ಪುಟ:ಅಶೋಕ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಅಶೋಕ ಅಥವಾ ಪ್ರಿಯದರ್ಶಿ. MMMrAr/MMMUr ಇವುಗಳ ಪ್ರಭಾವದಿಂದ ಅಶೋಕಚರಿತ್ರದ ಹಲವು ವಿಷಯಗಳು ಸಂಗ್ರಹಿಸಲ್ಪಟ್ಟರು ವವು, ಆತನು ಜಾರ್ಜ ಟರ್ನರನ ಸಹಾಯದಿಂದ ತಾಮ್ರಶಾಸನಗಳು, ನಾಣ್ಯಗಳು, ಶಿಲಾಲಿಪಿಗಳು, ಇವುಗಳಲ್ಲಿರುವ ವಿಷಯವನ್ನು ಕಂಡುಹಿಡಿಯಹತ್ತಿದನು. ಪ್ರಿಯದರ್ಶಿ ಮತ್ತು ಅಶೋಕ ಇವರಿಬ್ಬರೂ ಒಂದೇ ವ್ಯಕ್ತಿಯೆಂಬದನ್ನು ಜಗತ್ತಿನೆದುರಿಗೆ ಅವನೇ ಮೊದಲು ಪ್ರಕಟಿಸಿದನು. ಇದರಿಂದ ಬೌದ್ದಯುಗದ ಇತಿಹಾಸವು ಹೊಸ ಪ್ರಕಾಶ ದಲ್ಲಿ ಬಂದಿತು. ಭಾರತವಾಸಿಗಳೇ, ಈಗ ನಿಮ್ಮ ಆ ಐತಿಹಾಸಿಕ ಮಹಾರತ್ನ ವನ್ನು ಸ್ವೀಕರಿಸಿರಿ. ನರಕುಲತಿಲಕನೆನಿಸಿದ ಅಶೋಕನು ಪ್ರಾಚೀನ ಭಾರತಕ್ಕೆ ಗೌರವಭೂತ ನಾಗಿ, ಸೂರ್ಯನಂತೆ ಪ್ರಕಾಶಿಸುತ್ತಿದ್ದನು, ಆತನನ್ನು ಭಾರತವಾಸಿಗಳು ತಿಳಿದೂ, ತಿಳಿಯದೆಯೂ ಬಹುದಿನಗಳಿಂದ ಪೂಜಿಸುತ್ತ ಬಂದಿರುವರು. ನಾವು ಆ ಸೌಮ್ಯಸುಂದರ ಮೂರ್ತಿಯನ್ನು ಪ್ರತ್ಯಕ್ಷವಾಗಿ ಪೂಜಿಸಲಿಲ್ಲವೆಂಬದು ನಿಜವಾದರೂ ಪರೋಕ್ಷದಲ್ಲಿ ಆ ಸುಗುಣಮೂರ್ತಿಯ ಆರಾಧನೆಮಾಡುತ್ತ ಬಂದಿರು ವೆವು, ಪ್ರಾಚೀನಭರತಖಂಡದಲ್ಲಿ ಏಕಚ್ಚತ್ರಚಕ್ರವರ್ತಿಯು ಯಾವನಿದ್ದನು, ಅದಕ್ಕೆ ಪ್ರಮಾಣವೇನು ಎಂದು ಯಾರಾದರೂ ಕೇಳಿದರೆ ನಾವು ಉಚ್ಚ ಸ್ವಗದಿಂದ ಅಶೋಕನು ಭಾರತದ ಏಕಚ್ಚಾಧಿಪತಿಯೂ, ಆತನ ರಾಜನೀತಿ, ರಾಜ್ಯಶಾಸನಪದ್ಧತಿ, ಇತಿಹಾಸ, ಶಿಲಾಲಿಪಿ ಇವೇ ಅದಕ್ಕೆ ಪ್ರಮಾಣವೂ ಎಂದು ಉಚ್ಚ ಕಂಠದಿಂದ ಉತ್ತರ ಹೇಳುವೆವು. ಸಾಗರವೇಷ್ಟಿತವಾಗಿಯೂ, ಶ್ಯಾಮಲವಾದ ಕೂಲಪ್ರದೇಶವುಳ್ಳದ್ದಾಗಿಯೂ ಸರ್ವಸಸ್ಯಸಂಪನ್ನ ವಾಗಿಯೂ ಇರುವ ಭಾರತಭೂಮಿಯು ಯಾವಾಗ ನಮ್ಮ ಮನಸ್ಸಿ ನಲ್ಲಿ ಬರುವದೋ, ಶುಭ್ರ ಕಿರೀಟಧಾರಿಯಾದ ಹಿಮಾಚಲನ ನಿತ್ಯಸೌಂದರ್ಯವು ಯಾವಾಗ ನಮ್ಮನ್ನು ಬೆರಗುವಡಿಸುವದೋ, ಪುಣ್ಯಕರವಾದ ತಪೋವನಗಳಲ್ಲಿ ರಾಮಚಂದ್ರ, ಯುಧಿಷ್ಠಿರ, ಹರಿಶ್ಚಂದ್ರ, ಭೀಷ್ಟ ಮೊದಲಾದ ಮಹಾಪುರುಷರ ಪವಿತ್ರ ವಾದ ಜೀವನಚರಿತ್ರದ ಕೀರ್ತನವು ನಡೆದದ್ದರ ಸ್ಮರಣವು ಯಾವಾಗ ನಮಗೆ ಆಗು ವದೋ ಅದೇ ಕಾಲದಲ್ಲಿ ಎರಡು ಸಾವಿರ ವರ್ಷಗಳ ಪೂರ್ವದಲ್ಲಿ ಭಾಗೀರಥಿಯ ತೀರದಲ್ಲಿ ಕೋಟೆ ಕೊತ್ತಳಗಳುಳ್ಳದ್ದಾಗಿ ಅತ್ಯಂತ ಶಿಲ್ಪಕೌಶಲ್ಯದಿಂದ ಮೆರೆಯುತ್ತಿದ್ದ ಪಾಟಲಿಪುತ್ರನಗರಿಯ ಸುವರ್ಣ ಸಿಂಹಾಸನದ ಮೇಲೆ ಕುಳಿತಂಥ ಚಕ್ರವರ್ತಿ ಕುಲ ತಿಲಕನಾದ ಅಶೋಕರಾಜರ್ಷಿಯ ಉಜ್ವಲವಾದ ಮೂರ್ತಿಯು ನಮ್ಮ ಕಣ್ಣೆದುರಿಗೆ ಬಂದು ನಿಲ್ಲುವದು. ಆಗ ನಾವು ಆ ರಾಜರ್ಷಿಯ ಉತ್ತಮವಾದ ರಾಜ್ಯಶಾಸನಪದ್ಧತಿ ಯನ್ನೂ, ಅಸಾಧಾರಣವಾದ ವೈರಾಗ್ಯವನ್ನೂ, ಉದಾರವಾದ ಲೋಕೋಪಕಾರ ವನ್ನೂ, ಪ್ರಬಲವಾದ ಧರ್ಮಾನುರಾಗವನ್ನೂ ನೆನಪಿಗೆ ತಂದುಕೊಂಡು ಆಶ್ಚರ್ಯ ಚಕಿತರಾಗುವೆವು; ಆನಂದಬಡುವೆವು; ಆ ಮಹಾಪುರುಷನ ಕೀರ್ತಿಯಿಂದ ಪವಿತ್ರ