ಪುಟ:ಅಶೋಕ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೩೧ ممر مهمی محرم مرحم محرم و مرمرے سے می P? " ಆ ಬಾಲಭಿಕ್ಷುವು ಬೌದ್ದ ಶಾಸ್ತ್ರದಿಂದ ಈ ಸೂತ್ರವನ್ನು ಉದ್ದರಿಸಿ ಬೌದ್ಧಧರ್ಮದ ಸರಲವಾದ ಸ್ವರೂಪವನ್ನು ವಿವರಿಸಿದನು. ಆತನು ಸವಿನುಡಿಗಳಿಂದ ಹೇಳಿದ ಈ ಉಪ ದೇಶಕ್ಕೆ ಅಶೋಕನು ಮೆಚ್ಚಿದನು, ಬುದ್ದದೇವನ ಪವಿತ್ರವಾದ ಧರ್ಮತತ್ವಗಳನ್ನು ತಿಳಿದುಕೊಳ್ಳುವ ಇಚೆ ಯು ಅಶೋಕನಿಗೆ ಬಲವಾಗಿ ಉಂಟಾಯಿತು. ಮರುದಿನ ನಿದ್ರೋಧನು ೩೨ ಜನ ಭಿಕ್ಷುಗಳೊಡನೆ ಅರಮನೆಗೆ ಬಂದನು. ತಥಾಗತನ ಜೀವನದ ಮತ್ತು ಧರ್ಮ ದ ಪವಿತ್ರ ತತ್ವಗಳನ್ನು ಕೇಳಿ ನೆರೆದ ಜನಸಮೂಹವು ಮರುಳಾಯಿತು. ಈ ಮೇರೆಗೆ ಅಶೋಕನು ಬುದ್ಧದೇವನು ತೋರಿಸಿದ ಆರ್ಯ * ಅಷ್ಟಾ೦ಗಿಕ ಮಾರ್ಗ ದ, ಮತ್ತು ಆರ್ಯ { ಸತ್ಯ ಚತುಷ್ಟಯದ ಮಹಿಮೆಯನ್ನು ತಿಳಿದುಕೊಂಡು ಈ ನಿವೃತ್ತಿಮೂಲವಾದ ಧರ್ಮವನ್ನು ಸ್ವೀಕರಿಸಿದನು. ಸಿಂಹಾಸನವೇರಿದ ೪ ವರ್ಷಗಳ ತರುವಾಯ ಅಶೋಕನ ಧರ್ಮದಲ್ಲಿ ಈ ಬದಲಾವಣೆಯುಂಟಾಯಿತು, ಇದರಿದ ಭರತ ಖಂಡದ ಇತಿಹಾಸದಲ್ಲಿ ಬೌದ್ದ ಯುಗವು ಗೌರವವುಳ್ಳದ್ದಾಗಿ ಪ್ರಕಾಶಿಸಿತು. ಚಕ್ರವರ್ತಿ ಯಾದ ಅಶೋಕನು ಈ ಧರ್ಮವನ್ನು ಸ್ವೀಕರಿಸಿದದರಿಂದ ಆ ಕಾಲದಲ್ಲಿ ಭರತಖಂಡ ದಲ್ಲೆಲ್ಲ ಒಂದು ತರದ ಹೊಸ ಜೀವನವ ತಲೆದೋರಿತು, ಶೀಲ, ಸಮಾಧಿ, ಪ್ರಜ್ಞೆ ಇವುಗಳ ಕಡೆಗೆ ಜನರ ಮನಸ್ಸು ತಿರುಗಿತು. ಶುಭದಿವಸದಲ್ಲಿ ಅಶೋಕನು ಈ ಪವಿತ್ರ ಧರ್ಮವನ್ನು ಸ್ವೀಕರಿಸಿದನು. ಅದೇ ವರ್ಷ ಆತನಿಗೆ ಪಟ್ಟಾಭಿಷೇಕವಾಯಿತು, ಚಿಕ್ಕ ತಮ್ಮನಾದ ತಿಷ್ಯನಿಗೆ ಯುವರಾಜಪಟ್ಟ ವನ್ನು ಕಟ್ಟಿದನು. ಪಟ್ಟಾಭಿಷೇಕವಾದ ನಾಲ್ಕು ವರ್ಷಗಳ ತರುವಾಯ ತಮ್ಮ ನಾದ ತಿಷ್ಯನೂ, ಒಬ್ಬ ಅಣ್ಣನ ಮಗನಾದ ಅಗ್ನಿಮಿತ್ರನೂ, ಮೊಮ್ಮಗನಾದ ಸುಮನನೂ ಈ ಹೊಸ ಧರ್ಮವನ್ನು ಸ್ವೀಕರಿಸಿದರು. ಈ ಕಾಲದಲ್ಲಿ ಲಕ್ಷಾವಧಿ ನರನಾರಿಯರು ತ್ಯಾಗವೈರಾಗ್ಯಗಳ ಮಹಿಮೆಯನ್ನು ಕೊಂಡಾಡಹತ್ತಿದರು. ಮುಂಡಿತಮಸ್ತಕರಾಗಿ ಕಾಷಾಯವಸ್ತ್ರಗಳನ್ನು ಧರಿಸಿದ ಶ್ರಮಣರಿಂದಲೂ, ಭಿಕ್ಷುಗಳಿಂದಲೂ ಸಮಗ್ರದೇಶವೆಲ್ಲ ತುಂಬಿಹೋಯಿತು. ಬಿಂದುನಾರನ ಕಾಲದಲ್ಲಿ ೬೦ ಸಾವಿರ ಬ್ರಾಹ್ಮಣರು ರಾಜಾಶ್ರಯದಲ್ಲಿದ್ದು ಕೊಂಡು ರಾಜವಂಶದ ಕಲ್ಯಾಣಕ್ಕಾಗಿ ದೇವತಾರಾಧನೆಯನ್ನು ಮಾಡುತ್ತ, ವೇದಪಾ ಠದಿಂದ ರಾಜಧಾನಿಯನ್ನೆಲ್ಲ ಶಬ್ಲಾಯಮಾನವಾಗಿ ಮಾಡುತ್ತ ಆನಂದದಿಂದ ಇದ್ದವರು ಈಗ ಅಪ್ಪಣೆ ಪಡೆದುಕೊಂಡರು. ಚಕ್ರವರ್ತಿಯ ಹೃದಯದಲ್ಲಿ ಹೊಸಪ್ರಕಾಶವು ಬಿದ್ದಿತು. ಆತನ ಮನಸ್ಸು ನಿರ್ವಾಣದಲ್ಲಿ ಸೇರಿ ಅದನ್ನೇ ಸಂಪಾದಿಸುವದರಲ್ಲಿ ತೊಡ ಗಿತು. ಈಗ ೬೦ ಸಾವಿರ ಬೌದ್ಧ ಭಿಕ್ಷುಗಳ ನಿರ್ವಾಣಗಾನದಿಂದ ಅರಮನೆಯು ಶಬ್ದಾ ಯಮಾನವಾಗಹತ್ತಿತು. ಈ ೬೦ ಸಾವಿರ ಬೌದ್ಧ ಭಿಕ್ಷುಗಳ ಸೇವೆಗಾಗಿ ಅರಸನ ಬೊಕ್ಕ # ಸನ್ಯ ಆ ದೃಷ್ಟಿ, ಸತ್ಯಕ್ಕೆ ಸಂಕಲ್ಲ, ಸಮ್ಯಕ್ ವಾರ್ಕ್, ಸತ್ಯಕ್ಕೆ ಕರ್ನಾ೦ತ, ಸನ್ಯುಗಾಜೀವ, ಸಮಗ ವ್ಯಾಯಾಮ, ಸತ್ಯ ಈ* ಸ್ಮೃತಿ ಮತ್ತು ಸಮಾಧಿ. ↑ ದುಃಖ, ದು:ಖದ ಉತ್ಸತಿ, ದು:ಖಧ್ವಂಸ, ದು:ಖಧ್ವಂಸದ ಉಪಾಯ.