ಪುಟ:ಅಶೋಕ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬d ಅಶೋಕ ಅಥವಾ ಪ್ರಿಯದರ್ಶಿ. ,, م تر حرم می روح می ” , , , , , , , - - ** * * * *-*-*/*/*/* ಒಡೆಯನನ್ನಾಗಿ ಮಾಡಿಕೊಂಡರು. ಈ ತರುಣನು ಕಾಲಾಶೋಕನ ಹಿರಿಯ ಮಗನು. ಆ ಬಳಿಕ ಅವನು ತನಗೆ ನಂದನೆಂಬ ಹೆಸರಿಟ್ಟು ಕೊಂಡನು, ತನ್ನ ಗುಂಪಿಗೆ ಸೇರಿದ ಜನರ ಸಹಾಯದಿಂದ ಹೊಸ ದಂಡನ್ನು ಕೂಡಿಸಿದನು. ಅಂದಿನಿಂದ ಸುಲಿಗೆಯನ್ನು ಬಿಟ್ಟು ದೇಶವನ್ನು ಗೆಲ್ಲುವ ಆಲೋಚನೆ ಮಾಡಿದನು. ಒಂದೊಂದೇ ಪ್ರಾಂತವನ್ನು ವಶಮಾಡಿಕೊಳ್ಳುತ್ತ ಕೊನೆಗೆ ಅವನು ಪಾಟಲಿಪುತ್ರನಗರವನ್ನು ಮುತ್ತಿ ಅದನ್ನು ವಶ ಮಾಡಿಕೊಂಡು ಸಿಂಹಾಸನವೇರಿದನು, ಆದರೆ ಸ್ವಲ್ಪ ದಿವಸಗಳಲ್ಲಿ ಅವನು ಮರಣ ಹೊಂದಿದನು. ಬಳಿಕ ಅವನ ಉಳಿದ ತಮ್ಮಂದಿರು ( ನವನಂದರು ) ಕ್ರಮವಾಗಿ ೨೨ ವರ್ಷಗಳವರೆಗೆ ಮಗಧರಾಜ್ಯವನ್ನಾಳಿದರು. ಎಲ್ಲಕ್ಕೂ ಚಿಕ್ಕ ತಮ್ಮನು ಧನಾ ನಂದನೆಂಬವನು, ಇವನು ಬಹು ಕೃಪಣನು, ಪಾಟಲಿಪುತ್ರದ ಸಿಂಹಾಸನವೇರಿದ ಬಳಿಕ ಇವನು ಹೊಳೆಯೊಳಗೆ ಒಂದು ಗುಹೆಯನ್ನು ಕಡಿಸಿ ಅಲ್ಲಿ ಎಂಬತ್ತು ಕೋಟಿ ಮೊಹರುಗಳನ್ನು ಹುಗಿಸಿಬಿಟ್ಟಿದ್ದನಂತೆ, ಮರ ಕಲ್ಲು ತೂಗಲು ಮೊದಲಾದವುಗಳ ಮೇಲೂ ಕರವನ್ನು ಕೂಡಿಸಿ ರಾಜಾದಾಯವನ್ನು ಹೆಚ್ಚು ಮಾಡಿದ್ದನು. ಅತ್ಯಂತ ಧನಪ್ರಿಯನಾದದರಿಂದಲೇ ಅವನಿಗೆ ಧನಾನಂದನೆಂಬ ನಾಮವು ಉಂಟಾಯಿತು. ಬಳಿಕ ಧನಾನಂದನು ಶಾಸ್ತ್ರಗಳಲ್ಲಿಯೂ, ಪುರಾಣಗಳಲ್ಲಿಯ ದಾನದ ಮಹಾ ತ್ಯವನ್ನು ಕೇಳಿ ಕೃಪಣತೆಯನ್ನು ಬಿಟ್ಟು