ಪುಟ:ಅಶೋಕ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, \ \ /\ \ \ \ \ \r\r\n/S * * * *

  • \r\\/\r\Apr\nhhhh/*/

ಗ್ರಾಮಗಳು ಸುಂದರವಾಗಿಯೂ, ಸುವ್ಯವಸ್ಥಿತವಾಗಿಯೂ ಇರುತ್ತಿದ್ದವು. ಅಡವಿ ಇಲ್ಲವೆ ನದಿ ಇವುಗಳಿಂದ ಗ್ರಾಮಗಳ ಮೇರೆಯು ಗೊತ್ತುಮಾಡಲ್ಪಡುತ್ತಿತ್ತು. ಇಕ್ಕಟ್ಟಾದ ದಾರಿಗಳುಳ್ಳ ಸಣ್ಣ ಸಣ್ಣ ಗ್ರಾಮಗಳು, ಅವುಗಳಲ್ಲಿ ಅಚ್ಚುಕಟ್ಟಾದ ಜನರ ಮನೆಗಳು, ಸುತ್ತಲೂ ವಿಶಾಲವಾದ ಹೊಲಗಳು ಗ್ರಾಮದ ಬಳಿಯಲ್ಲಿರುವ ಉಪವನ ಗಳು ಇವುಗಳಿಂದ ಎಲ್ಲರಿಗೂ ಆನಂದವೆನಿಸುತ್ತಿತ್ತು, ಗ್ರಾಮದ ಉತ್ಕರ್ಷ, ನೀರಿನ ಪೂರೈಕೆಯ ವ್ಯವಸ್ಥೆ, ಗ್ರಾಮದ ಮೇಲ್ವಿಚಾರಣೆ ಮೊದಲಾದ ಕೆಲಸಗಳೆಲ್ಲ ಗ್ರಾಮಸಭೆ ಗಳಿಂದ ಜರುಗಿಸಲ್ಪಡುತ್ತಿದ್ದವು, ಗ್ರಾಮದ ಸಭೆಗೆ ಇಲ್ಲವೆ ಗ್ರಾಮದ ಮುಖ್ಯನಿಗೆ ಎಲ್ಲವೂ ಅಂಕಿತವಾಗಿರುತ್ತಿತ್ತು. ಪ್ರಜಾಸತ್ತಾಕ ರಾಜ್ಯ ಪದ್ಧತಿಯಂತೆ ಈ ಗ್ರಾಮ ಸಭೆಯ ಪದ್ಧತಿಯಿತ್ತು. ಚಂದ್ರಗುಪ್ತ ಮಹಾರಾಜನು ಈ ಪದ್ಧತಿಗೆ ಉತ್ತೇಜನ ಕೊಟ್ಟಿದ್ದನು. ಆದದರಿಂದಲೇ ಬೌದ್ದ ವಾಲ್ಮೀಯದಲ್ಲಿ ಗ್ರಾಮಗಳ ವರ್ಣನೆಯು ಅಷ್ಟೊಂದು ಮನೋಹರವಾಗಿದ್ದದ್ದು ಕಂಡುಬರುವದು. ಅತ್ಯಂತ ಪ್ರತಿಭಾಶಾಲಿಯ, ಅಸಾಧಾರಣ ವೀರ್ಯಶಾಲಿಯೂ ಆದ ಚಂದ್ರ ಗುಪ್ತನು ಭರತಖಂಡದಲ್ಲಿ ಮಗಧದ ಶ್ರೇಷ್ಠತೆಯನ್ನು ಂಟುಮಾಡಿದನು. ರುದ್ರದಾನ ನದ ತಾಮ್ರಶಾಸನದಿಂದ ಚಂದ್ರಗುಪ್ತನು ದೂರದಲ್ಲಿರುವ ಗುಜರಾಥವನ್ನು ಸಹ ಗೆದ್ದು ಅಲ್ಲಿ ಒಬ್ಬ ಕಾರಭಾರಿಯನ್ನು ನಿಯಮಿಸಿದ್ದನೆಂದು ತಿಳಿಯುವದು. ಈಗ ಅಫಗಾಣಿ ಸ್ವಾನವೆಂದು ಹೇಳುವ ಪ್ರದೇಶದವರೆಗಿನ ಎಲ್ಲ ರಾಜ್ಯವು ಚಂದ್ರಗುಪ್ತ ಮಹಾರಾಜನ ವಶದಲ್ಲಿತ್ತು. ಗ್ರೀಕ ಪಂಡಿತನಾದ ಪ್ಲಿನಿಯು ಮಗಧಸಾಮ್ರಾಜ್ಯವು ಆಗ ಸಿಂಧುಪ್ರದೇ ಶದವರೆಗೆ ವಿಸ್ತಾರವಾಗಿತ್ತೆಂದು ಬರೆದಿರುವನು, ಅಫಗಾನಿಸ್ತಾನದಿಂದ ಪಂಚನದದ ಪೂರ್ವದ ಮೇರೆಯಾದ ವಿಪಾಶಾನದಿಯ ದಂಡೆಯವರೆಗೆ ವೀರಶ್ರೇಷ್ಠನಾದ ಸೆಲ್ಯುಕ ಸನು ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದನು. ಸೇಲ್ಕು ಕಸನು ಚಂದ್ರಗುಪ್ತನ ಬಳಿಯಲ್ಲಿ ಪರಾಜಯವನ್ನು ಒಪ್ಪಿ ಆರಿಯಾನಿಯ ಬಹಳ ಭಾಗವನ್ನು ತಿರುಗಿ ಕೊಟ್ಟಿದ್ದನು. ಪಶ್ಚಿಮದಲ್ಲಿ ಹಿಂದುಕುಶ, ಆರಾ ಕೋಶಿಯಾ ( ಪಶ್ಚಿಮಅಫಗಾಣಿಸ್ತಾನ) ಗೋಬ್ರಾ ಸಿಯಾ ಮೆಕ್ರಾನ) ಕಾಬೂಲ, ಗಜನಿ, ಹಿರಾಟ ಇವೆಲ್ಲವು ಆಗ ಈಮೇರೆಗೆ ಮಗಧ ಸಾಮ್ರಾಜ್ಯಕ್ಕೆ ಸೇರಿದವು, ಪೂರ್ವಕ್ಕೆ ದೂರದಲ್ಲಿರುವ ತಾಮ್ರಲಿಯವರೆಗೆ ಮಗಧ ಸಾಮ್ರಾಜ್ಯವು ಹಬ್ಬಿತ್ತು. ತಾವುಲಿಪ್ತಿಯು ಆಕಾಲದ ಒಂದು ಮುಖ್ಯ ಬಂದರು. ಸಿಂಹಲದ ಪ್ರವಾಸಿಗಳು ಭರತಖಂಡಕ್ಕೆ ಈ ಮಾರ್ಗದಿಂದಲೇ ಹೋಗಿಬರುತ್ತಿದ್ದರು. ಮೈಸೂರುರಾಜ್ಯದ ಸಿದ್ದಾಪುರದ ತಾಮ್ರಶಾಸನದಿಂದ ತಿಳಿಯುವದೇನಂದರೆ, ಭರತಖಂಡದ ದಕ್ಷಿಣದಲ್ಲಿರುವ ಚೋಲ, ಪಾಂಡ್ಯರಾಜ್ಯ, ಸತಿಯಪುತ್ರ, ಕೇರಲ ಎಂಬ ದೇಶಗಳು ಆ ಕಾಲದಲ್ಲಿ ಸ್ವತಂತ್ರ ರಾಜ್ಯಗಳೆಂದು ಎಣಿಸಲ್ಪಡುತ್ತಿದ್ದವು. ಚೋಲರಾಜರು ಆಗ ಶ್ರೀಚನಾಪಳ್ಳಿಯ ಬಳಿಯಲ್ಲಿರುವ ಉರಿಯಾರವನ್ನು ರಾಜಧಾನಿ ಯನ್ನು ಮಾಡಿಕೊಂಡಿದ್ದರು, ಈಗಿನ ಮಧುರೆಯು ಪಾಂಡ್ಯದೇಶದ ರಾಜಧಾನಿಯಾ