ಪುಟ:ಅಶೋಕ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

to ಅಶೋ (ಅಥವಾ ಪ್ರಿಯದರ್ಶಿ ನೋಡಿ ಗುಪ್ತವಾಗಿ ಚಂದ್ರಗುಪ್ತನಿಗೆ ಸಹಾಯಮಾಡತೊಡಗಿದನು, ನಂದವಂಶದ ನಾಶಕ್ಕೂ, ಮೌರ್ಯವಂಶದ ಸ್ಥಾಪನೆಗೂ ಈ ಚಾಣಕ್ಯನೇ ಬಹಳಮಟ್ಟಿಗೆ ಕಾರ ಣವು, ಇವನಿಗೆ ವಿಷ್ಣು ಗುಪ್ತನೆಂದೂ, ಕೌಟಿಲ್ಯನೆಂದೂ ಇತಿಹಾಸದಲ್ಲಿ ಹೆಸರುಗಳಿರು ವವು, ಈ ಮೊದಲೇ ಸಿಕಂದರಶಹನ ( ಅಲೆಕ್ಷಂದರನ ) ಬಲವಾದ ದಾಳಿಯಿಂದ ಮಗಧವೂ ಭರತಖಂಡದ ಬೇರೆ ಭಾಗಗಳೂ ಅತಿಶಯ ವಿಸ್ಥಲಿತವಾಗಿದ್ದವು. ಮತ್ತು ಆ ದಾಳಿಯಿಂದಾದ ಹಾನಿಯು ಇನ್ನೂ ಮಾಜದಿರುವಾಗಲೇ ಚಂದ್ರಗುಪ್ತನ ದಾಳಿಯು ಆರಂಭವಾಗಲು ಮಗಧದೇಶಕ್ಕೆ ಅದನ್ನು ತಾಳಿಕೊಳ್ಳುವದಾಗಲಿಲ್ಲ. ಆ ಯುದ್ಧದಲ್ಲಿ ಧನನಂದನು ಹತನಾದನು. ಚಂದ್ರಗುಪ್ತನು ಮಗಧಸಾಮ್ರಾಜ್ಯವನ್ನು ಕೈವಶಮಾಡಿಕೊಂಡು ಪಾಟಲಿಪುತ್ರದಲ್ಲಿ ರಾಜಧಾನಿಯನ್ನು ಸ್ಥಾಪಿಸಿ ಸಿಂಹಾಸನವೇ ರಿದನು, ಬಲಿಷ್ಟವಾದ ತನ್ನ ಸೇನೆಯ ಸಹಾಯದಿಂದ ಚಂದ್ರಗುಪ್ತನು * ಭರತ ಖಂಡದ ಬಹಳ ಭಾಗದಲ್ಲಿ ತನ್ನ ವರ್ಚಸ್ಸನ್ನು ನೆಲೆಗೊಳಿಸಿದನು, ಮತ್ತು ಏಕಚ್ಚತ್ರ ಸಾಮ್ರಾಜ್ಯವನ್ನು ಸ್ಥಾಪಿಸುವದರಲ್ಲಿ ತನ್ನ ಎಲ್ಲ ಬುದ್ದಿ, ಶಕ್ತಿಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡನು. ಈ ಮಹಾರಾಜ ಚಕ್ರವರ್ತಿ ಚಂದ್ರಗುಪ್ತನೇ ಮೌರ್ಯ ವಂಶಸ್ಥಾಪಕನು. ಅಲೆಕ್ಷಂದರನ ಮರಣವಾದ ೨ ವರ್ಷಗಳ ತರುವಾಯ ಕ್ರಿ. ಪೂ. ೩೨೧ ರಲ್ಲಿ ಆತನ ವಿಸ್ತಾರವಾದ ಸಾಮ್ರಾಜ್ಯವು ಎರಡನೆಯ ಸಾರೆ ವಿಭಾಗಿಸಲ್ಪಟ್ಟಿತು, ವೀರಶ್ರೀ ಷ್ಣನಾದ ಸೆಲ್ಯುಕಸನಿಕೇತರನು ಬಾಬಿಲೋನದ ಕ್ಷತ್ರದ ಪದವನ್ನು ಹೊಂದಿದನು. ಬಳಿಕ ೬ ವರ್ಷಗಳಾದ ಮೇಲೆ ಅವನು ಪ್ರಬಲ ವೈರಿಯಾದ ಅಂಟಗೋನಾಸನಿಂದ ಪರಾಜಿತನಾಗಿ ಮಿಸರದೇಶಕ್ಕೆ ಓಡಿಹೋಗಿದ್ದನು. ಮುಂದೆ ಮೂರು ವರ್ಷಗಳ ಪ್ರಯತ್ನದಿಂದ ಸೆಲ್ಯು ಕಸನು ಬಾಬಿಲೋನವನ್ನು ಪುನಃ ಆಕ್ರಮಿಸಿ ತನ್ನ ಪ್ರತಾಪ ವನ್ನು ಮತ್ತೆ ನೆಲೆಗೊಳಿಸಿದನು. ಆತನು ಬಾಕಿಯಾ ( ಬಾಕ್ತಿಕ ) ದೇಶವನ್ನು ಆಕ್ರ ಮಿಸಿ ಅಲ್ಲಿ ತನ್ನ ಅಧಿಕಾರವನ್ನು ನೆಲೆಗೊಳಿಸಿದನು. ಬಳಿಕ ಸೆಲ್ಯು ಕಸನು ಜಯದಿಂದು ಬ್ಬಿದ ತನ್ನ ಸೇನೆಯಿಂದ ಭರತಖಂಡವನ್ನಾ ಕ್ರಮಿಸುವ ಸಂಕಲ್ಪ ಮಾಡಿದನು. ಅವನಿಗೆ ಭರತಖಂಡದಲ್ಲಿ ಗ್ರೀಕರು ಸಂಪಾದಿಸಿದ ಸೀಮೆಗಳನ್ನು ಮತ್ತೆ ಆಕ್ರಮಿಸಬೇಕೆಂಬ ಇಚ್ಛೆಯು ಬಲವಾಗಿತ್ತು. ಆದರೆ ಚಂದ್ರಗುಪ್ತನು ದೊಡ್ಡ ಸೇನೆಯೊಡನೆ ಸ್ವದೇಶರಕ್ಷ ಣೆಗಾಗಿ ಗ್ರೀಕಸೈನ್ಯವನ್ನು ಎದುರಿಸಿದನು. ಚಂದ್ರಗುಪ್ತನ ಪರಾಕ್ರಮವನ್ನು ನೋಡಿ ಜಯಾಶೆಯುಳ್ಯ ಗ್ರೀಕಸೇನಾಪತಿ ಸೆಲ್ಯುಕಸನಿಕೇತರನು ಭರತಖಂಡವನ್ನು ಜಯಿಸ ಬೇಕೆಂಬ ಆಶೆಯನ್ನು ಬಿಟ್ಟಿದ್ದಲ್ಲದೆ ಭರತಖಂಡದ ಮೇರೆಯ ಪ್ರದೇಶಗಳನ್ನೂ ಬಿಟ್ಟು ಹೋಗಿ ಒಪ್ಪಂದವನ್ನು ಕೇಳಿಕೊಂಡನು. ಈ ಒಪ್ಪಂದವೆಂದರೆ ಅಪಜಯದ ಒಪ್ಪಿ

  • Vence111 Smith, P, 12