ಪುಟ:ಅಶೋಕ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೫

  • * * * * * *

/ # * * \/

  1. */* * * * * // - *
  • * * * * *

ಕಾರಣಗಳಿಂದ ಪಾಟಲಿಪುತ್ರವು ಮುಂದೆ ನಾಶಹೊಂದುವದು' ಎಂದು ನುಡಿದನು. ( ಮಹಾಪರಿನಿವ್ವಾಣಸೂತ್ಯ-೧ನೆಯ ಭಾಣವಾರ ) ಮೌರ್ಯವಂಶದ ಅರಸರ ಕಾಲದಲ್ಲಿ ಭಾಗೀರಥೀ-ಶೋಣಗಳ ಸಂಗಮದ ಹತ್ತರ ಕಂಗೊಳಿಸುವ ಪಾಟಿಲಿಪುತ್ರವು ಮಗಧದೇಶದ ರಾಜಧಾನಿಯಾಗಿತ್ತು, ಪಾಟಲಿಪುತ್ರ ವಿದ್ದ ಸ್ಥಳವು ಈಗ ಪಾಟನಾ, ಬಂಕಿಪುರ ಇವುಗಳಲ್ಲಿ ಸೇರಿರುವದು. ಈ ಪಾಟಲಿ ಪುತ್ರಕ್ಕೆ ಗ್ರೀಕರು ಪಾಲಿಬೋಥಾ ಎಂದು ಕರೆಯುತ್ತಿದ್ದರು. ಗ್ರೀಕವೀರನಾದ ಸೆಲ್ಯು ಕಸ ನಿಕೇತರನ ಕಾಲದಲ್ಲಿ ( ಕ್ರಿ. ಪೂ. ೩೧೫ ) ಪಾಟಲಿಪುತ್ರದ ಸುತ್ತಳತೆಯು ೨೫ ಮೈಲುಗಳಿತ್ತೆಂದು ಗ್ರೀಕ ಐತಿಹಾಸಿಕರು ಹೇಳಿರುವರು. ಕ್ರಿ. ಶ. ೭ನೆಯ ಶತಮಾನ ದಿಂದ ಇದು ಕಡಿಮೆಯಾಗಿ ೧೨ ಮೈಲುಗಳಾಗಿತ್ತು. ಉತ್ತರಕ್ಕೆ ಭಾಗೀರಥಿಯು, ದಕ್ಷಿಣಕ್ಕೆ ವಿಂಧ್ಯಪರ್ವತವು, ಪೂರ್ವಕ್ಕೆ ಚಂಪಾವತೀನದಿಯು, ಪಶ್ಚಿಮಕ್ಕೆ ಹಿರಣ್ಯ ವತಿ, ಇಲ್ಲವೆ ಹಿರಣ್ಯವಾಹನದಿಯು ಈ ಮೇರೆಗಳ ನಡುವಿರುವ ದೇಶವು ಮಗಧರಾಜ್ಯ ವೆಂದು ಹೇಳಲ್ಪಡುತ್ತಿತ್ತು, ಇದರ ವ್ಯಾಸವು ೧೨೦ ಕ್ರೋಶಗಳು; ಲ೦ ಗ್ರಾಮ ಗಳು ಇಲ್ಲಿ ಇದ್ದವು. ತಿಬೇಟದ ಪ್ರಾಚೀನ ಗ್ರಂಥಕಾರರು ಸಂಪೂರ್ಣ ಭರತಖಂಡಕ್ಕೆ ಮಗಧ ಅಂದರೆ ಪುಣ್ಯವಂತವಾದದ್ದು ಇಲ್ಲವೆ ಪೂಜ್ಯರ ವಾಸಭೂಮಿ ಎಂದು ಕರೆ ದಿರುವರು. ಬೌದ್ದ ಯುಗದಲ್ಲಿಯೂ, ಅದರ ಮುಂದಿನ ಕಾಲದಲ್ಲಿಯೂ ಮಗಧದೇಶವ ಭರತಖಂಡದಲ್ಲಿ ಮುಖ್ಯವಾದ ಮತ್ತು ಸಮೃದ್ಧಿಯುಳ್ಳ ದೇಶವಾಗಿತ್ತು. ಇದೇ ಮಗಧ ದಲ್ಲಿ ಹರಿದ ನೈರಂಜನಾ ನದಿಯ ತೀರದಲ್ಲಿದ್ದ ಬೋಧಿವೃಕ್ಷದ ಬುಡದಲ್ಲಿ ಗೌತಮನು ಬುದ್ಧ ತ್ಯವನ್ನು ಪಡೆದನು. ಇದೇ ಮಗಧದಲ್ಲಿರುವ ಕುಕ್ಕುಟಪಾದ ಪರ್ವತದಮೇಲೆ ಕುಳಿತುಕೊಂಡು ಶಾಕ್ಯಮುನಿಯು ಹಲವು ವಾರೆ ತನ್ನ ಅಮೃತಸಮವಾದ ಉಪದೇಶ ವನ್ನು ಮಾಡಿದನು. ಇದೇ ಮಗಧದೇಶದ ರಾಜಗೃಹಪುರದಲ್ಲಿ ಬುದ್ಧದೇವನು ಬಿಂಬಿ ಸಾರರಾಜನಿಗೆ ತನ್ನ ಹೊಸಧರ್ಮದ ದೀಕ್ಷೆಯನ್ನು ಕೊಟ್ಟನು. ಈಗಲೂ ಬುದ್ಧಗಯೆ, ಕುಕ್ಕುಟಪಾದ, ರಾಜಗೃಹ, ಕುಶಾಗಾರಪುರ, ನಾಲಂದ, ಇಂದ್ರಶೀಲಗುಹೆ, ಕಸೋತಿಕ ವಿಹಾರ ಮೊದಲಾದ ಸ್ಥಾನಗಳು ಪವಿತ್ರ ತೀರ್ಥಗಳೆನಿಸಿ ದೇಶಪರದೇಶಗಳ ಜನರ ಭಕ್ತಿಗೆ ಪಾತ್ರವಾಗಿರುವವು. ಮಗಧರಾಜ್ಯವು ಹಾಳಾದ ಒಳಿಕ ಆಗಿಹೋದ ಗ್ರಂಥ ಕಾರರು ಮಗಧಸಾಮ್ರಾಜ್ಯವನ್ನು ಬಹಳಮಟ್ಟಿಗೆ ಹೊಗಳಿರುವರು. ಕಾಲಿದಾಸನು ರಘುವಂಶದಲ್ಲಿ ಇಂದುಮತೀ-ಸ್ವಯಂವರ-ಸಭಾ-ವರ್ಣನ-ಪ್ರಸಂಗದಲ್ಲಿ ಎಲ್ಲಕ್ಕೂ ಮೊದ ಲು ಮಗಧರಾಜನನ್ನು ಉಲ್ಲೇಖಿಸಿರುವನು. ಕುಶನ ಮಗನಾದ ವಸುವು ಗಿರಿವಜಪುರವನ್ನು ಸ್ಥಾಪಿಸಿದನೆಂದು ಹಿಂದೆ ಹೇಳಿ ದೆಯಷ್ಟೇ, ಇವನೇ ಅಲ್ಲಿಯ ಮೊದಲನೆಯ ರಾಜನೆಂದು ರಾಮಾಯಣದಲ್ಲಿ ಹೇಳಿದೆ.