ಪುಟ:ಅಶೋಕ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ಏಕಚ್ಛಾಧಿಪತಿಯಾಗಿ ಎರಡನೆಯ ಪರಶುರಾಮನಂತೆ ಪರಾಕ್ರಮ ತೋರಿಸಿದನು, ಮಹಾಪದ್ಮನಿಗೆ ಎಂಟುಜನ ಮಕ್ಕಳಿದ್ದರು. ಜೈಷ್ಣನಿಗೆ ಸುಮಾಲ್ಯನೆಂಬ ಹೆಸರು. ಅವನು ನೂರು ವರ್ಷ ರಾಜ್ಯವಾಳಿದನು. ಒಬ್ಬ ಬ್ರಾಹ್ಮಣನು ಈ ನಂದವಂಶವನ್ನು ನಾಶಮಾಡಿ ಮೌರ್ಯವಂಶದಲ್ಲಿ ಹುಟ್ಟಿದ ಚಂದ್ರಗುಪ್ತನನ್ನು ಪಾಟಲಿಪುತ್ರದ ಸಿಂಹ ಸನದಲ್ಲಿ ಕುಳ್ಳಿರಿಸಿದನು. ( ಶ್ರೀಮದ್ಭಾಗವತ ದ್ವಾದಶಸ್ಸ೦ಧ ಶಿಶುನಾಗವಂಶದ ಕೊನೆಯ ಅರಸನಿಗೆ ಮಹಾನಂದಿಯೆಂಬ ಹೆಸರು. ಮಹಾ ನಂದಿಯ ಮಗನಾದ ಮಹಾಪದ್ಯನು ಎರಡನೆಯ ಪರಶುರಾಮನಂತೆ ಕ್ಷತ್ರಿಯ ರಾಜ ವಂಶವನ್ನು ಸಮೂಲ ನಾಶಮಾಡಿದನ., ಇವನು ಶೂದ್ರಸ್ತೀಯ ಹೊಟ್ಟೆಯಲ್ಲಿ ಹುಟ್ಟಿ ದವನು, ಸುಮೂಲ್ಯ ಮೊದಲಾದ ಇವನ ಎಂಟುಜನ ಮಕ್ಕಳು ಕ್ರಮವಾಗಿ ರಾಜ್ಯವಾ ಆದರು. ಕೌಟಿಲ್ಯನೆಂಬ ಒಬ್ಬ ಬ್ರಾಹ್ಮಣನು ನಂದವಂಶವನ್ನು ನಾಶಮಾಡಿ ಮೌರ್ಯ ಚಂದ್ರಗುಪ್ತನಿಗೆ ಸಾಮ್ರಾಜ್ಯವನ್ನು ಕೊಟ್ಟನು. ( ಶ್ರೀ ವಿಷ್ಣು ಪುರಾಣ, ) ಪುರಾಣ ಟೀಕಾಕಾರರು-ನಂದಮಹಾಪದ್ಮನ ಒಬ್ಬ ಮಹಿಷಿಗೆ ಮುರಾ ಎಂಬ ಹೆಸರಿತ್ತೆಂದೂ, ಅದರಿಂದಲೇ ಅವಳ ಮಗನಾದ ಚಂದ್ರಗುಪ್ತನಿಗೆ ಮೌರ್ಯನೆಂಬ ಹೆಸರು ಬಂದಿತೆಂದೂ ಹೇಳುತ್ತಾರೆ. t tx. އެޑް"އީހާ ~, 2 -