ಪುಟ:ಅಶೋಕ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಅಶೋಕ ಅಥವಾ ಪ್ರಿಯದರ್ಶಿ. ANAAAA/ ••••••••••\ \/\ /\ NAAN ANANA ANAh N ANAAAN h/• /\ 1 n , ಯನ್ನಾಗಿ ಮಾಡಿಕೊಳ್ಳುವನೆಂದು ಆಲೋಚಿಸಿ ಬ್ರಾಹ್ಮಣನು ತನ್ನ ಮಗಳನ್ನು ಯಾವದೋ ಒಂದು ರೀತಿಯಿಂದ ರಾಜಾಂತಃಪುರದಲ್ಲಿ ಸೇರಿಸಿದನು. ಅಂತಃಪುರ ಸ್ತ್ರೀಯರು ಬ್ರಾಹ್ಮಣಕನೆಯಾದ ಸುಭದ್ರಾ೦ಗಿಯ ಅಸಾಧಾರಣ ಸೌಂದರ್ಯವನ್ನು ನೋಡಿ ಬೆರಗಾದರು. ಮುಂದೆ ಅಸೂಯೆಬಟ್ಟು ಅವರು ಆಕೆಗೆ ಕ್ಷೌರಕಾರ್ಯವನ್ನು ನಿಯಮಿಸಿದರು. ವಿಷಾದದಿಂದ ಸುಭದ್ರಾಂಗಿಯು ಕ್ಷೌರಕಾರಿಣಿಯ ಕೆಲಸವನ್ನು ಮಾಡತೊಡಗಿದಳು, ಕೆಲವು ಕಾಲವು ಕಳೆದು ಹೋದಬಳಿಕ ಒಂದುದಿನ ಸುಭ ದ್ರಾಂಗಿಯು ಬಿಂದುಸಾರನು ಅರಮನೆಯಲ್ಲಿ ಒಬ್ಬನೇ ತಿರುಗಾಡುತ್ತಿರುವದನ್ನು ಕಂಡು ಹೊತ್ತು ಸಾಧಿಸಿ ಅವನ ಬಳಿಗೆ ಬಂದು ತನ್ನ ವರ್ತಮಾನವನ್ನೆಲ್ಲ ಹೇಳಿದಳು, ಲೋಕ ದಲ್ಲಿ ಅದ್ವಿತೀಯ ಸುಂದರಿಯಾದ ಈ ತರುಣಿಯನ್ನು ನೋಡಿ ರಾಜನು ಬೆರಗುವಡೆ ದನು. ಸುಭದ್ರಾಂಗಿಯು ಬ್ರಾಹ್ಮಣಕಸ್ಯೆಯೆಂದು ತಿಳಿದು ಆಕೆಯನ್ನು ಮದುವೆ ಯಾಗಿ ಮುಖ್ಯ ಮಹಿಷಿಯನ್ನಾಗಿ ಮಾಡಿಕೊಂಡನು. ಕಾಲಕ್ರಮದಿಂದ ಆಕೆಯು ಪಟ್ಟಮಹಿಷಿಯಾದಳು. ಸುಭದ್ರಾಂಗಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿ `ದರು. ಅವರಲ್ಲಿ ಹಿರಿಯರಿಗೆ ಅಶೋಕನೆಂದೂ, ಕಿರಿಯನಿಗೆ ವಿಗತಾಶೋಕನೆಂದೂ ಹೆಸರು. ಅಶೋಕನು 'ಬಾಲ್ಯದಲ್ಲಿ ಬಹಳ ಕುರೂಪಿಯಾಗಿದ್ದನು. ಆತನ ಕುರೂಪ ವನ್ನು ನೋಡಿ ಬಿಂದುಸಾರನು ಆತನು ರಾಜಪುತ್ರನೆಂದು ಹೇಳುವದಕ್ಕೆ ನಾಚುತ್ತಿ ದ್ದನು, ಬೇರೆ ರಾಜಕುಮಾರರೊಡನೆ ಅಶೋಕನು , ಆಡುತ್ತಿದ್ದರೆ ಅರಸನು ಸಿಟ್ಟಿ ಗೇಳುತ್ತಿದ್ದನು. ಒಂದು ದಿವಸ ಆತನು ಪ್ರಸಿದ್ಧ ದೈವಜ್ಞನಾದ ಪಿಂಗಲವತ್ಸ ಜೀವ ನನ್ನು ತನ್ನ ಮಕ್ಕಳ ಭವಿಷ್ಯವನ್ನು ಕೇಳುವದಕ್ಕಾಗಿ ಕರೆಸಿದನು. ಅರಸನು ಅಶೋ ಕನನ್ನು ಪ್ರೀತಿಸದಿರುವದನ್ನೂ ಆದರೆ ಆತನ ಶರೀರದ ಮೇಲೆಯೇ ರಾಜಲಕ್ಷಣಗ ಳೆಲ್ಲ ಇರುವದನ್ನೂ ದೈವಜ್ಞನು ನೋಡಿ ಅರಸನೆದುರಿಗೆ ನಿಜವನ್ನು ಹೇಳದೆ ಬಚ್ಚಿಟ್ಟು ಸುಭದ್ರಾಂಗಿಯ ಬಳಿಯಲ್ಲಿ ಅಶೋಕನೇ ಕೊನೆಯಲ್ಲಿ ಸಮುದ್ರಾಂಕಿತ ಸೃಥ್ವಿಯ ಏಕಚ್ಚತ್ರಚಕ್ರವರ್ತಿಯಾಗುವನೆಂದು ಹೇಳಿ ಹೋದನು. ಬಿಂದುಸಾರನ ಆಳಿಕೆಯಲ್ಲಿ ತಕ್ಷಶಾಲೆಯಲ್ಲಿ ದಂಗೆಯೆದ್ದಿತು. ಆ ದಂಗೆಯನ್ನು ಅಡಗಿಸುವದಕ್ಕೆ ರಾಜನು ಅಶೋಕನನ್ನು ಕಳುಹಿದನು, ಆದರೆ ಅವನಿಗೆ ರಥ ಶಾಸ್ತ್ರ ಮೊದಲಾದ ಯಾವ ಯುದ್ಧ ಸಾಹಿತ್ಯವನ್ನೂ ಕೊಡಲಿಲ್ಲ. ಅಶೋಕನ ಕೊಲೆಯಾಗ ಬೇಕೆಂದೇ ಅರಸನ ಅಭಿಪ್ರಾಯವಿತ್ತು, ಅಶೋಕನು ತಂದೆಯ ಅಪ್ಪಣೆಯನ್ನು ತಲೆ ಯಲ್ಲಾಂತು ತಕ್ಷಶಿಲೆಗೆ ಪ್ರಯಾಣ ಮಾಡಿದನು. ಅಶೋಕನು ತಕ್ಷಶಿಲೆಗೆ ಸೈನ್ಯದೊ ಡನೆ ಮುತ್ತುವ ಎತ್ತುಗಡೆ ಮಾಡಲು ನಗರವಾಸಿಗಳು ಗುಂಪುಗುಂಪಾಗಿ ಆತನ - ದರ್ಶನಕ್ಕೆ ಬಂದರು. ಅವರು ಎಲ್ಲರೂ ಒಟ್ಟಾಗಿ ಹೇಳಿದ್ದೇನಂದರೆ- ನಮಗೆ ಅತ್ಯಾ