಲದಲ್ಲಿಯೇ ಮಗಧದ ಸಿಂಹಾಸನದ ಮೇಲೆ ದುರ್ಬಲಮನಸ್ಸಿನ ಬೃಹದ್ರಥರಾಜನು ಇದ್ದನೆಂಬದನ್ನು ಎಲ್ಲರೂ ಬಲ್ಲರು. ಇಂಥ ಸಮಯದಲ್ಲಿ ತನ್ನ ವಿಜಯದಿಂದ ಉಬ್ಬಿದ ಪುಷ್ಯಮಿತ್ರನು ಆತನನ್ನು ಸಿಂಹಾ ಸನದಿಂದ ತಳ್ಳಿ ತಾನು ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕೆಂದು ಮಾಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಮೌರ್ಯವಂಶವು ಯಾವ ಕಾರಣದಿಂದೇ ಲೋಪ ಹೊಂದಲಿ, ಅಶೋಕನು ಐತಿಹಾಸಿಕ ಯುಗದಲ್ಲಿ ಎಲ್ಲಕ್ಕೂ ಹೆಚ್ಚಿನ ಅರಸನಾಗಿದ್ದನೆಂಬದರಲ್ಲಿ ಏನೂ ಸಂಶ ಯವಿಲ್ಲ. ಎಲ್ಲಿಯವರೆಗೆ ಭರತಖಂಡದ ಇತಿಹಾಸವು ಇರುವದೋ ಅಲ್ಲಿಯ ವರೆಗೆ ಅದರಲ್ಲಿ ಅಶೋಕನ ಕೀರ್ತಿಯು ಸುವರ್ಣಾಕ್ಷರಗಳಿಂದ ಬರೆದಿಡಲ್ಪಡುವದು. ಕೇವಲ • ಈತನಿಗೆ ಹಲವೆಡೆಗಳಲ್ಲಿ ಪುಷ್ಪಮಿತ್ರನೆಂದೂ ಹೆಸರುಂಟು ಪುಷ್ಟ ಮಿತ್ರನ ವಿಷಯವಾಗಿ ಹೆಚ್ಚಿಗೆ ತಿಳಿದುಕೊಳ್ಳುವದಾದರೆ ಹರ್ಷಚರಿತ, ಮಾಲವಿಕಾಗ್ನಿ ಮಿತ್ರಗಳಲ್ಲಿ ನೋಡಬೇಕು, ಈತನ ಕಾಲದಲ್ಲಿಯ ಮಹಾಭಾಷ್ಯಕಾರನಾದ ಸುಪ್ರಸಿದ್ಧ ಪತಂಜಲಿಯು ಇದ್ದನು.

  • ಮಿನಾಂಡರನು ಭರತಖಂಡದಲ್ಲಿ ಬಂದದ್ದರ ಉಲ್ಲೇಖವು ಜ್ಞಾನ ಪುಸ್ತಕದಲ್ಲಿಯೂ, ಪತಂಜಲಿ, ಮತ್ತು ತಾರಾನಾಥ ಇವರ ವರ್ಣನೆಯಲ್ಲಿಯೂ ಗಾರ್ಗಿ ಸಂಹಿತೆಯಲ್ಲಿಯಲ್ಲಿಯ ಉ೦ಟು,