ಪುಟ:ಅಶೋಕ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, vr ತಂದೆಯಂತೆ ರಾಜಕಾರ್ಯಗಳಲ್ಲಿ ಪ್ರತಿಭಾಶಾಲಿಯಾಗಿದ್ದನೆಂಬದು ಪ್ರಚಲಿತವಾಗಿರುವ ಕಥೆಗಳಿಂದಲೂ, ಐತಿಹಾಸಿಕರ ಲೇಖಗಳಿಂದಲೂ ಗೊತ್ತಾಗುವದು. ಆತನ ಆಳಿಕೆ ಯಲ್ಲಿ ಭರತಖಂಡದ ರಾಜಕೀಯವಾತಾವರಣದಲ್ಲಿ ಮೋಡಗಳಿರಲಿಲ್ಲ. ಸಿಕಂದರ ಶಹ ಸೆಲ್ಕು ಕಸರಂಥ ಮಹಾವೀರರು ಯಾರೂ ಆಗ ಭರತಖಂಡದ ಮೇಲೆ ಆಶಾ ದೃಷ್ಟಿಯನ್ನಿಟ್ಟಿರಲಿಲ್ಲ. ಎಲ್ಲ ಕಡೆಯಲ್ಲಿ ಶಾಂತಿಯು ನೆಲೆಗೊಂಡಿತ್ತು. ಬಿಂದುಸಾರನ ಆಳಿಕೆಯಲ್ಲಿ ಉಲ್ಲೇಖಿಸತಕ್ಕಂಥ ಯಾವ ರಾಜಕೀಯ ಪ್ರಸಂಗವೂ ಒದಗಲಿಲ್ಲ. ಚಂದ್ರ ಗುಪ್ತನು ಬಲವಾದ ತಳಹದಿಯ ಮೇಲೆ ರಾಜ್ಯ ಶಾಸನ ಪದ್ಧತಿಯನ್ನು ನೆಲೆಗೊಳಿಸಿ ದ್ದನು. ಆತನು ಐದುನೂರು ಜನ ಮಂತ್ರಿಗಳ ದೊಡ್ಡದೊಂದು ಸಭೆಯನ್ನು ಏರ್ಪಡಿ ಸಿದ್ದನು. ಆ ಸಭೆಯ ಮುಖ್ಯ ಮಂತ್ರಿಯು ರಾಜಕಾರ್ಯಗಳನ್ನು ಬಹಳ ದಕ್ಷತೆಯಿಂದ ಸಾಗಿಸುವನು. ರಾಜನ ಪ್ರಭಾವವೂ ಮಂತ್ರಿಮಂಡಲದ ಮೇಲೆ ಪೂರ್ಣವಾಗಿ ನಡೆ ಯುತ್ತಿತ್ತು, ಪೂರ್ವ ಪದ್ಧತಿಯಂತೆ ಬಿಂದುಸಾರನಿಗೆ ಹಲವು ಜನ ಅರಸಿಯರಿದ್ದರು. ಇವರಲ್ಲಿ ಅಶೋಕನ ತಾಯಿಯ ಇತಿಹಾಸವು ಬೇರೆ ಬೇರೆ ಕಡೆಯಲ್ಲಿ ಬೇರೆ ಬೇರೆ ವಿಧವಾಗಿರುವದು. ಮೂಲಕಥೆಯನ್ನು ಇತಿಹಾಸದೃಷ್ಟಿಯಿಂದ ಬರೆಯುವದಕ್ಕೆ ಮುಂಚೆ ನಾವು ಸಿಂಹಲದಲ್ಲಿಯೂ, ಭರತವರ್ಷದಲ್ಲಿಯೂ ಪ್ರಚಲಿತವಾಗಿರುವ ಅಶೋ ಕನ ಸಂಬಂಧವಾದ ಕಥೆಗಳನ್ನು ಪಾಲಕರಿಗೋಸ್ಕರ ಸಂಕ್ಷೇಪವಾಗಿ ಬರೆಯುವೆವು. ಸಿಂಹಲದೇಶದಲ್ಲಿಯ ಕಥೆಯು. • ಅಜಾತಶತ್ರುರಾಜನಿಂದಾರಂಭಿಸಿ ನಾಗದಾಸಕನ ವರೆಗಿನ ಅರಸರು ಮಗಧದಲ್ಲಿ ರಾಜ್ಯವಾಳಿದ ತರುವಾಯ ಅದೇ ವಂಶದ ಧಾರ್ಮಿಕನೂ, ನಿಪುಣನೂ ಆದ ಶಿಶುನಾಗನೆಂಬ ಮಂತ್ರಿಯು ಪ್ರಜೆಗಳ ವಿಜ್ಞಾಪನೆಯಿಂದ ಮಗಧದ ಸಿಂಹಾಸನ ವೇರಿದನು. ಅವನು ೧೮ ವರ್ಷ ರಾಜ್ಯವಾಳಿದ ತರುವಾಯ ಅವನ ಮಗನಾದ ಕಾಲಾ ಶೋಕನು ೨೦ ವರ್ಷ ಆಳಿದನು. * ಈ ಕಾಲಾಶೋಕನಿಗೆ ೧೦ ಜನ ಮಕ್ಕ ಆದ್ದರು. ಕಾಲಾಶೋಕನ ತರುವಾಯ ಆತನ ಮಕ್ಕಳು ೨೨ ವರ್ಷ ರಾಜ್ಯವಾಳಿದರು. ಅವರು ಎಲ್ಲರೂ ಧಾರ್ಮಿಕರೂ, ಪ್ರಚಾರಂಜಕರೂ ಆಗಿದ್ದರು. ಕೊನೆಗೆ ನಂದವಂಶದ ೯ ಜನ ರಾಜರು ೨೨ ವರ್ಷ ಮಗಧದ ಸಿಂಹಾಸನದ ಮೇಲೆ ಇದ್ದರು, ಚಾಣಕ್ಯನೆಂಬ ಒಬ್ಬ ಬ್ರಾಹ್ಮಣನು ಪಾಟಲಿಪುತ್ರದಲ್ಲಿ ವಾಸಮಾಡುತ್ತಿದ್ದನು. ನಂದವಂಶದ ವಿಷಯ ವಾಗಿ ಈತನಲ್ಲಿ ಬಹಳ ತಿರಸ್ಕಾರವೂ ದ್ವೇಷವೂ ವಾಸವಾಡಿದ್ದವು, ಚಾಣಕ್ಯನು ಮಗಧರಾಜನಾದ ಧನನಂದನನ್ನು ತಂತ್ರದಿಂದ ಕೊಲ್ಲಿಸಿ ಮೌರ್ಯವಂಶದ ಚಂದ್ರ ಗುಪ್ತನನ್ನು ಪಾಟಲಿಪುತ್ರದ ಸಿಂಹಾಸನದ ಮೇಲೆ ಸ್ಥಾಪಿಸಿದನು. X ಮುಸಾವ೦ಶ ೪ ನೆಯ ಅಧ್ಯಾಯ. " ಮಹಾವಂಶ ೫ನೆಯ