ಪುಟ:ಅಶೋಕ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಧವಾ ಪ್ರಿಯದರ್ಶಿ. (wwwvvvvvvvvvvv. .. , - .' .2: A

  • - * * , - - ೪ - - * +

ಮೌರ್ಯವಂಶದ ಅರಸರ ಕಾಲದಲ್ಲಿ ಭರತಖಂಡದಲ್ಲಿ ೧೬ ಮುಖ್ಯ ರಾಜ್ಯಗಳಿ ದೈವ.* ಅವು:- ೧ ಅಂಗ ೫ ವೃಜಿ ೯ ಕುರು ೧೩ ಆಸಭಕಾ ೨ ಮಗಧ | ೬ ಮಲ್ಲ ೧೦ ಪಾಂಚಾಲ ೧೪ ಅವಂತಿ | ೩ ಕಾತಿ ೬ ಚೇದಿ ೧೧ ಮತ್ತ್ವ ೧೫ ಗಾಂಧಾರ | ೪ ಕೋಸಲ ೮ ವಂಗ ೧೨ ಸೂರಸೇನ ೧೬ ಕಾಂಭೋಜ. ಈ ೧೬ ರಾಜ್ಯಗಳ ಅರಸರಲ್ಲಿ ಪರಸ್ಪರ ವಿವಾಹಗಳು ನಡೆದಿದ್ದವು, ಒಮ್ಮೊ ಮೈ ಯಾವದೊಂದು ಕಾರಣದಿಂದ ಯುದ್ದಗಳೂ ಒದಗುತ್ತಿದ್ದವು. ಇವಲ್ಲದೆ ಇನ್ನೂ ಕೆಲವು ಸಣ್ಣ ಸಣ್ಣ ರಾಜ್ಯಗಳು ಇದ್ದವು. ಮಗಧರಾಜನು ಲಿಚ್ಛವಿ ಅಥವಾ ವೃಜಿ ಎಂಬ ಜನಾಂಗದ ಸಂಗಡ ಬಹುಕಾಲ ಹೋರಾಡಿ ಕೊನೆಗೆ 'ಜಯಹೊಂದಿದನು. ಬಳಿಕ ಅದೇ ಲಿಚ್ಛವಿಗಳನ್ನು ಕೂಡಿಕೊಂಡು ಬೇರೆ ಹಲವು ದೇಶಗಳನ್ನು ಜಯಿಸಿದನು. ಈ ಧನನಂದ ಮಹಾರಾಜನ ಕಾಲದಲ್ಲಿ ಮಗಧದೇಶವು ಸಂಪತ್ತಿಯಿಂದಲೂ, ಬಲ ದಿಂದಲೂ ಬಹಳ ಪ್ರಸಿದ್ದಿಯನ್ನು ಹೊಂದಿತ್ತು. ಸಣ್ಣ ಸಣ್ಣ ಎಷ್ಟೋ ಅರಸರು ಅವನ ಮಾಂಡಲಿಕರಾಗಿದ್ದರು. "ಎಷ್ಟೊ ಅರಸರು ಈತನನ್ನು ನೋಡಿ ಅಸೂಯೆಪಡುತ್ತಲೂ ಇದ್ದರು. ಈ ಕಾಲದಲ್ಲಿಯೇ ಚಂದ್ರಗುಪ್ತನೆಂಬವನು ಈ ಅರಸನ ವಿರುದ್ದವಾಗಿ ಅನೇಕ ಒಳತಂತ್ರಗಳನ್ನು ನಡೆಸಿದ್ದನು. ಧನನಂದನು ಇದನ್ನು ತಿಳಿದು ಚಂದ್ರಗುಪ್ತ ನನ್ನು ತನ್ನ ರಾಜ್ಯದಿಂದ ಹೊರಗೆ ಹಾಕಿದನು. ಇದೇ ಸಮಯದಲ್ಲಿ ದಿಗ್ವಿಜಯಿಯಾದ ಸೆಕಂದರಶಹನೆಂಬ ಮಹಾವೀರನು ( ಅಲೆಕ್ಸಂದರ ) ದೊಡ್ಡ ಸೈನ್ಯದೊಡನೆ ಪಂಚನದವನ್ನು ನಡುಗಿಸಿ ಶತದ್ರುವಿನ ಮೇರೆಯವರೆಗೆ ಬಂದಿದ್ದನು. ಆಗ ಭರತಖಂಡದಲ್ಲಿ ಸಣ್ಣ ಸಣ್ಣ ರಾಜ್ಯಗಳು ಇದ್ದವು, ಅರಸರೆಲ್ಲ ಮಹಾ ಪರಾಕ್ರಮಿಗಳೂ, ವಿಪುಲಸೈನ್ಯವುಳ್ಳವರೂ ಆಗಿದ ರು. ಅವರೆಲ್ಲರು ಒಟ್ಟಾದರೆ ಅವರನ್ನು ಜಯಿಸುವದು ಅಸಂಭವವಾಗಿತ್ತು. ಆದರೆ ಅವರು ಪರಸ್ಪರ ಅಸೂಯೆಯಿಂದಲೂ, ಅಂತಃಕಲಹಗಳಿಂದಲೂ ನಿರ್ವಿಯ್ರರಾಗಿದ್ದರು. ಇದ ನ್ನೆಲ್ಲ ತಿಳಿದು ಅಲೆಕ್ಸಂದರನು ಒಂದೊಂದೇ ರಾಜ್ಯವನ್ನು ಆಕ್ರಮಿಸಹತ್ತಿದನು. ಚಂದ್ರ ಗುಪ್ತನು ಅಲೆಕ್ಸಂದರನ ಈ ಮುತ್ತಿಗೆಯನ್ನೂ ಗೆಲುವನ್ನೂ ನೋಡಿ ಮನಸ್ಸಿನಲ್ಲಿ ಮರು ಗಹತ್ತಿದನು. ಅಲೆಕ್ ಜಾಂಡರನಿಗೆ ಮಗಧರಾಜ್ಯವನ್ನು ಜಯಿಸುವದು ಮಾತ್ರ ಅಸಾಧ್ಯ ವೆಂದು ತೋರಿತು. ಮಗಧವನ್ನಾಳುತ್ತಿದ್ದ ಧನನಂದ ಮಹಾರಾಜನ ಬಳಿಯಲ್ಲಿ ೨ ಲಕ್ಷ ಕಾಲಾಳುಗಳು, ೨೦ ಸಾವಿರ ರಾವುತರು, ೨ ಸಾವಿರ ರಥಗಳು, ೪ ಸಾವಿರ ಆನೆಗಳು

  • Buddhist India P. 23 ಮತ್ತು ಅಂಗಾರ ನಿಕಾಜು.

ಕೆಲವರ: ನಂದನ:ದಸದನ 2ಗೆ ಮಗಧದ ಜನಾಗಿದ್ದ ಸಿದ, # ೨ನರ.