ಪುಟ:ಅಶೋಕ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•••••••••••••••••. V////v *y*v 24 4 - -”, ””,” - - ಬLಳ ಅಶೋಕ ಅಥವಾ ಪ್ರಿಯದರ್ಶಿ ೧rvvrrrrrrrwಸಿ ಕೇವಲ ಭರತಖಂಡದಲ್ಲಿಯೇ ಏಕೆ ? ಎಲ್ಲ ದೇಶಗಳಲ್ಲಿ ಎಲ್ಲ ಕಾಲದಲ್ಲಿ ಎಲ್ಲ ಜಾತಿಗೆ ಇಲ್ಲಿ ಶ್ರೇಷ್ಟವೆಂದು ಹೊಗಳಲ್ಪಡುವದೆಂಬದಕ್ಕೆ ಸಂಶಯವಿಲ್ಲ. ಯಾವನು ರಾಜ್ಯದ ಅಧೀಶ್ವರನಾಗಿದ್ದರೂ ಮನಸ್ಸಿನಲ್ಲಿ ಸರ್ವಸಂಗರಹಿತನು, ಯಾವನು ಸುಖವಿಲಾಸಗ ಳಲ್ಲಿ ಬೆಳೆದಿದ್ದರೂ ಮೂಕ ಪಶುಪಕ್ಷಿಗಳ ಪ್ರಾಣರಕ್ಷಣೆಯಲ್ಲಿ ಕೂಡ ಆಸಕ್ತನು, ಪರರ ದುಃಖನಿವಾರಣ ಮಾಡಬೇಕೆಂಬದೇ ಯಾವನ ಜೀವನದ ಮುಖ್ಯ ಧೈಯವು ಆತನು ಮನುಷ್ಯ ಕುಲದಲ್ಲಿ ದೇವತೆಯೇ ಸರಿ ಅಶೋಕನರಸತಿಯು ಮನುಷ್ಯ ಕುಲದಲ್ಲಿ ನಿಜವಾಗಿಯೂ ದೇವತೆಯೇ ಆಗಿದ್ದನು; ಆತನ ನಾಮಸ್ಮರಣದಿಂದ ನಾವು ಧನ್ಯರಾ ಗುವೆವು, ಆತನ ಸ್ಮರಣೀಯವಾದ ಕೀರ್ತಿಯು ಭಾರತವರ್ಷದಲ್ಲಿ ಗತಕಾಲದ ಗೌರವ ವನ್ನು ತೋರ್ಪಡಿಸುವಂಥದೂ, ಭವಿಷ್ಯತ್ಕಾಲದ ಅಭ್ಯುದಯಾಶೆಯನ್ನು ಹುಟ್ಟಿಸು ವಂಥದೂ ಆಗಿರುವದು. ಪರಿಶಿಷ್ಟ, (೧) .ಅ$e- ಮೌರ್ಯವಂಶದ ಉತ್ಪತ್ತಿ. ( ಮಹಾವಂಶವನ್ನ ನುಸರಿಸಿ. ) ಚಂದ್ರಗುಪ್ತ ಮಹಾರಾಜನು ಮೌರ್ಯ ವಂಶಸ್ಥಾಪಕನು, ಅಶೋಕಮಹಾರಾ ಜನು ಇದೇ ವಂಶದವನು. ಈ ಮೌರ್ಯವಂಶದ ಉತ್ಪತ್ತಿಯ ವಿಷಯವಾಗಿ ಬೇರೆ ಬೇರೆ ಕಥೆಗಳು ಪ್ರಚಲಿತವಾಗಿರುವವು, ಪುರಾಣಗಳಲ್ಲಿಯೂ ಸಂಸ್ಕೃತನಾಟಕದ ಲ್ಲಿಯೂ ಮೌರ್ಯ ರಾಜವಂಶವು ನೀಚಕುಲದಿಂದ ಹುಟ್ಟಿತೆಂದು ಉಲ್ಲೇಖವುಂಟು. ( ಮುರಾ' ಎಂಬ ಒಬ್ಬ ಶೂದ್ರಜಾತಿಯ ಸ್ತ್ರೀಯ ಹೊಟ್ಟೆಯಲ್ಲಿ ಹುಟ್ಟಿದ ಸಂತಾನವು ಮೌರ್ಯ ಎಂಬ ಹೆಸರನ್ನು ಹೊಂದಿತೆಂದು ಅವುಗಳಲ್ಲಿ ಹೇಳಲ್ಪಟ್ಟಿದೆ. ಮುದ್ರಾರಾಕ್ಷ ಸವೆಂಬ ನಾಟಕದಲ್ಲಿ ಚಾಣಕ್ಯನು ಚಂದ್ರಗುಪ್ತನಿಗೆ ವೃಷಲ ( ಶೂದ್ರೀಪುತ್ರ) ನೆಂದು ಕರೆದಿರುತ್ತಾನೆ, ಆದರೆ ಸಿಂಹಲದೀಪದ ಪ್ರಸಿದ್ಧ ಐತಿಹಾಸಿಕ ಗ್ರಂಥವಾದ ಮಹಾ ವಂಶದ ಟೀಕೆಯಲ್ಲಿ ಮೌರ್ಯವಂಶದ ಉತ್ಪತ್ತಿಯ ವಿಷಯವಾಗಿ ಬೇರೆ ವಿಧವಾಗಿ ಹೇಳಲ್ಪಟ್ಟಿದೆ. ಅದನ್ನೇ ಇಲ್ಲಿ ಸಂಕ್ಷೇಪವಾಗಿ ಉದ್ದರಿಸಿ ಬರೆಯುವೆವು. ಇದರಿಂದ ಮೌರ್ಯವಂಶದ ಉತ್ಪತ್ತಿಯ ವಿಷಯವಾಗಿ ಸ್ವಲ್ಪ ಕಲ್ಪನೆಯಾಗುವಂತಿರುವದು. ಪೂರ್ವದಲ್ಲಿ ವೈಶಾಲಿಯಲ್ಲಿ ಆಳುತ್ತಿದ್ದ ಲಿಚ್ಛವಿವಂಶದ ಯಾವನೋ ಒಬ್ಬ ಅರ ಸನು ಲಾವಣ್ಯವತಿಯಾದ ಒಬ್ಬ ವಾರಾಂಗನೆಗೆ ಮರುಳಾದನು. ಆ ಅರಸನ ಸಹವಾ ಸದಿಂದ ಆ ವಾರಾಂಗನೆಯು ಸ್ವಲ್ಪ ದಿವಸಗಳಲ್ಲಿ ಗರ್ಭಿಣಿಯಾದಳು. ಹತ್ತು ತಿಂಗಳು