ಪುಟ:ಅಶೋಕ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. FAAAAAAA - ೧•••••••••••M ಗಳು ಆತನ ಸೇವೆಯನ್ನು ಮಾಡಿ ಪವಿತ್ರರಾದರು. ದೇವತೆಗಳು ಆತನ ಸಲುವಾಗಿ ಪುಣ್ಯತೀರ್ಥಗಳಿಂದ ನೀರನ್ನೂ, ಸ್ವಾದುಫಲಗಳನ್ನೂ, ಬೇರೆ ಪದಾರ್ಥಗಳನ್ನೂ ತಂದು ಅರಮನೆಯಲ್ಲಿ ಇಡುತ್ತಿದ್ದರು. ಅಶೋಕನು ನಿತ್ಯಯೋಗಿಯೂ, ವಿರಕ್ತನೂ ಆದ ಆ ಶಾಕ್ಯ ರಾಜಪುತ್ರನ ದಿವ್ಯ ಕಾಂತಿಯುಳ್ಳ ಮೂರ್ತಿಯನ್ನು ಪ್ರತ್ಯಕ್ಷ ನೋಡಬೇಕೆಂದು ವ್ಯಾಕುಲನಾದನು. ಆದರೇನು ? ಆತನು ಪರಿನಿರ್ವಾಣವನ್ನು ಹೊಂದಿ ಎರಡುನೂರ ಹದಿನೆಂಟು ವರ್ಷಗಳಾಗಿ ಹೋಗಿವೆ! ಕರುಣಾಪೂರ್ಣನಾದ ಬುದ್ಧನ ಮೂರ್ತಿ ಯನ್ನು ಎಲ್ಲಿ ನೋಡೇನೆಂದು ಆತನು ಆತುರಪಡಲಾರಂಭಿಸಿದನು. ಅವನು ನಾಲ್ಕೂ ಕಡೆಗೆ ತಿರುಗಾಡಿ ಕೊನೆಗೆ ನಾಗರಾಜನಿಗೆ ಶರಣುಹೋದನು, ನಾಗರಾಜನು ತಾನು ಸ್ಥಾಪಿಸಿದ ಬುದ್ಧವಿಗ್ರಹವನ್ನು ಚಕ್ರವರ್ತಿಗೆ ತೋರಿಸಿದನು. ಅಶೋಕನು ದಿವ್ಯ ದೃಷ್ಟಿಯಿಂದ ಲೋಕಕಲ್ಯಾಣಕಾರಕನ್ನೂ, ನರದೇಹಧಾರಿಯೂ, ಸಾಕ್ಷಾತ್ ವೈರಾ ಗ್ಯದ ಮೂರ್ತಿಯೂ ಆದ ಬುದ್ದದೇವನನ್ನೇ ಅಲ್ಲಿ ನೋಡಿದನು. ಪವಿತ್ರವಾದ ತೇಜೋರಾಶಿಯ ನಡುವೆ ತಾಪತ್ರಯದಿಂದ ಕೇಶಬಡುವ ಮನವರಿಗೆ ವರದ ಹಸ್ತ ದಿಂದ ಆಶೀರ್ವಾದಮಾಡುವಂತೆ ಕುಳಿತಿರುವ ದಿವ್ಯಸುಂದರ ವಿಗ್ರಹವನ್ನು ಕಂಡನು. ಅಶೋಕನು ರೋಮಾಂಚಿತನಾದನು ! ಆ ದಿವ್ಯಮೂರ್ತಿಯ ದರ್ಶನವನ್ನು ತೆಗೆದು ಕೊಂಡು ಏಳು ದಿವಸಗಳ ಒಂದು ಉತ್ಸವವನ್ನು ಮಾಡುವದಕ್ಕೆ ಅಪ್ಪಣೆಯನ್ನಿ ತನು. ರಾಜ್ಯದಲ್ಲಿ ಮನೆಮನೆಗೆ ಬುದ್ಧದೇವನ ಮಹೋತ್ಸವದ ಗಾಯನವು ಆರಂಭ ವಾಯಿತು. ಭರತಖಂಡದಲ್ಲಿಯ ಕಥೆಯು. ಬಿಂಬಿಸಾರರಾಜನು ಮಗಧದ ಅಧಿಪತಿಯಾಗಿದ್ದನು. ರಾಜಗೃಹವ ಆತನ ರಾಜಧಾನಿಯು, ಅಜಾತಶತ್ರುವು ಆತನ ಮಗನು, ಅಜಾತಶತ್ರುವಿನ ಮಗನು ಉದಯಿ ಭದ್ರನು, ಆತನ ಮಗನು ಮುಂದನು. ಮುಂದನ ಮಗನು ಕಾಕವರ್ಣಿಯು, ಆತನ ಮಗನು ಸಹಾಲಿನನು. ಸಹಾಲಿನನ ಮಗನು ಮೂಲಕೂಚಿಯು, ತೂಲಕೂಚಿಯ ಮಗನು ಮಹಾಮಂಡಲನು, ಮಹಾಮಂಡಲನ ಮಗನು ಪ್ರಸೇನಜಿತುವ್ರ, ಈತನ ಮಗನು ನಂದನು. ನಂದನ ಮಗನು ಬಿಂದುಸಾರನು, ಬಿಂದುಸಾರರಾಜನು ಪಾಟಲಿ ಪುತ್ರನಗರದಲ್ಲಿ ರಾಜ್ಯವಾಳಿದನು. ಆತನ ಹಿರಿಯ ಮಗನ ಹೆಸರು ಸುಸೀಮನು. ಚಂಪಾನಗರದ ಒಬ್ಬ ಬ್ರಾಹ್ಮಣನಿಗೆ ಅತ್ಯಂತ ಸುಂದರಿಯಾದ ಒಬ್ಬ ಮಗಳಿ ದ್ದಳು, ತನ್ನ ಮಗಳ ಸೌಂದರ್ಯಾ ತಿಶಯದಿಂದ ಆತನ ಹೃದಯದಲ್ಲಿ ಮಹತ್ತಾ ಕಾಂಕ್ಷೆಯು ತಲೆದೋರಿತು. ಆ ಬ್ರಾಹ್ಮಣನು ಯಾವರೀತಿಯಿಂದಾದರೂ ಮಗಳನ್ನು ರಾಜಾಂತಃಪುರದಲ್ಲಿ ಸೇರಿಸಬೇಕೆಂದು ಸಂಕಲ್ಪ ಮಾಡಿದನು, ಬಿಂದುಸಾರಚಕ್ರವ ರ್ತಿಯು ಈ ಲಾವಣ್ಯವತಿಯಾದ ಕಸ್ಯೆಯನ್ನು ನೋಡಿದರೆ ನಿಶ್ಚಯವಾಗಿ ಪಟ್ಟದರಸಿ