ಪುಟ:ಅಶೋಕ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಅಶೋಕ ಅಥವಾ ಪ್ರಿಯದರ್ಶಿ, AAAAAPAAAAAAAAAAAA+ nAnn Ar\r\ / \ n11 # •\ /• /\ \r\ r\n\ n\\\ ,hhr, vinAnnrk/ ಧನ್ಯರಾದರು. ಭಿಕ್ಷುಗಳು ಗುಂಪುಗುಂಪಾಗಿ ಆತನ ಶ್ರೀಮುಖ ಕೀರ್ತಿತವಾದ ಪವಿತ್ರ ಧರ್ಮವನ್ನು ವಿಶ್ವಾಸದಿಂದ ಸ್ವೀಕರಿಸಿ ದೇಶದಲ್ಲೆಲ್ಲ ಜನಸಾಮಾನ್ಯದಲ್ಲಿ ಸೇರಿಕೊಂಡು ಇರಲಾರಂಭಿಸಿದರು. ಉಚ್ಚ ನೀಚ ಭೇದವು ಅಡಗಿಹೋಯಿತು. ಪ್ರೇಮದ ಪ್ರವಾಹ ದಲ್ಲಿ ದೇಶವೆಲ್ಲ ಮುಳುಗಿಹೋಯಿತು. ಮೊದಲಿಂದ ನಡೆದುಬಂದ ಶುಷ್ಕಕರ್ಮಕಾಂಡ ಧರ್ಮವು ಉದಯಹೊಂದುತ್ತಿರುವ ಈ ಹೊಸ ಧರ್ಮದೆದುರಿಗೆ ಮಸಕಾಗಿ ಹೋ। ಯಿತು. ಜನಸಾಮಾನ್ಯವು ಜಾತಿವರ್ಣಗಳ ಭೇದವಿಲ್ಲದೆ ಬುದ್ದ ದೇವನ ಈ ಉದಾ ರವೂ ಜ್ಞಾನಮಯವೂ ಆದ ಧರ್ಮರಾಜ್ಯದಲ್ಲಿ ಆಶ್ರಯಹೊಂದಿ' ಹೊಸಜೀವನವನ್ನು ಹೊಂದಿತು. ಮೆಲ್ಲಮೆಲ್ಲನೆ ಎಷ್ಟೋ ಶತಮಾನಗಳವರೆಗೆ ಆ ಸನ್ಯಾಸ ಮತ್ತು ನಿಷ್ಕಾಮ ಕರ್ಮ ಇವೇ ಮುಖ್ಯವಾಗಿ ಉಳ್ಳ ಪವಿತ್ರ ಧರ್ಮವ ಏಳಿಗೆಯನ್ನು ಹೊಂದಿ ಭರತ ಖಂಡದ ನಾಲ್ಕೂ ದಿಕ್ಕುಗಳಲ್ಲಿ ವ್ಯಾಪಿಸಿತು, ಇದೀಗ ಆ ಜಗತ್ಪಸಿದ್ದವಾದ ಬೌದ್ದ ಯು ಗವು, ಈ ಯುಗದಲ್ಲಿ ಭಾರತವರ್ಷವು ಉನ್ನತಿಯ ಕೊನೆಯ ಮೆಟ್ಟನ್ನು ಏರಿತ್ತು. ಅಶೋಕನ ಆಳಿಕೆಯಲ್ಲಿ ಈ ಧರ್ಮವೇ ನಾಲ್ಕೂ ಕಡೆಗೆ ಹಬ್ಬಿತ್ತು. ಕುಶೀನಗರದಲ್ಲಿ ಬುದ್ದದೇವನು ದೇಹವಿಟ್ಟ ಬಳಿಕ ಮಗಧಕ್ಕೆ ಸೇರಿದ ವಿಭಾರ ಪರ್ವತದ ಸಪ್ತಪರ್ಣೀಗುಹೆಯ ಎದುರಿಗೆ ವಿಶಾಲವಾದ ಸಭಾಗೃಹದಲ್ಲಿ ಅಜಾತ ಶತ್ರುರಾಜನ ಆಳಿಕೆಯಲ್ಲಿ ಮೊದಲನೆಯ ಬೌದ್ಧಧರ್ಮದ ಮಹಾಸಭೆಯು ನೆರೆದಿತ್ತು. ಈ ಸಭೆಯಲ್ಲಿ ಬುದ್ಧದೇವನ ಅಮೂಲ್ಯವಾದ ಉಪದೇಶಗಳು ಸಂಗ್ರಹಿಸಲ್ಪಟ್ಟವು. ಈ ಲೋಕಹಿತಕರವಾದ ಉಪದೇಶಗಳು ಒಂದು ನೂರು ವರ್ಷಗಳವರೆಗೆ ಭಾರತವರ್ಷದ ಬೇರೆ ಬೇರೆ ಪ್ರದೇಶಗಳಲ್ಲಿ ಪ್ರಚಲಿತವಾಗಿದ್ದು ಒಂದು ಬಲವಾದ ಧರ್ಮವನ್ನುಂಟು ಮಾಡಿದವು, ಆದರೆ ಮುಂದೆ ಕಾಲಕ್ರಮದಿಂದ ಬುದ್ದದೇವನ ಮಹಾಪರಿ ನಿರ್ವಾಣ ವಾದ ೧೦೦ ವರ್ಷಗಳ ತರುವಾಯ ಭಿಕ್ಖುಸಂಪ್ರದಾಯದಲ್ಲಿ ಮತಭೇದಗಳೂ ತನ್ನೂ ಲಕವಾದ ಕಲಹಗಳೂ ಉಂಟಾದವ, ಅವುಗಳನ್ನು ನಾಶಮಾಡುವದಕ್ಕಾಗಿ ಸಂಸಾರ ತ್ಯಾಗಿಯೂ ಜಿತೇಂದ್ರಿಯನೂ ಪವಿತ್ರಾಚರಣೆಯುಳ್ಳವನೂ ಆದ ಸ್ಥವಿರ ರೇವತನು ವೈಶಾಲಿಯ ಮಹಾವನವಿಹಾರದಲ್ಲಿ ಎಲ್ಲ ಭಿಕ್ಷುಮಂಡಲಿಯನ್ನು ನೆರೆಯಿಸಿ ಎರಡನೆಯ ಮಹಾಸಭೆಯನ್ನು ಕೂಡಿಸಿದನು. ಆ ಮಹಾಸಭೆಯಲ್ಲಿ ಸರ್ವಸಮ್ಮತಿಯಿಂದ ೧ ತರದ * ನಿಷಿದ್ಧ ವಸ್ತುಗಳ ಸಂಬಂಧವಾಗಿ ನಿಯಮಗಳುಂಟಾದವು. ಈ ಮೇರೆಗೆ ಮತ್ತೆ ಗೌತಮನು ತೋರಿಸಿದ ಧರ್ಮವು ಪರಿಶುದ್ಧವಾಗಿ ನೆಲೆಗೊಂಡು ದೇಶದೇಶಾಂತ ರಗಳಲ್ಲಿ ಹಬ್ಬುಗೊಂಡಿತು. ಈ ಮಹಾಧರ್ಮಕ್ಕೆ ಭಾರತವರ್ಷದ ಏಕಚ್ಚತ್ರ ಚಕ್ರವ ರ್ತಿಯಾದ ಅಶೋಕನು ಮುಖ್ಯ ಪೋಷಕನು. ಈ ಹೊಸ ಧರ್ಮದ ಉನ್ನತಿಯ,

  • ಮುಂದೆ ಇದರ ವಿಸ್ತ್ರತ ವಿವರಣವು ಬರ ನದು, ( ಭಿಕ್ಷುಗಳ ಅಚಾರಕ್ಕೆ ಹೊರತಾದ ೧: ಯು ವಗಳು )

r – + - -