ಪುಟ:ಅಶೋಕ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧೭೫ YY• –Y V W vvy 141 vs/v/ wv VV v/ YYY vvvvv 1411 # ಮನುಷ್ಯನನ್ನು ಕುಳ್ಳಿರಿಸಿದ್ದನು. ಹಾಲಿನ ಬಟ್ಟಲಲ್ಲಿ ಚಂದ್ರಬಿಂಬವನ್ನು ತೋರಿಸಿ ಬ್ರಾಹ್ಮಣನು ಕುಡಿಯಹೇಳಿದನು. ಮಾಳಿಗೆಯ ಮೇಲೆ ಕುಳಿತವನು ಸ್ವಲ್ಪ ಸ್ವಲ್ಪವಾಗಿ ಆ ತೂತನ್ನು ಮುಚ್ಚುತ್ತ ಹಾಲು ತೀರುವ ಹೊತ್ತಿಗೆ ಪೂರ್ಣವಾಗಿ ಮುಚ್ಚಿಬಿಟ್ಟನು. ಆಗ ಆ ಗರ್ಭಿಣಿಗೆ ಚಂದ್ರನನ್ನು ಕುಡಿದೆನೆಂದು ಸಂತೋಷವಾಯಿತು. ಮುಂದೆ ಕಾಲಾ ನುಸಾರವಾಗಿ ಅವಳು ಗಂಡುಮಗುವನ್ನೇ ಹೆತ್ತಳು, ಮೇಲಿನ ಪ್ರಸಂಗಕ್ಕನುಸರಿಸಿ ಆ ಕೂಸಿಗೆ ಚಂದ್ರಗುಪ್ತನೆಂಬ ಹೆಸರು ಆಯಿತು. ಮುಂದೆ ಕೆಲವು ದಿವಸಗಳಾದ ಬಳಿಕ ಚಾಣಕ್ಯನು ಮತ್ತೆ ಅಲ್ಲಿಗೆ ಬಂದನು. ಆಗ ಗೋವಳಿಗರ ಹುಡುಗರೊಡನೆ ಆಡುತ್ತಿದ್ದ ಚಂದ್ರಗುಪ್ತನ ಗುರುತು ಆತನಿಗೆ ಹತ್ತಿತು. ಬಳಿಕ ಚಾಣಕ್ಯನು ಈ ಹುಡುಗನಿಗೆ ರಾಜ್ಯವನ್ನು ಕೊಡಿಸುತ್ತೇನೆಂದು ಹೇಳಿ ಚಂದ್ರಗುಪ್ತನನ್ನು ತನ್ನ ಸಂಗಡ ಕರೆದುಕೊಂಡುಹೋದನು. ಮುಂದೆ ಚಂದ್ರಗುಪ್ತನು ಚಾಣಕ್ಯನ ಬುದ್ದಿಯ ಮತ್ತು ದುಡ್ಡಿನ ಬಲದಿಂದ ದೊಡ ದೊಂದು ಸೇನೆಯನ್ನು ಕೂಡಿಸಿ ನಂದರಾಜರೊಡನೆ ಯುದ್ಧಕ್ಕೆ ಸಿದ್ಧನಾದನು. ಆಗ ನಂದರಾಜನು ಚಂದ್ರಗುಪ್ತನನ್ನು ಸೋಲಿಸಿದನು. ಬಳಿಕ ಚಂದ್ರಗುಪ್ತನು ಹಿಮ ವತ್ಪರ್ವತದ ಅಡಿಯಲ್ಲಿ ರಾಜ್ಯವಾಳುತ್ತಿದ್ದ ಪರ್ವತನೆಂಬ ಅರಸನ ಸಹಾಯವನ್ನು ಹೊಂದಿ ಮೇರೆಯ ಕಡೆಯಿಂದ ಒಂದೊಂದೇ ಪ್ರಾಂತವನ್ನು ಜಯಿಸುತ್ತ ಬಂದು ಪಾಟ ಲಿಪುತ್ರವನ್ನು ಮುತ್ತಿ ವಶಮಾಡಿಕೊಂಡನು. ಈ ಯುದ್ಧದಲ್ಲಿ ನಂದರಾಜನು ಓಡಿ ಹೋದನು, ನಂದನ ಮಗಳನ್ನೇ ಚಂದ್ರಗುಪ್ತನು ಮದುವೆಯಾದನು, ನಂದರಾಜನು ಊರೊಳಗಿನ ಒಬ್ಬ ಸುಂದರಿಯಾದ ಹುಡುಗಿಗೆ ವಿಷದ ಅಭ್ಯಾಸ ಮಾಡಿಸಿದ್ದನು. ಅದ ರಿಂದ ಆ ಹುಡುಗೆಗೆ ವಿಷಕನೆಯನ್ನು ತ್ತಿದ್ದರು. ಪರ್ವತರಾಜನು ಆ ಸುಂದರಿಯಾದ ಕಸ್ಯೆಯನ್ನು ನೋಡಿ ಮದುವೆಯಾಗಬೇಕೆಂದು ಬಯಸಿದನು. ಅವರಿಬ್ಬರ ವಿವಾಹ ಕಾಲದಲ್ಲಿ ಅಗ್ನಿಯ ಎದುರಿಗೆ ಪಾಣಿಗ್ರಹಣವಾಗುವಾಗ ಆ ಕನ್ನೆಯ ಕೈಯ ಬೆವರ ಹನಿಗಳು ಪರ್ವತನ ಶರೀರದಲ್ಲಿ ಸೇರಲು ಕೂಡಲೆ ಅವನು ವಿಷವೇರಿ ಸತ್ತನು. ಬಳಿಕ ಪರ್ವ ತನ ರಾಜ್ಯವೂ ಚಂದ್ರಗುಪ್ತನ ರಾಜ್ಯಕ್ಕೆ ಸೇರಿತು. ಕ್ರಮವಾಗಿ ಚಂದ್ರಗುಪ್ತನು ಏಕಚಕ್ರಾಧಿಪತಿಯಾದನು. ಹಿಂದು ಪುರಾಣಗಳಲ್ಲಿ. ಮಹಾನಂದನೆಂಬ ರಾಜನಿಗೆ ಒಬ್ಬ ಶೂದ್ರಸ್ತ್ರೀಯ ಹೊಟ್ಟೆಯಲ್ಲಿ ಮಹಾಪ ನೆಂಬವನು ಹುಟ್ಟಿದನು, ಅವನು ಅತ್ಯಂತ ಪರಾಕ್ರಮಶಾಲಿಯಾಗಿ ಕ್ಷತ್ರಿಯ ರಾಜರ ಸ್ಪೆಲ್ಲ ಸುಮೂಲವಾಗಿ ನಾಶಮಾಡಿದನು. ಈ ನಂದಮಹಾಪದ್ಮನು ಭರತಖಂಡದಲ್ಲಿ