ಪುಟ:ಅಶೋಕ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ಅಗ AAAAAAF\ Nh Ah/\ /

  1. + + f• • • • • / v// /*/\ /\AAA N /*/*/*/*

ತಾಮ್ರದ ನಾಣ್ಯವು ಮಾತ್ರ ಪ್ರಚಲಿತವಾಗಿತ್ತು. ಅದರ ಭಾರವು ೧೪೬ ಗ್ರೇನುಗಳು ಗಿತ್ತು, ಅದರ ಬೆಲೆಯು ಈಗಿನ ೧ ಶಿಲಿಂಗು ಆಗುತ್ತಿತ್ತು. ಬೇರೆ ಬೇರೆ ಕಾಹಾಪ ಣಗಳ ಮೇಲೆ ವ್ಯವಸಾಯಿಗಳ ಇಲ್ಲವೆ ನಾವುಕಾರರ ಚಿಹ್ನಗಳು ಅಂಕಿತವಾಗಿರುತ್ತಿ ದ್ದವು. ಎಲ್ಲ ವ್ಯಾಪಾರದ ಸರಕುಗಳ ಬೆಲೆಯು ಒಬ್ಬ ಕಾಮದಾರನಿಂದ ನಿರ್ಧರಿಸಲ್ಪ ಡುತ್ತಿತ್ತು. ಆತನಿಗೆ ಮೂಲ್ಯ ನಿಯಾಮಕನೆಂದು ಹೆಸರು, ವ್ಯಾಪಾರಿಗಳಲ್ಲಿ ಹುಂಡಿಯ ವ್ಯವಹಾರವೂ ಇತ್ತು, ಈಗಿನ ಹ್ಯಾಂಡ್‌ನೋಟುಗಳಂಥ ಋಣಶೋಧಪ್ರತಿಜ್ಞಾ ಪತ್ರಗಳೂ ಪ್ರಚಲಿತವಾಗಿದ್ದವು, ನಾಲ, ಮತ್ತು ಬಡ್ಡಿ ಇವುಗಳ ಉಲ್ಲೇಖವು ಬಹಳ ಕಡೆಗಳಲ್ಲಿರುವದು, ಬ್ಯಾಂಕುಗಳ ಅಸ್ತಿತ್ವದ ವಿಷಯವಾಗಿ ಪ್ರಮಾಣವು ಕಂಡುಬರು ವದಿಲ್ಲ. ಆದರೆ ತಕ್ಷಶಿಲೆ, ಶ್ರಾವಸ್ತಿ, ವಾರಾಣಸಿ, ರಾಜಗೃಹ, ವೈಶಾಲಿ, ಕೌಶಾಂಬಿ ಮೊದಲಾದ ಪಟ್ಟಣಗಳಲ್ಲಿಯೂ, ಬೇರೆ ಕಡೆಗಳಲ್ಲಿಯೂ ಇದ್ದ ಎಷ್ಟೋ ಧನಾಢ ಪ್ರೇಮಿಗಳು ಬ್ಯಾಂಕುಗಳ ಕಾರ್ಯವನ್ನು ಸಾಗಿಸುತ್ತಿದ್ದರು. ಈಗಿನ ಜಮೀನದಾ ರರು ಅಂದರೆ ಭೂಸ್ವಾಮಿಗಳು ಆಗ ಇರಲಿಲ್ಲ. ಶ್ರೀಮಂತರಾದ ಒಕ್ಕಲಿಗರೂ, ನಿಪುಣ ರಾದ ಶಿಲ್ಪಿಗಳೂ, ಕಸಬುಗಾರರೂ ಇವರಿಂದಲೇ ಸಮಾಜಗಳುಂಟಾಗಿದ್ದವು. ಭಾರತವರ್ಷದಲ್ಲಿ ಬಹುದೂರದ ಪ್ರಾಂತಗಳವರೆಗೆ ಮಾಡಿದ ಪ್ರಶಸ್ತವಾದ ಮಾರ್ಗಗ ಳಿಂದ ವ್ಯಾಪಾರವು ನಡೆಯುತ್ತಿತ್ತು. ಚಂಪಾನಗರದಿಂದ ಕೌಶಾಂಬಿಯವರೆಗೂ, ವಿದೇ। ಹದಿಂದ ಗಾಂಧಾರದವರೆಗೂ, ಶ್ರಾವಸ್ತಿಯಿಂದ ರಾಜಗೃಹದವರೆಗೂ ಪ್ರಶಸ್ತವಾದ ರಾಜಮಾರ್ಗಗಳಿದ್ದವು. ಕಾಲಚಕ್ರವು ತಿರುಗಿದಂತೆ ಕ್ರಮವಾಗಿ ಉಂಟಾದ ಜ್ಞಾನದ ಪ್ರಭಾವದಿಂದ ಧರ್ಮಪರಾಯಣವಾದ ಭಾರತವರ್ಷದಲ್ಲಿ ಕೂಡ ಆಗ ಹೊಸ ಹೊಸ ಭಾವಗಳು ಉತ್ಪನ್ನವಾಗಹತ್ತಿದವ, ವೈದಿಕ ಕರ್ಮಯುಗವು ಆಗ ಬಹುಶಃ ಲೋಪಹೊಂದಿ ದಂತೆ ಆಗಿತ್ತು, ದೇವತೆಗಳನ್ನು ಸಂತೋಷಬಡಿಸುವದಕ್ಕಾಗಿ ಸ್ವರ್ಗಾಪೇಕ್ಷಿಯಾದ ಯಜಮಾನನು ಮೊದಲಿನಂತೆ ಪುರೋಹಿತರಿಗೆ ಶರಣುಹೋಗಿ ಬಲಿಯನ್ನು ಕೊಟ್ಟು ದಕ್ಷಿಣೆ ಕೊಡುವದಕ್ಕೆ ಅಷ್ಟೊಂದು ಆತುರಬಡುತ್ತಿರಲಿಲ್ಲ. ಉದಾರವೂ ಸ್ವತಂತ್ರವೂ ಆದ ಮನೋವೃತ್ತಿಯು ಪುರೋಹಿತಪ್ರಭಾವದಿಂದ ಬಿಡುಗಡೆಹೊಂದುವದಕ್ಕೆ ಕ್ರಮ ದಿಂದ ಪ್ರಯತ್ನಿಸತೊಡಗಿತ್ತು. ಕರ್ಮಕಾಂಡವೆಂಬ ಆವರಣದಲ್ಲಿ ಬಚ್ಚಿಹೋದ ಅನಾದಿ-ಅನಂತ ಚೈತನ್ಯ ತತ್ವವು ಕ್ರಮದಿಂದ ಪ್ರಕಾಶಿಸಹತ್ತಿತು. ಅರ್ಯಋಷಿಗಳು ನಾನಾಪ್ರಕಾರಮಯವಾದ ಈ ಪ್ರಪಂಚದಲ್ಲಿ ಆ ಒಬ್ಬ ಅದ್ವಿತೀಯ ಪುರಾಣಪುರುಷ ನನ್ನು ಗೊತ್ತುಹಿಡಿದರು. ನಾಂತದಲ್ಲಿ ಅನಂತವನ್ನು ಕಂಡರು. ಸಕಲ ದೇವತೆಗಳಲ್ಲಿ ಒಬ್ಬ ವಿರಾಟ್ ಪುರುಷನಿರುವದನ್ನು ತಿಳಿದರು, ಬಹಿರ್ಮುಖವಾದ ದೃಷ್ಟಿಯು ಕ್ರಮ ದಿಂದ ಅಂತರ್ಮುಖವಾಯಿತು. ಜೀವಾತ್ಮ ಪರಮಾತ್ಮರ ಅಭೇದತತ್ವವೂ ಭಾವುಕರ