ತನ್ನ ದುಡ್ಡನ್ನೆಲ್ಲ ದಾನಮಾಡಬೇಕೆಂದು ಸಂಕಲ್ಪ ಮಾಡಿದನು. ತರುವಾಯ ಅರಮನೆಯಲ್ಲಿ ದೊಡ್ಡದೊಂದು ದಾನಶಾಲೆಯನ್ನು ಏರ್ಪಡಿಸಿ ಎಲ್ಲರಿಗಿಂತ ಶ್ರೇಷ್ಠನೆನಿಸಿದ ಒಬ್ಬ ಬ್ರಾಹ್ಮಣನಿಗೆ ನೂರು ಕೋಟಿ ಮೊಹ ರುಗಳನ್ನೂ, ಉಳಿದವರಿಗೆ ಲಕ್ಷ ಮೊಹರುಗಳನ್ನೂ ಕೊಡುವೆನೆಂದು ರಾಜ್ಯದಲ್ಲಿ ಪ್ರಕ ಟಿಸಿದನು. ಈ ಸುದ್ದಿಯನ್ನು ಕೇಳಿ ನಾನಾದಿದ್ದೇಶಗಳಿಂದ ಬ್ರಾಹ್ಮಣರು ತಂಡತಂಡ ವಾಗಿ ಬರಹತ್ತಿದರು. ಅದೇ ಕಾಲದಲ್ಲಿ ತಕ್ಷಶಿಲೆಯಲ್ಲಿ ವಾಸವಾಗಿದ್ದ ಚಾಣಕ್ಯನೆಂಬ ಒಬ್ಬ ಬ್ರಾಹ್ಮಣನು ಪಾಟಲಿಪುತ್ರಕ್ಕೆ ಬಂದಿದ್ದನು. ಅವನು ವೇದಗಳನ್ನು ಬಲ್ಲವನೂ, ಸರ್ವಶಾಸ್ತ್ರಗಳಲ್ಲಿ ಪಾರಂಗತನೂ, ಕೂಟರಾಜನೀತಿಯಲ್ಲಿ ಪಂಡಿತನೂ ಆಗಿದ್ದನು. ಈ ಚಾಣಕ್ಯನು ಒಂದು ಪ್ರಸಂಗದಲ್ಲಿ ತಾಯಿಯ ಸಂತೋಷಕ್ಕಾಗಿ ತನ್ನ ರಾಜಲಕ್ಷಣ ಯುಕ್ತವಾದ ಹಲ್ಲನ್ನು ಕಿತ್ತುಕೊಂಡಿದ್ದನಂತೆ, ಅದರಿಂದ ಇವನಿಗೆ ಖಂಡದಂತನೆಂಬ ಹೆಸರೂ ಬಂದಿತ್ತು, ಧನನಂದ ಮಹಾರಾಜನು ಅರಮನೆಯಲ್ಲಿ ದೊಡ್ಡ ಸಭಾಮಂಟ ಪವನ್ನು ನಿರ್ಮಿಸಿರುವದನ್ನೂ, ಬ್ರಾಹ್ಮಣ ಸಮಾಜದಲ್ಲಿ ಎಲ್ಲರಿಗಿಂತ ಶ್ರೇಷ್ಠನಾದವನಿಗೆ ಶುಕೊಟಸುವರ್ಣ ಮುದ್ರೆಗಳನ್ನು ಕೊಡುತ್ತಾನೆಂಬದನ್ನೂ ಕೇಳಿ ಚಾಣಕ್ಯನು ದ್ರವ್ಯ ಲೋಭದಿಂದ ಅರಮನೆಯೊಳಗಿನ ಸಭಾಮಂಟಪವನ್ನು ಪ್ರವೇಶಿಸಿ ಎಲ್ಲಕ್ಕೂ ಶ್ರೇಷ್ಠ ನೆನಿಸಿದ ಬ್ರಾಹ್ಮಣನಿಗೆಂದು ಗೊತ್ತು ಪಡಿಸಿದ ಆಸನದ ಮೇಲೆ ಕುಳಿತುಕೊಂಡನು. ಅಷ್ಟ್ರ ರಲ್ಲಿ ಮಹಾರಾಜನು ರಾಜವೇಷವನ್ನು ಧರಿಸಿ ರಕ್ಷಕರು ಸುತ್ತಲು ಬರುತ್ತಿರಲು ವೈಭವ