ಪುಟ:ಅಶೋಕ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ಅಶೋಕ ಅಥವಾ ಪ್ರಿಯದರ್ಶಿ, ನಮಾಡುವದಕ್ಕೆ ಕೊಟ್ಟನು. ಅಡಿನ ರಕ್ತದ ಬಿಂದುಗಳು ಕೂತನ ಮೈಗೆ ಹತ್ತಿದ್ದ ರಿಂದ ಶಿಶುವಿಗೆ ಬಿಂದುಸಾರನೆಂಬ ಹೆಸರು ಬಂದಿತು. ಜೈನ ಗ್ರಂಥಗಳಲ್ಲಿ. ಚಾಣಕ್ಯ ಚಂದ್ರಗುಪ್ತರ ವಿಷಯವಾಗಿ ಜೈನಗ್ರಂಥಗಳಲ್ಲಿಯೂ ಕೆಲಮಟ್ಟಿಗೆ ಉಲ್ಲೇಖವು ದೊರೆಯುವದು, ಅದನ್ನು ಇಲ್ಲಿ ಸಂಕ್ಷೇಪವಾಗಿ ಕೊಡುವೆವು. ಚಣಕ ಎಂಬ ಊರಲ್ಲಿ ಚಾಣಕ್ಯನು ಹುಟ್ಟಿದನು, ಅವನ ತಂದೆಯ ಹೆಸರು ಚಣನು, ತಾಯಿ ಚಣೇಶ್ವರಿ, ಚಾಣಕ್ಯನು ಸರ್ವ ಶಾಸ್ತ್ರ ಪಾರಂಗತನಾದನು. ದ್ರಿ ಪಾರ್ಜನೆಗಾಗಿ ಹೊರಟು ನಂದರಾಜನು ಮಾಡುವ ದಾನದ ವಾರ್ತೆಯನ್ನು ಕೇಳಿ ಪಾಟಲಿಪುತ್ರಕ್ಕೆ ಬಂದಿದ್ದನು, ಮತ್ತು ರಾಜಸಭೆಯಲ್ಲಿ ಅರಸನಿಗಾಗಿ ಗೊತ್ತು ಪಡಿಸಿದ ಆಸನದಲ್ಲಿ ಕುಳಿತುಕೊಂಡನು. ಅಷ್ಟರಲ್ಲಿ ಅರಸನು ಮಕ್ಕಳೊಡನೆ ಅಲ್ಲಿಗೆ ಬಂದನು. ತನ್ನ ಆಸನದಲ್ಲಿ ಚಾಣಕ್ಯನು ಕುಳಿತಿರುವದನ್ನು ನೋಡಿ ಅರಸನಿಗೆ ಬಹಳ ಸಿಟ್ಟು ಬಂದಿತು. ಇಷ್ಟಾದರೂ ಚಾಣಕ್ಯನು ಆಸನದಿಂದ ಏಳಲಿಲ್ಲ, ಪರಿಚಾರಕರು ಚಾಣ ಕೈನ ಸಲುವಾಗಿ ಬೇರೊಂದು ಆಸನವನ್ನು ತಂದಿರಿಸಿದರು. ಅದರೂ ಚಾಣಕ್ಯನು ಏಳದೆ ಆ ಆಸನದ ಮೇಲೆ ತನ್ನ ಕೋಲು ಜಲಪಾತ್ರೆ ಮೊದಲಾದವನ್ನು ಇಟ್ಟನು. ಇದನ್ನು ನೋಡಿ ಪರಿಚಾರಕರು ಕೂಡಲೆ ಅಪಮಾನ ಮಾಡಿ ಚಾಣಕ್ಯನನ್ನು ಅಲ್ಲಿಂದ ಹೊರಗೆ ಹಾಕಿದರು. ಆಗ ಆತನು ಈ ಅಪಮಾನದಿಂದ ಪರಮಾವಧಿ ಸಿಟ್ಟಿಗೆದ್ದು ನಂದವಂಶವನ್ನು ನಾಶಮಾಡುವ ಪ್ರತಿಜ್ಞೆ ಮಾಡಿ ಅಲ್ಲಿಂದ ಹೊರಟುಹೋದನು. ಬಾಲ್ಯ ದಲ್ಲಿ ಒಬ್ಬ ಭವಿಷ್ಯವಾದಿಯು ಇವನಿಗೆ ( ಹೆಸರಿಗೊಬ್ಬ ಅರಸನನ್ನು ಮಾಡಿ ನೀನು ರಾಜ್ಯವನ್ನಾಳುವೆ " ಎಂದು ಹೇಳಿದ್ದನು. ಈಗ ಅಂತಹ ಅರಸನಾಗುವ ಒಂದು ವ್ಯಕ್ತಿಯನ್ನು ಹುಡುಕುವದಕ್ಕಾಗಿ ದೇಶದಲ್ಲಿ ಸಂಚರಿಸಹತ್ತಿದನು. ಒಮ್ಮೆ ಅರಸನ ಮಯೂರಪೋಷಕರ ದೇಶಕ್ಕೆ ಬಂದಿದ್ದನು. ಅಲ್ಲಿ ಆ ಜನರ ಒಡೆಯನ ಮಗಳು ಆಗ ಗರ್ಭಿಣಿಯಿದ್ದಳು. ಆಕೆಗೆ ಚಂದ್ರನನ್ನು ಕುಡಿಯಬೇಕೆಂಬ ಬಯಕೆಯಾಗಿತ್ತು. ಈ ಬಯಕೆಯನ್ನು ಪೂರ್ಣಮಾಡುವದು ಯಾರಿಂದಲೂ ಆಗಿರಲಿಲ್ಲ ಆಗ ಈ ಬ್ರಾಹ್ಮ ಣನು ಆ ಬಯಕೆಯನ್ನು ಪೂರ್ಣಮಾಡುವೆನೆಂದೂ, ಅವಳಿಗೆ ಗಂಡು ಕೂಸು ಹುಟ್ಟ ದರೆ ತನಗೆ ಕೊಡಬೇಕೆಂದೂ ಹೇಳಿದನು. ಅದಕ್ಕೆ ಅವರು ಒಪ್ಪಲು ಚಾಣಕ್ಯನ ಒಂದು ಹುಲ್ಲಿನ ಗುಡಿಸಲನ್ನು ಹಾಕಿಸಿ ಅದಕ್ಕೆ ಮೇಲ್ಗಡೆಗೆ ಒಂದು ತೂತನ್ನು ಬಿಟ್ಟು ಆ ತೂತಿನಿಂದ ಒಳಗೆ ಚಂದ್ರಕಿರಣಗಳು ಬೀಳುವ ಸ್ಥಳದಲ್ಲಿ ಒಂದು ಹಾಲಿನ ಪಾತ್ರೆ ಯನ್ನಿಟ್ಟು ಆ ಗರ್ಭಿಣಿಯನ್ನು ಅಲ್ಲಿಗೆ ಕರೆಯಿಸಿದನು. ಮಾಳಿಗೆಯ ಮೇಲೆ ಒಬ