ಪುಟ:ಅಶೋಕ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ • • • • • • • • • • • • • • •

  • * * * * * *

114 ಹೊಸರಾಜಗೃಹದ ಒಳಕೋಟೆಯು ಮಾತ್ರ ಇನ್ನೂ ಇತ್ತು, ಹೊರಗಿನ ಕೋಟೆಯು ಬಿದ್ದು ಹೋಗಿತ್ತು. ಈಗ ರಾಜಗೃಹಕ್ಕೆ ರಾಜಗಿರ ಎಂದು ಹೆಸರುಂಟು, ಅಲ್ಲಿ ಒಂದು ಹಾಳಾದ ಕೋಟೆಯು ಇರುವದು, ರಾಜಗಿರವು ಈಗ ಗಯಾಕ್ಕೆ ಸೇರಿರುವದು, ಮೇಲೆ ಹೇಳಿದ ೫ ಪರ್ವತಗಳಿಗೆ ಈಗ ಕ್ರಮವಾಗಿ ವೈಭಾರಗಿರಿ, ವಿಪುಲಗಿರಿ, ರತ್ನಗಿರಿ, ಉದ ಯಗಿರಿ, ಶೋಣಗಿರಿ ಎಂಬ ಹೆಸರುಗಳು ಬಂದಿರುವವು. ಇಂಗ್ಲಿಷ-ಐತಿಹಾಸಿಕರು * ತುರಾನಿಯನ್ ಎಂದು ಕರೆಯುವ ವೃಜಿ ಎಂಬ ಒಂದು ಜಾತಿಯ ಜನರು ಹಿಮಾಲಯದಿಂದ ಇಳಿದು ಹಿಂದುಸ್ತಾನವನ್ನು ಸೇರಿ ಕೊಳ್ಳೆ ಹೊಡೆಯುತ್ತಿದ್ದರೆಂದೂ, ಅವರು ಉತ್ತರಬಿಹಾರವನ್ಯಾ ಕ್ರಮಿಸಿ ವೈಶಾಲಿಯಲ್ಲಿ ಪಾಳ ಯ ಹಾಕಿಕೊಂಡು ನಿಂತಿದ್ದರೆಂದೂ, ಈ ಹೊಸಜನರಿಂದ ವಗಧಸಾಮ್ರಾಜ್ಯವನ್ನು ಕಾಪಾಡಿಕೊಳ್ಳುವದಕ್ಕಾಗಿ ಅಲ್ಲಿಯ ಅರಸನಾದ ಅಜಾತಶತ್ರುವು ಗಂಗಾನದಿಯ ದಂಡೆಯಮೇಲೆ ಪಾಟಲಿಗ್ರಾಮದಲ್ಲಿ ಕ್ರಿ. ಪೂ. ೫೪ ರಲ್ಲಿ ಒಂದು ಕೋಟೆಯನ್ನು ಕಟ್ಟಿಸಿದ್ದನೆಂದೂ ಪ್ರವಾದವುಂಟು. ಮುಂದೆ ಈ ಅಜಾತಶತ್ರುವಿನ ಮೊಮ್ಮಗನಾದ ಉದಯಾಶ್ವನು+ ಅಲ್ಲಿ ಒಂದು ಹೊಸಪಟ್ಟಣವನ್ನು ಕಟ್ಟಿಸಿ ಅಲ್ಲಿಗೆ ರಾಜಧಾನಿಯನ್ನು ಒಯ್ದನೆಂದು ವಾಯುಪುರಾಣದಲ್ಲಿ ಹೇಳಿದೆ. ಮಹಾಪರಿನಿರ್ವಾಣಸೂತ್ರವೆಂಬ ಪ್ರಸಿದ್ಧ ಪಾಲಿಗ್ರಂಥದಲ್ಲಿ ಪಾಟಲಿಪುತ್ರದ ಮೊದಲಿನ ಹೆಸರು ಪಾಟಲಿಗ್ರಾಮವೆಂದು ಹೇಳಿದೆ. ಬುದ್ದದೇವನು ತನ್ನ ಪ್ರಿಯ ಶಿಷ್ಯನಾದ ಅನಂದನೊಡನೆ ಪಾಟಲಿಗ್ರಾಮದಮೇಲಿಂದ ಹಾಯ್ದು ಹೋಗುವಾಗ ಆ ನಗರದ ವಿಷಯವಾಗಿ ಹೇಳಿದ ಭವಿಷ್ಯವಾಣಿಯು ಅದೇ ಗ್ರಂಥದಲ್ಲಿ ಸವಿಸ್ತಾರವಾಗಿ ವರ್ಣಿತವಾಗಿದೆ. ಅದರ ಕೆಲವು ಭಾಗವನ್ನು ಇಲ್ಲಿ ಕೊಟ್ಟಿದೆ:-ಬುದ್ದದೇವನು ತನ್ನ ಅಲೌಕಿಕವಾದ ದಿವ್ಯದೃಷ್ಟಿಯಿಂದ ಪಾಟಲಿಗ್ರಾಮ ದಲ್ಲಿ ಸಾವಿರಾರು ದೇವತೆಗಳು ವಾಸಮಾಡುವದನ್ನು ಕಂಡನು. ಮುಂದೆ ಆತನು ರಾತ್ರಿಯ ಕೊನೆಯಭಾಗದಲ್ಲಿ ಎದ್ದು ಶಿಷ್ಯನಾದ ಆನಂದನಿಗೆ ಪ್ರಶ್ನೆ ಮಾಡಿದನು--ಹೇ! ಆನಂದ, ಈ ಪಾಟಲಿಗ್ರಾಮಕ್ಕೆ ಯಾರು ಕೋಟೆಯನ್ನು ಕಟ್ಟಿ ಸುತ್ತಿರುವರು ? ಆನಂದ-ಭಗವನ್, ಮಗಧರಾಜನ ಸುನೀಧ, ವರ್ಷಕಾರ ಎಂಬ ಇಬ್ಬರು ಮಂತ್ರಿ ಗಳು ವೃಜಿಗಳಿಂದ ದೇಶವನ್ನು ರಕ್ಷಿಸುವದಕ್ಕಾಗಿ ಈ ಕೋಟೆಯನ್ನು ಕಟ್ಟಿಸುತ್ತಿರು ವರು; ಬಳಿಕ ಬುದ್ಧದೇವನು ( ಆ ಮಂತ್ರಿಗಳು ೩೩ ದೇವಗಣಗಳೊಡನೆ ಆಲೋಚಿಸಿ ಈ ಕೋಟೆಯನ್ನು ಕಟ್ಟಿಸುತ್ತಿರುವರು. ಈ ಸ್ಥಳಕ್ಕೆ ಕಾಲಕ್ರಮದಿಂದ ಪಾಟಲಿಪುತ್ರವೆಂಬ ಹೆಸರು ಬರುವದು. ಇದು ನಾಗರಿಕತೆಯಲ್ಲಿಯೂ ವ್ಯಾಪಾರದ ಲ್ಲಿಯೂ ಬಹಳ ಪ್ರಸಿದ್ದಿಯನ್ನು ಹೊಂದುವದು, ಅಗ್ನಿ, ಜಲ, ಗೃಹಕಲಹ ಈ ಮೂರು

  • R. C, Dutt5 AIncient Civilisation vol II.p 221

ಗುಂಗದಲ್ಲಿ ದಯಾಶನು ನುಗಧಾಜ್ಞ ನಾದ ೧೨ ಜಿ ಇತ್ತು ವಿನ ಮಗನೆಂದು ಹೇಳಿದೆ.