ಪುಟ:ಅಶೋಕ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಅಶೋಕ ಅಥವಾ ಪ್ರಿಯದರ್ಶಿ, vvvvvvvvvvvv/ W v * * \ N v * * * * * N v Y V & V vy s: \ \ \ \ \ 14 M # \ \ \ » » » » »+ * * * * * * \# $4 W \ \\\/v + v/s/ ಹೃದಯದಲ್ಲಿ ಉದಯವಾಯಿತು. ದಾರ್ಶನಿಕ ಋಷಿಗಳ ಸತ್ವಗುಣವು ತುಂಬಿದ ಹೃದ ಯದಲ್ಲಿ ವೈರಾಗ್ಯ ಭಾವನೆಯು ಬಲವಾಗಿ ಉಂಟಾಯಿತು. ಸೂರ್ಯ-ಚಂದ್ರ-ನಕ್ಷತ್ರ. ವಿದ್ಯುತ್ತುಗಳು ಯಾವದನ್ನು ಪ್ರಕಾಶಪಡಿಸಲಾರವೋ, ಯಾವದರ ಪ್ರಕಾಶವು ಸಮಗ್ರ ಚರಾಚರ ಜಗತ್ತನ್ನು ಪ್ರಕಾಶಪಡಿಸುವದೋ ಅಂಥ ಬ್ರಹ್ಮತತ್ವವನ್ನು ಸಾಮಾನ್ಯ ಯಜ್ಞಾಗ್ನಿಯು ಹೇಗೆ ಪ್ರಕಾಶಪಡಿಸಬೇಕು? ಈ ಹೊಸಭಾವನೆಯ ಸೆಳವಿಗೆ ಸಿಕ್ಕು ಪುರೋಹಿತರ ಏಕಚ್ಚತ್ರ ಪ್ರಭಾವವು ನಿರ್ವಿಯ್ರವಾಗಿ ಮುಳುಗಹತ್ತಿತು. ಇಂದ್ರಿಯ ನಿಗ್ರಹನಿರತರೂ ಭಿಕ್ಷಮಾತ್ರ ಜೀವಿಗಳೂ ಆದ ತಪಸ್ವಿಗಳಿಗೆ ಬ್ರಹ್ಮ ಜ್ಞಾನವೇ ಮುಖ್ಯ ಧೈಯವಾಯಿತು. ಜನಾಂಗದ ಜೀವನದಲ್ಲಿ ಈ ಹೊಸ ಆಧ್ಯಾತ್ಮಿಕಭಾವನೆಯು ಉಂಟಾದುದನ್ನು ನೋಡಿ ಸಮಾಜದ ಶೀರ್ಷಸ್ಥಾನದಲ್ಲಿದ್ದ ಪುರೋಹಿತಗಣವು ಭಯ ಹೊಂದಿ ಮತ್ತೆ ದೃಢವಾದ ಪ್ರಯತ್ನದಿಂದ ತಮ್ಮ ಶ್ರೇಷ್ಟತೆಗೆ ಮೂಲವಾದ ಕರ್ಮ ಕಾಂಡದ ಪ್ರಾಧಾನ್ಯವನ್ನು ಸ್ಥಾಪಿಸುವದಕ್ಕೆ ಉದ್ಯುಕ್ತವಾಯಿತು. ಈ ಕಾಲದಲ್ಲಿಯೇ ತಪಸ್ಸು ಉಪಾಸನೆ ಇವುಗಳ ಕಡೆಗೆ ಜನರ ದೃಷ್ಟಿಯನ್ನು ಎಳೆದೊಯ್ಯುವದಕ್ಕೂ, ಜನಸಮಾಜವು ಸ್ವತಂತ್ರವಿಚಾರದಕಡೆಗೆ ಮನಸ್ಸಿಡದಂತೆ ಮಾಡುವದಕ್ಕೂ ಅವರು ಹೊಸ ಹೊಸ ಉಪಾಯಗಳನ್ನು ಮಾಡತೊಡಗಿದರು. ಅವರ ಪ್ರಯತ್ನಕ್ಕೆ ಕೆಲ ಕಾಲದವರೆಗೆ ಯಶಸ್ಸು ದೊರೆಯಿತು; ಕಾಲಕ್ರಮದಿಂದ ಬ್ರಹ್ಮ ಜ್ಞಾನರೂಪವಾದ ಕೊನೆಯ ಧೈಯದಕಡೆಗೆ ಜನರ ದೃಷ್ಟಿಯು ಮುಟ್ಟಿದಂತಾಗಿ ಅದರ ಪ್ರಾಪ್ತಿಗಾಗಿ ಭಿಕ್ಷಾವೃತ್ತಿ, ಶರೀರವನ್ನು ಕಷ್ಟ ಬಡಿಸುವದು, ಮೊದಲಾದ ಉಪಾಯಗಳನ್ನು ಮಾಡು ವದೇ ಶ್ರೇಯಸ್ಕರವೆಂದು ಅವರ ಭಾವನೆಯಾಗಲಾರಂಭಿಸಿತು. ಈ ಮೇರೆಗೆ ಸತ್ಯ ತತ್ವವು ಮತ್ತೆ ಮರೆಯಾಯಿತು, ಉನ್ನತಿಯ ಮಾರ್ಗವು ಮತ್ತೆ ಕಟ್ಟಾಯಿತು. ಪುರೋ ಹಿತ ವರ್ಗವು ಮತ್ತೆ ಮೊದಲಿನ ಗೌರವವನ್ನು ಪಡೆಯುವದಕ್ಕೆ ಹಲವು ಉಪಾಯ ಗಳನ್ನು ಹುಡುಕತೊಡಗಿತು, ಅದರಿಂದ ಜನರಲ್ಲಿ ಪುರೋಹಿತರಿಗೆ ಶರಣುಹೋದರೆ ತಮ್ಮ ದುಃಖಗಳು ಇಲ್ಲದಂತಾಗುವವೆಂಬ ಆಶೆ ಹುಟ್ಟಿ ಪೂಜೆ, ಯಜ್ಞ, ಬಲಿಪ್ರದಾನ ಮೊದಲಾದವನ್ನು ಮತ್ತೆ ಮಾಡುವದಕ್ಕೆ ಆರಂಭವಾಯಿತು.

ಮತ್ತೆ ನಿರಂತರೋತ್ಪನ್ನ ವಾದ ಯಜ್ಞಧಮವ್ರ ಆಕಾಶವನ್ನು ಮುಸುಕಹತ್ತಿತು. ವಿಷಯಲಂಪಟರಾದ ಪಾಂಡಿತ್ಯಾಭಿಮಾನಿಗಳ ನಿಷ್ಪಲವಾದ ಕೂಟತರ್ಕದಿಂದ ನಿಜ ತತ್ವವು ಹೆಚ್ಚು ದುರ್ಬೋಧ್ಯವಾಗಿ ಸಂದೇಹಾಂಧಕಾರದಲ್ಲಿ ಹೆಚ್ಚು ಹೆಚ್ಚು ಮರೆಯಾ ಗತೊಡಗಿತು. ದೈತಾತಗಳ ಸ್ವಕಪೋಲಕಲ್ಪಿತವಾದ ಅನುಮಾನಪ್ರಧಾನವಾದ ಶಾಸ್ತವ್ಯಾಖ್ಯಾನಗಳ ಕೋಲಾಹಲದಿಂದ ಕಿವಿಗಳು ಕಿವುಡಾಗಹತ್ತಿದವು. ಈ ಅನ್ಯಾ ಭಾವಿಕವಾದ ಬದಲಾವಣೆಯಿಂದ ಧಾರ್ಮಿಕರಾಜ್ಯದಲ್ಲಿ ಭರದಿಂದ ಅಂದೋಲನವು ( ಚಳವಳಿಯು ) ಅರಂಭವಾಯಿತು, ಕರ್ಮಕಾಂಡಭಾರದಿಂದ ಪೀಡಿತವಾದ ಭಾರತ