ಪುಟ:ಅಶೋಕ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೬2 ••••••••• • • • - *••••••••””v”

  • ರ್v<೪ - * ** *

•••••••••••••••••wwrwww ಭರತಖಂಡದಲ್ಲಿಯೇ ಏಕೆ, ಸಮಗ್ರ ಬೌದ್ಧ ಜಗತ್ತಿನಲ್ಲಿ ನಿರಂತರವಾಗಿ ಆತನ ಗೌರ ವವು ಹೊಗಳಲ್ಪಡುವದು. ಆತನ ಶಿಲಾಲಿಪಿಗಳು, ಸಂಭಲಿಪಿಗಳು, ಸ್ತೂಪಗಳು, ವಿಹಾರಗಳು, ಮಂದಿರಗಳು ಮೊದಲಾದವು ಆತನ ಆಶ್ಚರ್ಯಕರವಾದ ಉದಾರಚರಿ ತ್ರೆಯ ದೃಷ್ಟಾಂತಗಳು, ಕಾಲದ ದುರ್ಭೇದ್ಯವಾದ ಅಂಧಕಾರದ ಆವರಣದಲ್ಲಿ ಅಶೋಕ ಚರಿತ್ರವು ಸ್ಪುಟವಾಗಿ ವ್ಯಕ್ತವಾಗದಿದ್ದರೂ ಈ ಹೊತ್ತಿಗೂ ಆತನ ಆ ಉಜ್ವಲ ಮೂರ್ತಿಯೂ, ಭೂತದಯರಸದಿಂದ ತುಂಬಿದ ಗಂಭೀರವಾಣಿಯೂ, ಆ ಉದಾರ ಹೃದಯವೂ ಇವುಗಳ ನಿದರ್ಶನಗಳು ಭಾರತವರ್ಷದ ಪುಣ್ಯಕ್ಷೇತ್ರಗಳಲ್ಲಿ ಶೋಧಿಸ ಸ್ಪಡುತ್ತಿರುವವು, ನಿಃಶಬ್ದ ವಾದ ಶಿಲಾಮಯ ಪರ್ವತಗಳಲ್ಲಿ ಆತನ ಆವೇಗಯುಕ್ತ ವಾದ ಆಜ್ಞಾ ವಚನಗಳು ಪ್ರತಿಧ್ವನಿತವಾಗುತ್ತಿರುವವು, ಹಿಮಾಲಯದ ತುಷಾರ ಧವ ಲವಾದ ಪಾದಪ್ರದೇಶದಲ್ಲಿ ಆತನ ಅತ್ಯಂತವಾದ ಧರ್ಮಾನುರಾಗವನ್ನು ವ್ಯಕ್ತಪಡಿ ಸುವ ಶಿಲೆಗಳು ಅಕ್ಷಯವಾಗಿ ನಿಂತಿವೆ, ಎಷ್ಟೋ ಪುರಾಣಗಳಲ್ಲಿ ಮತ್ತು ಅವದಾನಗ ಇಲ್ಲಿ ಪಂಕ್ತಿ ಪಂಕ್ತಿಗೆ ಬಂದ ಆತನ ಚರಿತ್ರಭಾಗವು ಐತಿಹಾಸಿಕರ ಹೃದಯದಲ್ಲಿ ಆತನ ವಿಸ್ತ್ರತ ಚರಿತ್ರವನ್ನು ತಿಳಿದುಕೊಳ್ಳುವ ಬಲವಾದ ಆಕಾಂಕ್ಷೆಯನ್ನು ಹುಟ್ಟಿಸುತ್ತಿರು ವದು. ಹರಿಶ್ಚಂದ್ರ, ರಾಮಚಂದ್ರ, ಯುಧಿಷ್ಠಿರ ಮೊದಲಾದ ಮಹಾರಾಜರು ಧರ್ಮಸ ರಾಯಣರಾಗಿ ಯಾವ ದೃಷ್ಟಾಂತವನ್ನು ಹಾಕಿಟ್ಟರೋ ಅದೇ ದೃಷ್ಟಾಂತವನ್ನು ಅಶೋಕಮಹಾರಾಜನೂ ಹಾಕಿಟ್ಟಿರುವನು. ಅವರು ಸತ್ಯಪಾಲನ, ಪ್ರಜಾಸಂತೋಷ ಇವುಗಳಿಗೋಸ್ಕರ ಹೆಂಡಿರು, ಮಕ್ಕಳು, ರಾಜ್ಯಸುಖ ಮೊದಲಾದವುಗಳನ್ನು ಸಹ ಬಿಟ್ಟು ಕೊಟ್ಟಿದ್ದರು. ಅದೇ ಮೇರೆಗೆ ಅಶೋಕಮಹಾರಾಜನೂ ತನ್ನ ವಿಶಾಲ ಸಾಮ್ರಾ ಜ್ಯದಲ್ಲಿ ಪ್ರಜೆಗಳ ದುಃಖನಿವಾರಣೆಗಾಗಿಯೂ, ಅವರ ಕಲ್ಯಾಣಕ್ಕಾಗಿಯೂ ಎಷ್ಟೋ ಪ್ರಯತ್ನ ಗಳನ್ನು ಮಾಡಿದನು. ಜನರು ಧಾರ್ಮಿಕರೂ, ಸತ್ಯಶೀಲರೂ, ಪಾಪರಹಿ ತರೂ, ಆಗಬೇಕೆಂಬದೇ ಅವನ ಅತ್ಯಂತ ಇಚ್ಛೆಯೂ, ಜೀವನದ ಮುಖ್ಯ ಧೈಯವೂ ಆಗಿತ್ತು. ಆತನು ರಾಜ್ಯದಲ್ಲಿ ಸುಖಶಾಂತಿಗಳನ್ನು ನೆಲೆಗೊಳಿಸುವದು, ಪ್ರಜೆಗಳ ಅಭಿ ವೃದ್ಧಿಯನ್ನು ಮಾಡುವದು ಈ ರಾಜಧರ್ಮವನ್ನಷ್ಟೇ ಪಾಲಿಸಿ, ಸುಮ್ಮನಿರದೆ ಪ್ರಜೆಗಳ ಆಧ್ಯಾತ್ಮಿಕ ಸುಧಾರಣೆಗಾಗಿ ಹಲವು ಉಪಾಯಗಳನ್ನು ಯೋಜಿಸಿದ್ದರ ಉದಾಹರಣವು ಭರತಖಂಡದ ಪ್ರಾಚೀನೇತಿಹಾಸದಲ್ಲಿ ದೊರೆಯುವದು ತೀರ ಕಡಿಮೆ. ಆತನು ತನ್ನ ಜೀವನದಲ್ಲಿ ಯಾವ ಸತ್ಯವನ್ನು ಕಂಡುಹಿಡಿದಿದ್ದನೋ ಆ ಸತ್ಯವನ್ನು ರಾಜ್ಯದೊಳಗಿನ ಒಬ್ಬ ಸಾಮಾನ್ಯ ಪ್ರಜೆಯು ಕೂಡ ತನ್ನ ಜೀವನದಲ್ಲಿ ಅವಲಂಬಿಸು ವಂತೆಯೂ, ಅದೇ ದಿಕ್ಕಿನಿಂದ ಉನ್ನತಿಯನ್ನು ಹೊಂದುವಂತೆಯೂ ಸಂಪೂರ್ಣ ಪ್ರಯತ್ನಗಳನ್ನು ಮಾಡಿದನು. ಅಶೋಕನಂಥ ಜನಹಿತಕರನಾದ ನರಸತ್ತಿಯ ಚರಿತವು