ಪುಟ:ಅಶೋಕ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*ಅಶೋಕ ಅಥವಾ ಪ್ರಿಯದರ್ಶಿ. ೧೩ مرمرمرم سر موع V// - * --'Y - * * //// # + ' + * * * * *//// frr Afy ಮೆಗಾಸ್ಟಿನೀಸನು * ಬರೆದಿರುವದೇನಂದರೆ-ಭರತಖಂಡದ ಸರ್ವ ಶ್ರೇಷ್ಠ ನಗರವಾದ ಪಾಟಲಿಪುತ್ರವು ಭಾಗೀರಥೀ-ಹಿರಣ್ಯತಿಗಳ ಸಂಗಮಸ್ಥಳದಲ್ಲಿರುವದು. ಈ ನಗರವು ೫ ಕೋಶ ಉದ್ದವಾಗಿಯೂ, ೨ ಕೋಶ ಅಗಲವಾಗಿಯೂ ಇರುವದು. ಪಟ್ಟಣದ ಸುತ್ತಲು ಕೋಟೆಯೂ, ಅಗಳತೆಯೂ ಇರುವವು. ಅಗಳತೆಯು ೪೦೦ಮೊಳ ವಿಶಾಲವಾಗಿಯೂ ೩೦ ಮೊಳ ಆಳವಾಗಿಯೂ ಇರುವದು, ಕೋಟೆಗೆ ೫೭೦ ಕೊತ್ತಳಗಳೂ, ೬೪ ಅಗಸೆಗಳೂ ಇರುವವು. ರಾಜ್ಯ ಪದ್ಧತಿಯ ವಿಷಯವಾಗಿ ಮೆಗಾಸ್ಟಿನೀಸನು ಬರೆದಿರುವದೇನಂದರೆ-- ರಾಜ್ಯದ ಮುಖ್ಯ ಮುಖ್ಯ ಕಾಮದಾರರಲ್ಲಿ ಕೆಲವರು ವ್ಯಾಪಾರದ ಪೇಟೆಗಳನ್ನು ನೋಡುವರು; ಕೆಲವರು ಸೈನ್ಯ ವ್ಯವಸ್ಥೆಯನ್ನು ನೋಡುವರು; ಕೆಲವರು ಹೊಳೆ ಕಾಲುವೆ ಮೊದಲಾದವುಗಳನ್ನು ನೋಡುತ್ತ ಸಂಚಾರಮಾಡಿ ಭೂಮಿಯ ಅಳೆಯುವ ಕೆಲಸವನ್ನೂ, ಭೂಮಿಗೆ ಯಾವಾಗಲೂ ಸಮವಾಗಿ ನೀರು ದೊರೆಯುವ ವ್ಯವಸ್ಥೆ ಯನ್ನೂ ಮಾಡುವರು. ಕಂದಾಯವನ್ನೆತ್ತುವದಕ್ಕೆ ಬೇರೆ ಕಾಮದಾರರಿದ್ದರು. ಅವರು ಭೂಮಿಯ ಸ್ಥಿತಿ ಯನ್ನೂ, ಒಕ್ಕಲಿಗರು, ಬಡಗಿಗಳು, ಕಮ್ಮಾರರು, ಕಳೆಗಾರರು ಮೊದಲಾದವರ ಉ ದ್ಯೋಗಗಳನ್ನೂ ನೋಡುತ್ತ ದೇಶದಲ್ಲಿ ಸಂಚರಿಸುವರು, ಮಾರ್ಗ, ಸೇತುವೆ ಮೊದ ಲಾದವುಗಳನ್ನು ಮಾಡಿಸುವ ಕಾಮದಾರರು ಪ್ರತ್ಯೇಕವಾಗಿ ಇದ್ದರು. ಮಾರ್ಗದಲ್ಲಿ ಅರ್ಧಕ್ರೋಶಕ್ಕೊಂದರಂತೆ ಅಂತರವನ್ನು ತೋರಿಸುವ ಚಿಹ್ನಗಳಿದ್ದವು. ಪಟ್ಟಣದ ಅಭಿವೃದ್ಧಿಗಾಗಿ ನಿಯಮಿಸಲ್ಪಟ್ಟ ಕಾಮದಾರರಲ್ಲಿ ೬ ವಿಭಾಗಗಳಿದ್ದವು, ಅವು:- (೧), ಶ್ರಮ ಶಿಲ್ಪವಿಭಾಗ-ಈ ವಿಭಾಗದ ಕಾಮದಾರರು ಕಸಬು ಶಿಲ್ಪ ಗಳ ಸಂಬಂಧವಾದ ಪ್ರತಿಯೊಂದು ವಿಷಯದ ಕಡೆಗೆ ಲಕ್ಷ ಕೊಡುತ್ತಿದ್ದರು. (೨), ಪರದೇಶದವರ ಆತಿಥ್ಯ- ಈ ಕಾಮದಾರರು ಯಾವನೊಬ್ಬ ಪರ ದೇಶದ ಮನುಷ್ಯನು ಬಂದರೆ ಅವನಿಗೆ ಇಳಿಯುವ ಸ್ಥಳವನ್ನು ಕೊಡುವದಲ್ಲದೆ ಸೇವೆಗೆ ಆಳುಗಳನ್ನು ಕೊಡುತ್ತಿದ್ದರು. ಈ ಸೇವಕರು ಆ ಪರದೇಶದವನ ಕಾರ್ಯಗಳ ಕಡೆಗೆ ಲಕ್ಷ ಕೊಡುತ್ತಿದ್ದರು. ದೇಶವನ್ನು ಬಿಟ್ಟು ಹೋಗುವವರೆಗೆ ಈ ಸೇವಕರು ಅವನನ್ನು ಹಿಂಬಾಲಿಸಿರುವರು. ಯಾವನೊಬ್ಬ ಪರದೇಶದ ಮನುಷ್ಯನು ಮಡಿದರೆ ಆತನ ಆಸ್ತಿಯು ಅವನ ಉತ್ತರಾಧಿಕಾರಿಗೆ ಕೊಡಲ್ಪಡುತ್ತಿತ್ತು. ಆತನು ಬೇನೆಬಿದ್ದರೆ ಆತನ ಉಪಚಾರದ ವ್ಯವಸ್ಥೆಯೂ, ಸತ್ತರೆ ಶವಸಂಸ್ಕಾರದ ವ್ಯವಸ್ಥೆಯೂ ಮಾಡಲ್ಪಡು ತಿದ್ದವು. (೩), ಜನನ ಮರಣವಿಭಾಗ-ಈ ವಿಭಾಗದ ಕಾಮದಾರರು ರಾಜ್ಯದ ಎಲ್ಲ ಪ್ರಜೆಗಳ ಜನನಮರಣಗಳ ನಿಜವಾದ ಲೆಕ್ಕವನ್ನಿಡುವರು.