ಪುಟ:ಅಶೋಕ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಅಶೋಕ ಅಥವಾ ಪ್ರಿಯದರ್ಶಿ. ••••••••••••••••••••••••••••••••••••••••• ರಥಗಳಿಗೆ ಎರಡಾಗಲಿ, ನಾಲ್ಕಾಗಲಿ ಕುದುರೆಗಳನ್ನು ಹೂಡುತ್ತಿದ್ದರು, ಪ್ರತಿ ಯೊಂದು ರಥಕ್ಕೆ ಇಬ್ಬರು ಯೋದ್ದಾರರೂ, ಒಬ್ಬ ಸಾರಥಿಯೂ ಗೊತ್ತಾಗಿರುತ್ತಿದ್ದರು. ಅರಸನ ರಥಕ್ಕೆ ಕುದುರೆಗಳನ್ನು ಹೂಡುವರು. ಯುದ್ಧದ ಆನೆಗಳ ಮೇಲೆ ೩ ಜನ ಭಟ ರೂ ಒಬ್ಬ ಮಾವುತನೂ ಕುಳಿತುಕೊಳ್ಳುವರು, ಪದಾತಿಗಳು ಒಂದು ಆಳು ಉದ್ದವಾದ ಧನುಸ್ಸುಗಳನ್ನು ಧರಿಸುವರು; ಮತ್ತು ಎಡಗೈಯಲ್ಲಿ ಚರ್ಮದ ಬತ್ತಳಿಕೆಯನ್ನು ಉಪ ಯೋಗಿಸುವರು, ಎಲ್ಲರೂ ಖಡ್ಗಗಳನ್ನು ಧರಿಸುವರು. ಆ ಖಡ್ಡಗಳು ೩ ಮೊಳ ಉದ್ದ ವಾಗಿದ್ದವು. ದ್ವಂದ್ವ ಯುದ್ಧವು ನಡೆದಾಗ ಈ ಖಡ್ಗಗಳನ್ನು ಅವರು ಎರಡೂ ಕೈಗಳಿಂದ ಉಪಯೋಗಿಸಿಕೊಳ್ಳುವರು, ಗ್ರಾಮಗಳಲ್ಲಿಯೂ ಅವುಗಳ ಕಾರಭಾರವನ್ನು ನಡೆ ಸುವದಕ್ಕೆ ಮೊದಲು ಹೇಳಿದಂತೆ ಕಾಮದಾರರ ವರ್ಗಗಳಿದ್ದವು. ಮೆಗಾಸ್ಥಿನೀಸನು ಭರತಖಂಡದ ಕೃಷಿಯ ಉತ್ಕರ್ಷವನ್ನೂ, ಭೂಮಿಗಳ ಸಾರವನ್ನೂ ಸುವರ್ಣ , ಮಣಿ, ಮುಕ್ತಾ, ವಜ್ರಖಚಿತವಾದ ಶಿಲ್ಪ ಚಾತುರ್ಯವನ್ನೂ, ಜನರ ಸರಲವಾದ ಆಚರಣ ವನ್ನೂ, ಉತ್ಸಾಹದಿಂದ ಜರುಗುವ ಧಾರ್ಮಿಕ ಉತ್ಸವಗಳನ್ನೂ, ವಿದ್ಯಾನುರಾಗವನ್ನೂ ನೋಡಿ ಮರುಳಾಗಿದ್ದನು. ಈ ರಾಜ್ಯಶಾಸನಪದ್ಧತಿಯಲ್ಲಿ ಸ್ವಾಯತ್ತ ಶಾಸನ (ಪ್ರಜಾತಂತ್ರ ದ ವ್ಯವಸ್ಥೆಯ ಕಂಡುಬರುತ್ತಿತ್ತು. ಆ ಕಾಲದಲ್ಲಿ ಭರತಖಂಡದಲ್ಲಿ ಪಟ್ಟಣಗಳ ಸಂಖ್ಯೆಯು ಹೆಚ್ಚಾ ಗಿರಲಿಲ್ಲ. ಆದರೆ ಗ್ರಾಮಗಳು ಸಮೃದ್ಧವಾಗಿಯೂ, ಮನೋಹರವಾಗಿಯೂ ಇದ್ದವು. ಹೊಲಗಳ ಪ್ರದೇಶದ ಸುತ್ತಲು ಗ್ರಾಮಗಳು ನೆಲೆಗೊಂಡಿದ್ದವು, ಒಂದೊಂದು ಗ್ರಾಮಕ್ಕೆ ಕೆಲವು ಹಳ್ಳಿಗಳು ಸೇರಿರುತ್ತಿದ್ದವು, ಈ ಎಲ್ಲ ಹಳ್ಳಿಗಳಿಗೆ ಒಬ್ಬ ಮುಖ್ಯ ಮನುಷ್ಯನು ಆರಿಸಲ್ಪಡುತ್ತಿದ್ದನು. ಅವನು ಗ್ರಾಮಗಳ ಸ್ಥಿತಿಯನ್ನೂ ಪ್ರಜೆಗಳ ಸುಖ ದುಃಖಗಳನ್ನೂ ರಾಜನಿಗೆ ಇಲ್ಲವೆ ಮುಖ್ಯ ಕಾಮದಾರನಿಗೆ ತಿಳಿಸುವನು. ರಾಜನಾಗಲಿ, ಮುಖ್ಯ ಕಾಮದಾರನಾಗಲಿ ಗ್ರಾಮವನ್ನು ನೋಡುವದಕ್ಕೆ ಬಂದರೆ ಈ ಮುಖ್ಯ ಮನು ಷ್ಯನೇ ದಾರಿಗಳನ್ನು ಸ್ವಚ್ಛ ಮಾಡಿಸುವದು, ಸರಿಪಡಿಸುವದು, ಅವರ ಆಹಾರಾದಿಗಳ ವ್ಯವಸ್ಥೆ ಈ ಎಲ್ಲ ಕೆಲಸಗಳನ್ನು ಮಾಡುವನು. ಗ್ರಾಮಸಭೆಗಳಿಗೆ ಅವನೇ ಅಧ್ಯಕ್ಷನು. ಗ್ರಾಮವಾಸಿಗಳು ಒಟ್ಟುಗೂಡಿ ಸಭಾಗೃಹಗಳನ್ನು ಇಲ್ಲವೆ ಧರ್ಮಶಾಲೆಗಳನ್ನು ಕಟ್ಟಿಸು ವದು, ಕೆರೆಬಾವಿಗಳನ್ನು ಕಡಿಸುವದು, ತಮ್ಮ ಗ್ರಾಮದ ಇಲ್ಲವೆ ಸಮೀಪದ ಗ್ರಾಮ ಗಳ ದಾರಿ ಮೊದಲಾದವುಗಳನ್ನು ಸರಿಪಡಿಸುವದು ಈ ಕೆಲಸಗಳನ್ನು ಮಾಡುವರು. ಇದೇ ಮೇರೆಗೆ ಜನಸಾಮಾನ್ಯದ ಹಿತದ ಕೆಲಸಗಳಿಗೆ ಗ್ರಾಮದ * ಸ್ತ್ರೀಯರೂ ಸಹಾಯಮಾಡುತ್ತಿದ್ದರು.

  • Rhys Davids Birddhist Indiit Y), 49.