ಪುಟ:ಅಶೋಕ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. •24ಧh* #//// --' (v * * * * // ••• ಗೆಯೇ ಸರಿ, ಒಪ್ಪಂದದ ನಿಯಮಕ್ಕನುಸರಿಸಿ ಸೆಲ್ಯುಕಸನ ಮಗಳನ್ನು ಚಂದ್ರಗುಪ್ತನು ಮದುವೆಯಾಗಬೇಕೆಂದು ಗೊತ್ತಾಯಿತು. ಪರೋಪನಿಸದಾಯಿ (Paropaisalai) ಆರಿಯಾ ( Aria ) ಆರಕೋಸಿಯಾ ( Arachosia ) ಅಂದರೆ ಕಾಬೂಲ, ಹಿರಾಟ, ಕಂದಹಾರ ಮೊದಲಾದ ಪ್ರದೇಶವೆಲ್ಲ ಮಗಧಸಾಮ್ರಾಜ್ಯಕ್ಕೆ ಸೇರಿದ್ದೆಂದು ಗ್ರೀಕರು ಒಪ್ಪಿದರು. ಚಂದ್ರಗುಪ್ತನು ಸೆಲ್ಕು ಕಸನಿಗೆ ೫೦೦ ಆನೆಗಳನ್ನು ಕೊಟ್ಟನು. ಈ ಕಾಲದಿಂದ ಭರತಖಂಡದಲ್ಲಿ ಗ್ರೀಕ ಆಧಿಪತ್ಯವು ಕೊನೆಯ ಅಪ್ಪಣೆಯನ್ನು ಪಡೆ ದುಕೊಂಡಿತು, ಅನಾಧಾರಣವಾದ ಬಲ ಮತ್ತು ಅಪೂರ್ವವಾದ ಪ್ರತಿಭೆ ಇವುಗಳ ಸಹಾಯದಿಂದ ಮೌರ್ಯಚಂದ್ರಗುಪ್ತನು ಭರತಖಂಡದಲ್ಲಿ ವಿಶಾಲವಾದ ಸಾಮ್ರಾಜ್ಯ ವನ್ನು ಸ್ಥಾಪಿಸಿದನು. ಈ ವೀರಪುರುಷನೇ « ದೇವಾನಾಂ ಪ್ರಿಯಃ ” ಎನಿಸಿದ ಅಶೋಕಮಹಾರಾಜನ ಅಜ್ಜನು. ಭರತಖಂಡದಲ್ಲಿ ಹೊಸದಾಗಿ ಸ್ಥಾಪಿತವಾದ ಈ ಸಾಮ್ರಾಜ್ಯದ ಸಾಮಾಜಿಕ, ರಾಜನೈತಿಕ ಸ್ಥಿತಿಗಳು ಹೇಗೆ ಇದ್ದವೆಂಬದನ್ನು ಇಲ್ಲಿ ಆಲೋಚಿಸುವದು ಅಪ್ರಾಸಂಗಿಕ ವಾಗಲಾರದು. ಚಂದ್ರಗುಪ್ತನ ವಿಷಯವಾಗಿ ಒಂದೆರಡು ದಂತಕಥೆಗಳು ಪ್ರಚಲಿತವಾಗಿರು ವವು, ಪಾಠಕರ ತಿಳುವಳಿಕೆಗಾಗಿ ಇಲ್ಲಿ ಅವುಗಳನ್ನು ಉಲ್ಲೇಖಿಸುವೆವು, ಒಂದಾ ನೊಂದು ಸಮಯದಲ್ಲಿ * ಪ್ರಸಂಗಾನುಸಾರವಾಗಿ ಚಂದ್ರಗುಪ್ತನು ಒಬ್ಬ ಬಡ ವಿಧವೆ ಯ ಗುಡಿಸಲಲ್ಲಿ ವಾಸಮಾಡಿದ್ದನು. ಒಂದುದಿವಸ ಆ ಹೆಂಗಸು ತನ್ನ ಮಕ್ಕಳಿಗೆ ರೊಟ್ಟಿಯನ್ನು ಮಾಡುತ್ತಿದ್ದಳು. ಮಕ್ಕಳನ್ನು ಬಳಿಯಲ್ಲಿ ಕುಳ್ಳಿರಿಸಿಕೊಂಡು ಒಂದೊಂದೇ ಬೆಂದುಬಂದಂತೆ ಅದನ್ನು ಅವರಿಗೆ ತಿನ್ನು ವದಕ್ಕೆ ಕೊಡುತ್ತಿದ್ದಳು. ಒಬ್ಬ ಮಗನು ರೊಟ್ಟಿಯ ಅಂಚನ್ನು ಬಿಟ್ಟು ನಡುವಿನದಷ್ಟನ್ನೇ ತಿಂದು ಮತ್ತೆ ಬೇಡಹತ್ತಿದನು. ಅದಕ್ಕೆ ಸಿಟ್ಟಾಗಿ ಅವಳು - ಈ ಹುಡುಗನ ಪದ್ಧತಿಯು ಚಂದ್ರಗುಪ್ತನ ರಾಜ್ಯವಾಕ್ರಮಿ ಸುವ ಪದ್ಧತಿಯಂತೆಯೇ ಇದೆ, ಎಂದು ಅಂದಳು. ಆಗ ಆ ಹುಡುಗನು ಅವಾ ನಾನೇನು ಮಾಡಿದೆ ? ಚಂದ್ರಗುಪ್ತನಿಗೂ ನನಗೂ ಏತರ ಹೋಲಿಕೆ ? ಎಂದು ಕೇಳಿ ದನು, ಅದಕ್ಕೆ ತಾಯಿಯು “ ಮಗುವೇ ನೀನು ರೊಟ್ಟಿಯ ಅಂಚನ್ನು ಬಿಟ್ಟು ನಡುವಿನ ದಕ್ಕೆ ಮೊದಲು ಕೈ ಹಾಕುವೆ; ಚಂದ್ರಗುಪ್ತನೂ ಚಕ್ರವರ್ತಿಯಾಗಬೇಕೆಂಬ ಆಶ ಯಿಂದ ಭರತಖಂಡದ ಮೇರೆಯ ಪ್ರದೇಶಗಳನ್ನು ಜಯಿಸದೆ ಕೇವಲ ಅದರ ನಡುವಿನ ಭಾಗಗಳನ್ನೇ ಆಕ್ರಮಿಸುತ್ತಿರುವನು, ಕೊನೆಗೆ ಆತನ ಸೈನ್ಯವು ನಾಲ್ಕೂ ದಿಕ್ಕುಗಳಿಂದ ಸುತ್ತುಗಟ್ಟಲ್ಪಟ್ಟು ನಾಶಹೊಂದುವದು, ಇದೇ ಚಂದ್ರಗುಪ್ತನ ಮೂಢತನವು” ಎಂದು

  1. Vincent Smith. # ಮಹಾವಂಶದ ಟೀಕೆಯಲ್ಲಿ- ಪುಟ.೧೨೩, Polognbo Edition).