ಪುಟ:ಅಶೋಕ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೧ರ್೬ hh//\\r\r\\r\r\r\\\ # » # \ /*/*/*/*/*/* /* * * 11 * * * *

  1. 1 ಸಿ+

ಹತ್ತು ದಿವಸಗಳಾದ ಬಳಿಕ ಅವಳು ಒಂದು ಪಿಂಡವನ್ನು ಹೆತ್ತಳು. ಅವಳು ಆ ಮಾಂಸ ಪಿಂಡವನ್ನು ನೋಡಿ ನಾಚಿಕೆಯಿಂದಲೂ ಅಂಜಿಕೆಯಿಂದಲೂ ಅದನ್ನೊಂದು ಪೆಟ್ಟಿಗೆ ಯಲ್ಲಿ ಹಾಕಿ ನಸುಕಿನಲ್ಲಿ ಆ ಪೆಟ್ಟಿಗೆಯನ್ನು ದಾರಿಯ ಮಗ್ಗುಲಲ್ಲಿದ್ದ ಒಂದು ತಿಪ್ಪಿಯಲ್ಲಿ ಚಲ್ಲಿಸಿದಳು. ಬೆಳಗಾಗಲು ಆ ಪೆಟ್ಟಿಗೆಯು ದಾರಿಕಾರರ ಕಣ್ಣಿಗೆ ಬಿತ್ತು, ಒಂದು ದೊಡ್ಡ ಸರ್ಪವು ಆ ಪೆಟ್ಟಿಗೆಯ ಬಳಿಯಲ್ಲಿ ಕಾಯುತ್ತ ಕುಳಿತಿತ್ತು. ದಾರಿಕಾರರು ಆ ನಾಗವನ್ನು ನೋಡಿ ಸಂಭ್ರಮದಿಂದ (ಸು ' ( ಸು ' ಎಂಬ ಶಬ್ದದಿಂದ ಅಲ್ಲಿ ನಾಗವಿದ್ದ ದ್ದನ್ನು ಎರಡನೆಯವರಿಗೆ ತಿಳಿಸಹತ್ತಿದರು. ಆಗ ಆ ನಾಗವು ಆ ಸ್ಥಳವನ್ನು ಬಿಟ್ಟು ಹೊರಟು ಹೋಯಿತು. ಬಳಿಕ ಅಲ್ಲಿ ನೆರೆದವರು ಆ ಪೆಟ್ಟಿಗೆಯನ್ನು ತೆರೆದು ನೋಡಲು ಅದರಲ್ಲಿ ಅದೇ ಆಗ ಹುಟ್ಟಿದ ಸರ್ವಲಕ್ಷಣಯುಕ್ತವಾದ ಒಂದು ಗಂಡು ಕೂಸು ಅಡು ತಿತ್ತು. ಆ ಕೂಸನ್ನು ನೋಡಿ ಒಬ್ಬ ರಾಜಕೀಯ ಅಧಿಕಾರಿಯು ಮನೆಗೆ ಒಯ್ಯ ಪ್ರೀತಿಯಿಂದ ಜೋಪಾನ ಮಾಡಹತ್ತಿದನು, ಮೇಲೆ ಹೇಳಿದ ಪ್ರಸಂಗದಿಂದ ಬಾಲಕ ನಿಗೆ ( ಸು ಸು ನಾಗ ” ಎಂಬ ಹೆಸರು ಬಂದಿತು. ಸು ಸು ನಾಗನು ಕ್ರಮದಿಂದ ಬಳೆ ಯು, ಜ್ಞಾನವಂತನೂ ಗುಣವಂತನೂ ಆದನು. ಆ ಕಾಲದಲ್ಲಿ ಮಗಧ ದೇಶದ ರಾಜರಲ್ಲಿ ಮಕ್ಕಳು ತಂದೆಯನ್ನು ಕೊಂದು ಪಟ್ಟಕ್ಕೆ ಬರುವದು ೨.