ಪುಟ:ಅಶೋಕ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೧೭೩ ~r//// v/~~ ** * * * * ••••//// • ಕಡಿಯದೆ ಕತ್ತರಿಸದೆ ಇಲ್ಲವೆ ಬಿಚ್ಚದೆ ಇಲ್ಲಿಗೆ ತೆಗೆದುಕೊಂಡು ಬಾ ” ಎಂದು ಹೇಳಿ ದನು, ಪರ್ವತನಿಗೆ ಹೇಗೆ ಒಯ್ಯಬೇಕೆಂಬದು ತೋರದೆ ಹಾಗೆಯೇ ತಿರುಗಿ ಬಂದನು. ಚಾಣಕ್ಯನು ಇದಕ್ಕೆ ಸಿಟ್ಟಾದನು. ಮರುದಿವಸ ಚಾಣಕ್ಯನು ಚಂದ್ರಗುಪ್ತನನ್ನು ಮೊದಲು ಎಚ್ಚರಿಸಿ ಅವನಿಗೂ ಇದೇ ಅಪ್ಪಣೆಯನ್ನು ಮಾಡಿದನು. ಚಂದ್ರಗುಪ್ತನು ಬೇರೆ ಉಪಾಯವನ್ನು ಕಾಣದೆ ಕತ್ತಿಯಿಂದ ಪರ್ವತನ ತಲೆಯನ್ನು ಕಡಿದು ಯಜ್ಞ ಪವೀತವನ್ನು ತಂದುಕೊಟ್ಟನು. ಚಾಣಕ್ಯನು ಸಂತೋಷದಿಂದ ಚಂದ್ರಗುಪ್ತನ ಪ್ರಶಂಸಮಾಡಹತ್ತಿದನು. ಬಳಿಕ ಚಂದ್ರಗುಪ್ತನು ಚಾಣಕ್ಯನ ದುಡ್ಡಿನ ಮತ್ತು ಬುದ್ಧಿಯ ಬಲದಿಂದ ಒಂದು ದೊಡ್ಡ ಸೈನ್ಯವನ್ನು ಸಿದ್ಧಮಾಡಿದನು. ಮುಂದೆ ಒಂದೊಂದೇ ದೇಶವನ್ನು ಆಕ್ರಮಿಸತೊಡಗಿದನು. ಮೊದಮೊದಲು ಕೆಲವೆಡೆಗಳಲ್ಲಿ ಪರಾಜಯವೂ ಆಯಿತು. ಕೊನೆಗೆ ಅವನು ಕಪಟವೇಷದಿಂದ ಎಲ್ಲ ದೇಶಗಳಲ್ಲಿ ತಿರುಗಾಡಿ ಯಾವಾಗ ಮುತ್ತಿಗೆ ಹಾಕಿದರೆ ಕೆಲಸವು ಕೈಗೂಡುವದೆಂಬದನ್ನು ಗೊತ್ತು ಮಾಡಿಕೊಂಡನು. ಕೂಟರಾಜ ನೀತಿ ಪಂಡಿತನಾದ ಚಾಣಕ್ಯನ ಸಹಾಯದಿಂದ ಬುದ್ಧಿಶಾಲಿಯಾದ ಚಂದ್ರಗುಪ್ತನು ಮತ್ತೊಮ್ಮೆ ಮೇರೆಯೊಳಗಿನ ಒಂದೊಂದೇ ಪ್ರದೇಶವನ್ನು ಜಯಿಸುತ್ತ ಕೊನೆಗೆ ಪಾಟಲಿಪುತ್ರಕ್ಕೆ ಬಂದನು. ಧನಾನಂದ ಮಹಾರಾಜನು ಚಂದ್ರಗುಪ್ತನ ಪ್ರಬಲವಾದ ಮುತ್ತಿಗೆಯನ್ನು ಸಹಿಸಲಾರದೆ ರಣರಂಗದಲ್ಲಿ ಬಿದ್ದು ಮಡಿದನು. ಬಳಿಕ ಕ್ರಮವಾಗಿ ಚಂದ್ರಗುಪ್ತನು ಭರತಖಂಡದ ಏಕಚ್ಚತ್ರಾಧಿಪತಿಯಾದನು, ಅವನು ತನ್ನ ಸೋದರ ಮಾವನ ಮಗಳನ್ನು ಮದುವೆಯಾಗಿ ಅವಳನ್ನೇ ಪಟ್ಟದರಸಿಯನ್ನು ಮಾಡಿದನು. ವಿಷ . ಪ್ರಯೋಗದಿಂದ ಅರಸನನ್ನು ಯಾರೂ ಕೊಲ್ಲಬಾರದೆಂದು ಚಾಣಕ್ಯನು ತನ್ನ ಕೈಯಿಂ ದಲೇ ರಾಜನ ಆಹಾರದಲ್ಲಿ ಅಲ್ಪ ಪ್ರಮಾಣದಿಂದ ವಿಷವನ್ನು ಬೆರಸುತ್ತ ಅವನಿಗೆ ವಿಷದ ಅಭ್ಯಾಸವನ್ನು ಮಾಡಿಸಹತ್ತಿದನು, ಮತ್ತು ಆ ವಿಷ ಮಿಶ್ರವಾದ ಆಹಾರವನ್ನು ಇನ್ನಾ ರೂ ತೆಗೆದುಕೊಳ್ಳದಂತೆ ನೋಡಿಕೊಳ್ಳುತ್ತಿದ್ದನು. ಒಂದು ದಿನ ದೈವಾನುಸಾರ ವಾಗಿ ಚಾಣಕ್ಯನು ಬೇರೆ ಕೆಲಸದಲ್ಲಿ ತೊಡಗಿ ರಾಜನ ಆಹಾರ ಕಾಲದಲ್ಲಿ ಸ್ವಲ್ಪ ಕಾಲ ಬೇರೆ ಕಡೆಯಲ್ಲಿರಲು ಪೂರ್ಣ ಗರ್ಭಿಣಿಯಾದ ಪಟ್ಟದರಸಿಯು ಅದೇ ದಿವಸ ಅರಸನ ಆಹಾರದ ಶೇಷಭಾಗದಲ್ಲಿ ಒಂದೆರಡು ತುತ್ತುಗಳನ್ನು ಬಾಯಲ್ಲಿ ಹಾಕಿಕೊಂಡಳು. ಇಷ್ಟರಲ್ಲಿ ಚಾಣಕ್ಯನು ಅಲ್ಲಿಗೆ ಬಂದು ನೋಡಿ ಅರಸಿಗೆ ಆ ತುತ್ತನ್ನು ಕೂಡಲೆ ಉಗುಳ ಹೇಳಿದನು. ಆದರೆ ಅವಳು ಅಷ್ಟರಲ್ಲಿ ಸ್ವಲ್ಪ ನುಂಗಿದ್ದಳು. ಉಪಾಯಾಂತ ರವು ತೋರದೆ ರಾಜಭಕ್ತನಾದ ಆ ಬ್ರಾಹ್ಮಣನು ಕತ್ತಿಯಿಂದ ರಾಣಿಯನ್ನು ಕಡಿದು ಗರ್ಭದಿಂದ ಶಿಶುವನ್ನು ಹೊರತೆಗೆದು ಆಡಿನ ಗರ್ಭದಲ್ಲಿ ರಕ್ಷಿಸಹತ್ತಿದನು. ಕೆಲವು ದಿವಸಗಳ ತರುವಾಯ ಆ ಕೂಸನ್ನು ಅಂತಃಪುರದ ಒಬ್ಬ ದಾಸಿಯ ಕೈಯಲ್ಲಿ ಜೋಪಾ