ಪುಟ:ಅಶೋಕ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಅಶೋಕ ಅಥವಾ ಪ್ರಿಯದರ್ಶಿ. rf, ••••••••••• ಈ ಎಲ್ಲ ಶಿಲ್ಪಿಗಳೂ, ಕಸಬುಗಾರರೂ ಕ್ರಮದಿಂದ ಒಂದೊಂದು ಸಮಾಜವಾಗಿ ಇಲ್ಲವೆ ಒಂದೊಂದು ಜಾತಿಯಾಗಿ ವಿಭಾಗವಾಗುತ್ತ ನಡೆದರು. ಪ್ರತಿಯೊಂದು ಜಾತಿಗೆ ಒಬ್ಬ ನಾಯಕನು ಇರುವನು. ಪ್ರತಿಯೊಂದು ಜಾತಿಯ ವ್ಯಾಜ್ಯಗಳನ್ನು ಅವರವರ ನಾಯಕನೇ ತೀರಿಸುತ್ತಿದ್ದನು. ಎಲ್ಲ ಜಾತಿಗಳ ಮೇಲೆ ಒಬ್ಬ ಮಹಾಮೇy ( ಮಹಾ ಮಾತ್ರ Lord High TrestStter ) ಎಂಬವನು ಸಭಾಧ್ಯಕ್ಷನಾಗಿರುತ್ತಿದ್ದನು. ಎಲ್ಲ ಜಾತಿಗಳ ಮೇಲೆ ಅವನ ಅಧಿಕಾರವು ನಡೆಯುತ್ತಿತ್ತು, ಇನ್ನು ಒಕ್ಕಲತನದ ದೇಶವಾದ ಭರತವರ್ಷದಲ್ಲಿ ಒಕ್ಕಲಿಗರ ಸಂಖ್ಯೆಯು ಎಲ್ಲಕ್ಕೂ ಹೆಚ್ಚಾಗಿತ್ತೆಂಬದನ್ನು ಹೇಳಬೇಕಾಗಿಲ್ಲ. ಈ ಒಕ್ಕಲಿಗರೂ ಕಸಬುಗಾರರೂ ಅಲ್ಲದೆ ಬೇರೆ ವ್ಯವಸಾಯಿ ಗಳೂ, ಶ್ರೇಷ್ಠಿಗಳೂ ಸಮಾಜದ ಐಶ್ವರ್ಯವನ್ನು ಹೆಚ್ಚಿಸುತ್ತಿದ್ದರು, ದೇಶದಲ್ಲಿ ಹುಟ್ಟಿದ ಎಲ್ಲ ಪ್ರಕಾರದ ಸರಕುಗಳು ರಾಜ್ಯದ ಎಲ್ಲ ಕಡೆಗಳಿಗೆ ಸ್ಥಲಮಾರ್ಗಗಳಿಂದ ಲೂ, ಜಲಮಾರ್ಗಗಳಿಂದಲೂ, ಚಕ್ಕಡಿ ನಾವೆ ಇವುಗಳ ಸಹಾಯದಿಂದ ಕಳಿಸಲ್ಪ ಡುತ್ತಿದ್ದವು, ಮತ್ತು ದೊಡ್ಡ ಹಡಗಗಳ ಸಹಾಯದಿಂದ ಸಮುದ್ರದ ಆಚೆಗಿರುವ ದೂರದೂರದ ದೇಶಗಳಿಗೆ ಕೂಡ ಅವು ಕಳುಹಿಸಲ್ಪಡುತ್ತಿದ್ದವು.# ಕ್ರಿಸ್ತ ಶಕದ ೩00 ವರ್ಷಗಳಿಗಿಂತ ಮುಂಚೆ ಕಾಶಿಯಿಂದ ಭಾಗಿರಥಿಯ ಮಾರ್ಗವಾಗಿ ಹಲವು ತರದ ಸರಕುಗಳಿಂದ ತುಂಬಿದ ಹಡಗಗಳು ಸಮುದ್ರ ಸಂಗಮದ ಹತ್ತಿರ ಬಂದು ಮುಂದೆ ಹಿಂದೀ ಮಹಾಸಾಗರವನ್ನು ದಾಟಿ ದೂರದಲ್ಲಿ ಬ್ರಹ್ಮ ದೇಶಕ್ಕೂ, ಬರೋಚ (Buroch )ದಿಂದ ಕುಮಾರೀದೀಪವನ್ನು ಸುತ್ತು ಹಾಕಿ ಸಿಂಹಲ ಮೊದಲಾದ ದ್ವೀಪಗಳಿಗೂ ಅನಾಯಾಸವಾಗಿ 'ಸಂಚಾರಮಾಡುತ್ತಿದ್ದವೆಂಬದಕ್ಕೂ ಸಮುದ್ರ ಮಾರ್ಗದಿಂದ ಬಾಬಿಲೋನದೊಡನೆ ವ್ಯಾಪಾರವು ನಡೆಯುತ್ತಿತ್ತೆಂಬದಕ್ಕೂ ಪ್ರಮಾಣ ಗಳು ದೊರೆಯುವವು, ಮಿಲಿಂದಪ್ಪಕ್ಷವೆಂಬ ಬೌದ್ದ ಗ್ರಂಥದಲ್ಲಿ ಚೀನ ದೇಶದೊ ಡನೆ ಈ ದೇಶದ ವ್ಯಾಪಾರವು ನಡೆಯುತ್ತಿತ್ತೆಂದು ಉಲ್ಲೇಖವುಂಟು. ಎತ್ತಿನ ಚಕ್ಕಡಿಗಳಲ್ಲಿ ನಾನಾ ಪ್ರಕಾರದ ಸರಕುಗಳನ್ನು ತುಂಬಿ ವ್ಯಾಪಾರಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಬರುತ್ತಿದ್ದರು. ಮಾರ್ಗಗಳು ಸ್ವಲ್ಪ ವಿದ್ದವು. 'ಹೊಳೆಗಳಿಗೆ ಸೇತುವೆಗಳಿರಲಿಲ್ಲ. ಊರ ಮತ್ತು ಅಡವಿಯ ದಾರಿಗಳಿಂದ ಚಕ್ಕಡಿಗಳು ಸಾವಕಾಶವಾಗಿ ಹೋಗುತ್ತಿದ್ದವು. ದಾರಿಯಲ್ಲಿ ಪಟ್ಟಣಗಳು ಬಂದರೆ ಅಲ್ಲಿ ಎಲ್ಲರೂ ವಿಶ್ರಾಂತಿಯನ್ನು ಹೊಂದುತ್ತಿದ್ದರು. ರಾಜ್ಯದಲ್ಲಿ ಉಂಟಾಗುವ ಸರಕು ಗಳ ಮೇಲೆ ಕರವು ಗೊತ್ತಾದದ್ದಿರುತ್ತಿತ್ತು, ಕಳ್ಳಕಾಕರಿಂದ ವ್ಯಾಪಾರದ ಸರಕುಗ ಳನ್ನು ಕಾಯುವದಕ್ಕೆ ಒಳ್ಳೆಯ ವ್ಯವಸ್ಥೆಯು ಇತ್ತು. ಬಂಗಾರದ ಇಲ್ಲವೆ ಬೆಳ್ಳಿಯ ನಾಣ್ಯಗಳು ಪ್ರಚಲಿತವಾಗಿರಲಿಲ್ಲವೆಂದು ತೋರುವದು. + ಕಾಹಾಷಣ ಎಂಬ ಒಂದು

  1. J. R. A S. 1901 P. 874, + Rbys Davids Buddhist Judia J. F. A. S, 1901 P. 871.