ಪುಟ:ಅಶೋಕ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ.

  1. ೧೧/೧೧:

ಹೇಳಿದಳು. ಚಂದ್ರಗುಪ್ತನು ಈ ಮಾತುಗಳನ್ನು ಕೇಳಿ ತನ್ನ ಆಕ್ರಮಣಪದ್ದತಿಯನ್ನು ಬದಲಿಸಿದನಂತೆ. ಚಂದ್ರಗುಪ್ತನ ವಿಷಯವಾಗಿ ಇನ್ನೊಂದು ಕಥೆಯುಂಟು, ಅದರ ಸಾರಾಂಶವೇನಂದರೆ-ಚಂದ್ರಗುಪ್ತನು ಗ್ರೀಕಪಾಳಯದಿಂದ ಹೊರಗೆಹಾಕಲ್ಪಟ್ಟಾಗ ಒಂದು ದಿವಸ ಅಡವಿಯಲ್ಲಿ ನಿದ್ದೆ ಹತ್ತಿ ಮಲಗಿರಲು ಒಂದು ಸಿಂಹವು ಬಂದು ಪ್ರೇಮ ದಿಂದ ಆತನ ಮೈಯನ್ನು ನೆಕ್ಕಿತಂತೆ, ಇನ್ನೊಮ್ಮೆ ರಾಜ್ಯವನ್ನು ಆಕ್ರಮಿಸುವದಕ್ಕಾಗಿ ಅನುಚರರೊಡನೆ • ಚಂದ್ರಗುಪ್ತನು ಆಲೋಚನೆಮಾಡುತ್ತಿರುವಾಗ ಒಂದು ಕಾಡಾ ನೆಯು ಬಂದು ಆತನನ್ನು ಬೆನ್ನ ಮೇಲೆ ಕುಳ್ಳಿರಿಸಿಕೊಳ್ಳಬೇಕೆಂದು ಎದುರಿಗೆ ನಿಂತಿತಂತೆ. ಈ ತರದ ದಂತಕಥೆಗಳಿಗೆ ಏನೂ ಬೆಲೆಯಿಲ್ಲ, ಯಾವದೊಂದು ವಿಷಯದಲ್ಲಿ ಯಾರಾ ದರೂ ಅತಿಶಯ ಶಕ್ತಿಯುಳ್ಳವರಾದರೆ ಅವರ ವಿಷಯವಾಗಿ ಈ ತರದ ಹಲವು ಜನ ವಾರ್ತೆಗಳು ಹುಟ್ಟುವವು. ಇಂಥ ದಂತಕಥೆಗಳಿಂದ ಚಂದ್ರಗುಪ್ತನು ಆ ಕಾಲದಲ್ಲಿ ಒಬ್ಬ ಅಸಾಧಾರಣಶಕ್ತಿಯುಳ್ಳವನೂ, ತೀಕ್ಷಬುದ್ಧಿಯುಳ್ಳವನೂ ಎಂದು ಎಣಿಸಲ್ಪ ಡುತ್ತಿದ್ದನೆಂಬದು ಮಾತ್ರ ಫಲಿತವಾಗುವದು. ನಂದವಂಶದ ನಾಶವನ್ನೂ, ಚಂದ್ರಗುಪ್ತನ ಸಾಮ್ರಾಜ್ಯ ಸ್ಥಾಪನೆಯನ್ನೂ ಅವ ಲಂಬಿಸಿ ಕ್ರಿ. ೮ನೆಯ ಶತಮಾನದಲ್ಲಿ ಮುದ್ರಾರಾಕ್ಷಸವೆಂಬ + ಒಂದು ಐತಿಹಾಸಿಕ ನಾಟಕವು ರಚಿತವಾಗಿರುವದು. ೫೦ ವರ್ಷಗಳ ಪೂರ್ವದಲ್ಲಿ ಲ್ಯಾಸೇನ ಎಂಬವರು ಬೇರೆ ಬೇರೆ ದಂತಕಥೆಗಳಿಂದಲೂ, ಮುಖ್ಯವಾಗಿ ಆ ನಾಟಕದಿಂದಲೂ ಚಂದ್ರಗುಪ್ತನ ನಿಜವಾದ ಇತಿಹಾಸವನ್ನು ಬರೆಯುವದಕ್ಕೆ ಬಹಳ ಪರಿಶ್ರಮಮಾಡಿರುವರು. ಚಂದ್ರಗುಪ್ತನು ತನ್ನ ಅಪೂರ್ವವಾದ ಪ್ರತಿಭೆಯಿಂದ ಏಕಚ್ಛತ್ರಸಾಮ್ರಾಜ್ಯ ವನ್ನು ಸ್ಥಾಪಿಸಿದನೆಂಬ ವಿಷಯವು ಈ ದೇಶದ ಗ್ರಂಥಗಳಲ್ಲಿಯೂ, ಪರದೇಶದ ಗ್ರಂಥ ಗಳಲ್ಲಿಯೂ ನಮಗೆ ದೊರೆಯುವದು, ಗ್ರೀಕವಕೀಲನಾದ ಮೆಗಾಸ್ಲಿ ನೀಸನು ಪಾಟಲಿ ಪುತ್ರ ರಾಜಧಾನಿಯಲ್ಲಿ ೬ ವರ್ಷ ವಾಸಮಾಡಿದ್ದನು. ಆತನು ಚಂದ್ರಗುಪ್ತನ ರಾಜ್ಯ ಶಾಸನಪದ್ಧತಿಯು ಎಷ್ಟು ಯೋಗ್ಯವಾಗಿಯೂ, ನಿಯಮಬದ್ದವಾಗಿಯೂ ಇತ್ತೆಂಬ ದನ್ನು ನೋಡಿ ಸ್ವದೇಶಕ್ಕೆ ತಿರುಗಿ ಹೋದಬಳಿಕ ಬರೆದಿಟ್ಟಿದ್ದನು. ಅವನು ಬರೆದ ವಿವರಣವು ಈಗ ಉಪಲಬ್ದವಿಲ್ಲ. ಆದರೂ ಬೇರೆ ಬೇರೆ ಗ್ರೀಕ ಐತಿಹಾಸಿಕರು ಆತನು ಬರೆದ ವಿವರಣದಿಂದ ಉದ್ಧರಿಸಿ ತೆಗೆದುಕೊಂಡ ಭಾಗಗಳೇ ಈ ಕಾಲಕ್ಕೆ ಮೂಲಭೂತಸಂಗತಿಗಳಾಗಿರುವವು. • Buddhist India P. 270. + ವಿಶಾಖದತ್ತ ಇಲ್ಲವೆ ವಿಶಾಖದೇವನೆಂಬವನು ಇದನ್ನು ರಚಿಸಿದನು, ಜಸ್ಟಿಸ್ ಪಿಲಾಂಗ್ ಎಂಬವರು ೭ನೆಯ ಶತಕದ ಕೊನೆಯಲ್ಲಿ ಇಲ್ಲವೆ ೮ನೆಯ ಶತಕದ ಆರಂಭದಲ್ಲಿ ಈ ನಾಟಕವು ರಚಿಸಿ ಟ್ಟಿತೆಂದು ಬರೆದಿರುವರು,