೩ ತಲೆಗಳಿಂದ ನಡೆದು ಬಂದಿತ್ತು. ಈ ಪಿತೃದ್ರೋಹವನ್ನು ನೋಡಿ ಅಸಹ್ಯಪಟ್ಟಿ ಪ್ರಜೆಗಳು ನಾಗ ದಾಸನೆಂಬ ಪಿತೃಘಾತಿಯನ್ನು ಪಟ್ಟದಿಂದ ತಳ್ಳಿ ಈ ( ಸುಸುನಾಗ' ನನ್ನು ಪಟ್ಟದ ಮೇಲೆ ಕುಳ್ಳಿರಿಸಿದರು. ಸುಸುನಾಗನಿಗೆ ಕಾಲಾಶೋಕನೆಂಬ ಮಗನಾದನು. ಕಾಲಾ ಶೋಕನಿಗೆ ಹತ್ತು ಜನ ಮಕ್ಕಳು ಹುಟ್ಟಿದರು, ಹಿರಿಯ ಮಗನು ತಾಯಿಯ ಕಡೆಯಿಂದ - ಹೀನವಂಶದವನಾದದರಿಂದ ಅವನಿಗೆ ಪಟ್ಟವು ದೊರೆಯಲಿಲ್ಲ. ಉಳಿದ ಒಂಬತ್ತು ಜನ ಮಕ್ಕಳು ನವನಂದರೆನಿಸಿದರು. ಈ ನವನಂದರು ಆಳುತ್ತಿರುವಾಗ ಒಬ್ಬಾನೊಬ್ಬ ಕಳ್ಳನು ಪಟ್ಟಣವನ್ನೂ ಹಳ್ಳಿ ಪಳ್ಳಿಗಳನ್ನೂ ಸುಲಿದು ಹಾಳುಮಾಡಿ ಪ್ರಜೆಗಳ ಸರ್ವಸ್ವವನ್ನು ಅಪಹರಿಸಿಕೊಂಡು ಹೋಗುತ್ತಿದ್ದನು. ಈ ಚೋರಪತಿಯ ಕೈಕೆಳಗೆ ಒಂದು ಕಳ್ಳರ ದಂಡೇ ಇತ್ತು ಅವರು ಯಾವ ಹಳ್ಳಿಯನ್ನು ಸುಲಿಯುವರೋ ಅಲ್ಲಿಯ ಜನರಿಂದಲೇ ಸುಲಿಗೆಯ ದ್ರವ್ಯವನ್ನು ಹೊರಿಸಿಕೊಂಡು ಅಡವಿಗೆ ಒಯ್ಯುತ್ತಿದ್ದರು, ಒಮ್ಮೆ ಅವರು ಈ ತೆರದಲ್ಲಿ ಯಾವದೋ ಒಂದು ಸಮೃದ್ಧವಾದ ನಗರವನ್ನು ಕೊಳ್ಳೆ ಹೊಡೆದು ಒಬ್ಬ ಅತಿಬಲಿ ಷನಾದ ತರುಣನಿಂದ ಸುಲಿಗೆಯ ಹಣವನ್ನು ಹೊರಿಸಿಕೊಂಡು ಹೋದರು, ಅಂದಿ ನಿಂದ ಆ ತರುಣನು ಆ ಗುಂಪಿಗೆ ಸೇರಿದನು. ಮುಂದೆ ಮತ್ತೊಂದು ಊರನ್ನು ಸುಲಿ ಯುವಾಗ ಆ ಕಳ್ಳರೊಡೆಯನನ್ನು ಊರಜನರು ಕೊಂದರು. ಬಳಿಕ ಆ ಗುಂಪಿನವರು ಹಿಂದೆ ಹೇಳಿದ ತರುಣನ ಧೈರ್ಯವನ್ನೂ ಶೌರ್ಯವನ್ನೂ ಕಂಡು ಅವನನ್ನೇ ತಮ್ಮ