ಪುಟ:ಅಶೋಕ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ಅಶೋಕ ಆಧರಾ ಪ್ರಿಯದರ್ಶಿ.

  1. \ # \ { 11 #\/v

ಮಹಾರಾಜನ ಆಳಿಕೆಯಲ್ಲಿ ಕಲಿಂಗದೇಶವು ಮಗಧದ ಪ್ರಾಧಾನ್ಯವನ್ನು ಒಪ್ಪಿದ್ದರೂ ನಿಜವಾಗಿ ಆಧೀನವಾಗಿರಲಿಲ್ಲ. ಈ ನಾಲ್ಕು ಪ್ರದೇಶಗಳ ಮೇಲೆ ರಾಜಪುತ್ರರಾಗಲಿ, ರಾಜನ ಸಮೀಪದ ಆಪ್ತರಾಗಲಿ ರಾಜಪ್ರತಿನಿಧಿಗಳಾಗಿ ನಿಯಮಿಸಲ್ಪಡುತ್ತಿದ್ದರು. ರಾಜಸಭೆಯಲ್ಲಿ ಎಲ್ಲ ಪ್ರಜೆಗಳಿಗೂ ಪ್ರವೇಶಿಸುವದಕ್ಕೆ ಅಡ್ಡಿಯಿರಲಿಲ್ಲ. ಬೇಕಾಗಾಗ ಬೇಕಾದವನು ತನ್ನ ಕಷ್ಟವನ್ನು ರಾಜನ ಬಳಿಯಲ್ಲಿ ಅನಾಯಾಸವಾಗಿ ಹೇಳ ಬಹುದಾಗಿತ್ತು, ಕಾಮದಾರರು ಹೇಗೆ ಆಳುತ್ತಾರೆಂಬದೂ, ಪ್ರಜೆಗಳು ರಾಜಾಜ್ಞೆ ಯನ್ನು ಯಾವ ಮೇರೆಗೆ ಪಾಲಿಸುತ್ತಾರೆಂಬದೂ ಗುಪ್ತಚಾರರಿಂದ ಅರಸನ ಕಿವಿಗೆ ಮುಟ್ಟುತ್ತಿತ್ತು. ರಾಜ್ಯದಲ್ಲಿ ಯಾವದೊಂದು ಹೊಸ ಸಂಗತಿಯು ಜರುಗಿದರೆ ಕೂಡಲೆ ದೂತರು ಅರಸನಿಗೆ ಸುದ್ದಿಯನ್ನು ಹೇಳುವರು, ರಾಜ್ಯದಲ್ಲಿ ಹಲವು ಗುಪ್ತತಂತ್ರಗಳು ನಡೆದಿದ್ದ ವಾದದರಿಂದ ಚಂದ್ರಗುಪ್ತನು ಎಲ್ಲರನ್ನೂ ಸಂದಿಗ್ಧ ದೃಷ್ಟಿಯಿಂದ ನೋಡು ತಿದ ನು. ಈ ಸಂದೇಹದಿಂದ ಚಂದ್ರಗುಪ್ತನು ಹಗಲು ಮಲಗುತ್ತಿರಲಿಲ್ಲವೆಂದೂ, ರಾತ್ರಿಯಲ್ಲಿ ಕೂಡ ಪ್ರಹರ ಪ್ರಹರಕ್ಕೆ ಮಲಗುವ ಮನೆಯನ್ನು ಬದಲು ಮಾಡುತ್ತಿದ್ದ ನಂದೂ ಪ್ರವಾದವುಂಟು, ಮೌರ್ಯವಂಶದ ಅರಸರೂ, ಅಶೋಕಮಹಾರಾಜನೂ ಕೂಡ ಈ ನಿಯಮವನ್ನು ಪಾಲಿಸುತ್ತಿದ್ದರು. ರಾಜ್ಯದಲ್ಲಿ ಗುಪ್ತ ತಂತ್ರಗಳೂ ಅ೦ತಃ ಕಲಹಗಳೂ ನಡೆದಿರುವಾಗ ಚಂದ್ರಗುಪ್ತನು ಏಕಚ್ಚತ್ರನಾಮ್ರಾಜ್ಯವನ್ನು ಸ್ಥಾಪಿಸಿದ ನೆಂಬದು ನಿಜವಾಗಿಯ , ಆಶ್ಚರ್ಯಕರವಾಗಿರುವದು. ಆದದರಿಂದ ಈ ವಿಷಯದಲ್ಲಿ ಅವನು ಅಷ್ಟೊಂದು ಜಾಗರೂಕನಾಗಿದುದು ದೋಷವಲ್ಲ. ಬೌದ್ಧಯುಗದಲ್ಲಿ ಭರತಖಂಡದಲ್ಲಿ ನಾಗರಿಕತೆಯು ಎಷ್ಟು ಮಟ್ಟಿಗೆ ಬೆಳೆದಿತ್ತೆಂಬ ಧನ್ನೂ, ಅದರೊಡನೆ ಶಿಲ್ಪ, ವಾಣಿಜ್ಯಗಳು ಎಷ್ಟು ಮಟ್ಟಿಗೆ ಮೇಲನ್ನು ಹೊಂದಿದ್ದ ವೆಂಬ ದನ್ನೂ ಸಂಕ್ಷೇಪವಾಗಿ ಇಲ್ಲಿ ವಿವರಿಸುವದು ಅಪ್ರಾಸಂಗಿಕವಾಗಲಾರದು. ವೈದಿಕಯು ಗವು ಗತಿಸಿ ಆಗ ನಾವಿರಾರು ವರ್ಷಗಳು ಆಗಿದ್ದವು. ಆರ್ಯರ ಸರ್ವ ತೋಮುಖವಾದ ಪ್ರತಿಭೆಯಿಂದ ಭಾರತವು ಕ್ರಮವಾಗಿ ಏಳಿಗೆಯನ್ನು ಹೊಂದುತ್ಯ ನಡೆದಿತ್ತು. ವೈದಿಕ ಕರ್ಮಗಳನ್ನೂ ಯಜ್ಞಯಾಗಾದಿಗಳನ್ನೂ ಮಾಡುವ ಉದ್ದೇಶದಿಂದಲೂ, ಸಮಾಜದ ನಿತ್ಯದ ಕೊರತೆಗಳನ್ನು ಪೂರೈಸುವ ಭಾವನೆಯಿಂದ ಪರಸ್ಪರ ಸಹಾಯಕಾರಿ ಗಳಾದ ಶಿಲ್ಪಿಗಳೂ, ಕಸಬುಗಾರರೂ ಆ ನಾಗರಿಕತೆಯುಳ್ಳ ಸಮಾಜದಲ್ಲಿ ಉಂಟಾಗುತ್ತ ನಡೆದಿದ್ದರು. ಆದರೆ ಬಹು ದೂರದ ಆ ಹಿಂದಿನ ಕಾಲದಲ್ಲಿ ಭಾರತವು ಹೇಗೆ ಮೆಟ್ಟು ಮೆಟ್ಟಿನಿಂದ ಉನ್ನತಿಯ ಶಿಖರವನ್ನೇರುತ್ತ ನಡೆದಿತ್ತೆಂಬದನ್ನು ಈಗ ನಿರ್ಣಯಿಸುವದು ಅಸಾಧ್ಯವ, ಧರ್ಮಶಾಸ್ತ್ರಗಳು, ವೇದವೇದಾಂತಗಳು ಮೊದಲಾದ ಗ್ರಂಥಗಳಲ್ಲಿ ನಡುನಡುವೆ ಪ್ರಸಂಗಾನುಸಾರವಾಗಿ ಬಂದ ಸಾಮಾಜಿಕ ಸ್ಥಿತಿಯ ಉಲ್ಲೇಖದಿಂದಲೇ • Viuccut Smith's Asok: R 76