ಪುಟ:ಅಶೋಕ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೬೫ wwwvvvvvvvvvv ಚಾರಿಗಳಾದ ಕಾಮದಾರರೊಡನೆ ಮಾತ್ರ ವಿರೋಧವುಂಟು, ರಾಜನೊಡನೆ ಇಲ್ಲವೆ? ರಾಜಪುತ್ರರೊಡನೆ ಯಾವ ಪ್ರಕಾರದ ವಿರೋಧವೂ ಇಲ್ಲ. ” ಅಶೋಕನು ಸವಿನು ಡಿಗಳಿಂದ ಅವರನ್ನು ಸಮಾಧಾನಬಡಿಸಿದನು. ತಕ್ಷಶಿಲೆಯಲ್ಲಿ ಶಾಂತತೆಯನ್ನು ನೆಲೆಗೊ ಳಿಸಿ ರಾಜಕುಮಾರನು ರಾಜಧಾನಿಗೆ ಬಂದನು. ಯುವರಾಜನಾದ ಸುಸೀಮನು ಚಂಚಲನಾಗಿಯ ಉದ್ದ ತನಾಗಿಯೂ ಇದ್ದದರಿಂದ ರಾಜ್ಯದ ಮುಖ್ಯ ಮುಖ್ಯ. ಕಾಮದಾರರು ಆತನನ್ನು ಸೇರುತ್ತಿರಲಿಲ್ಲ ಅಶೋಕನು ತಿರುಗಿ ಬಂದ ಕೂಡಲೆ ಖಲ್ಲಾ ತಕ ರಾಧಾಗುಪ್ತರೆಂಬ ಮಂತ್ರಿಗಳು ಸುಸೀಮನನ್ನು ಪಟ್ಟದಿಂದ ತಳ್ಳಿ ಅಶೋ ಕನನ್ನು ಸಿಂಹಾಸನದಲ್ಲಿ ಕುಳ್ಳಿರಿಸಬೇಕೆಂದು ಸಂಕಲ್ಪ ಮಾಡಿದರು.

  • ತಕ್ಷಶಿಲೆಯಲ್ಲಿ ಮತ್ತೆ ದಂಗೆಯೆದ್ದಿತು. ಆಗ ಯುವರಾಜನಾದ ಸುಷೀಮನು ಅಲ್ಲಿಗೆ ಕಳುಹಲ್ಪಟ್ಟನು, ಸುಪೀಮನಿಂದ ದಂಗೆಯನ್ನು ನಿಲ್ಲಿಸುವದು ಆಗಲೇ ಇಲ್ಲ. ಬಿಂದುಸಾರನು ತನ್ನ ಮರಣಕಾಲವು ಸಮೀಪಿಸಲು ಸುಸೀಮನಿಗೆ ತಿರುಗಿ ಬರುವ ದಕ್ಕೂ, ಅಶೋಕನಿಗೆ ತಕ್ಷಶಿಲೆಗೆ ಹೋಗುವದಕ್ಕೂ ಅಪ್ಪಣೆ ಮಾಡಿದನು.

ಬಿಂದುಸಾರ ರಾಜನು ದೇಹವಿಟ್ಟ ಬಳಿಕ ಮಂತ್ರಿಗಳು ಅಶೋಕನನ್ನು ಸಿಂಹಾ ಸನದಲ್ಲಿ ಕುಳ್ಳಿರಿಸಿದರು, ಈ ಕಾಲದಲ್ಲಿ ಸುಪ್ರೀಮನು ತಾನೇ ಮಗಧದ ಸಿಂಹಾಸನವ ನಾ ಕ್ರಮಿಸಬೇಕೆಂದು ಪಾಟಲಿಪುತ್ರದ ಕಡೆಗೆ ಬಂದನು. ಅಶೋಕನು ಮಂತ್ರಿಗ ಳಿಂದಲೂ, ಸಜ್ಜಾಗಿದ್ದ * ರಾಕ್ಷಸ ಸೈನ್ಯದಿಂದಲೂ ಕೂಡಿಕೊಂಡು ಸುಸೀಮನ ಮಾರ್ಗವನ್ನು ಕಟ್ಟಿದನು. ರಾಜಧಾನಿಯ ಅಗಸೆಯಲ್ಲಿ ಸಶಸ್ತ್ರರಾದ ಸೈನಿಕರು ಕಾವ ಲಿಗೆ ನಿಂತರು; ಮತ್ತು ಅವರು ಕಂದಕದ ತುಂಬ ಭಯಂಕರವಾದ ಬೆಂಕೆಯನ್ನು ಸಿದ್ದಪಡಿಸಿದರು. ದೈವಯೋಗದಿಂದ ಸುಸೀಮನು ಆ ಕಂದಕದಲ್ಲಿ ಬಿದ್ದು ಭಯಂಕ ರವಾದ ಯಾತನೆಯಿಂದ ಪ್ರಾಣಬಿಟ್ಟನು. ತಿಬೇಟದಲ್ಲಿಯ ಕಥೆಯು • ಮಗಧರಾಜನಾದ ಅಜಾತ ಶತ್ರುವು ೩೨ವರ್ಷ ರಾಜವಾಳಿದನು, ಆತನ ಆಳಿ ಕೆಯ ೫ನೆಯ ವರ್ಷ ಬುದ್ಧದೇವನು ದೇಹವಿಟ್ಟನು. ಅಜಾತ ಶತ್ರುವಿನ ತರುವಾಯ ೧೦ಜನ ಅರಸರು ಆಳಿಹೋದ ಬಳಿಕ ಧರ್ಮಾಶೋಕನು ಮಗಧದ ಸಿಂಹಾಸನವನ್ನೇ

  1. ರಾಕ್ಷಸನೆಂಬವನು ನಂದವಂಶದ ಮುಖ್ಯ ಅಮಾತ್ಯನೂ ಸೈನ್ಯಾಧ್ಯಕ್ಷನೂ ಆಗಿದ್ದನು. ಮುದ್ರಾ ರಾಕ್ಷಸದಲ್ಲಿ ಈತನ ಸಾಹಸ, ಶೌರ್ಯ, ಪ್ರಭುಭಕ್ತಿಗಳ ವರ್ಣನೆಯು ವಿಸ್ತಾರವಾಗಿ ಉ೦ಟು. ಈ ರಾಕ್ಷ ಸನ ಅಧೀನದಲ್ಲಿರುವ ಸೈನ್ಯಕ್ಕೆ ರಾಕ್ಷಸ ಸೈನ್ಯವೆಂದು ಹೇಳಿರಬೇಕೆಂದು ತೋರುತ್ತದೆ, ನಂದವಂಶದ ಲೋಹವಾದ ಬಳಿಕ ಆ ಸೈನ್ಯವು ಮೌರ್ಯರಾಜರ ವಶದಲ್ಲಿಯೇ ಇತ್ತು.
  • Rockhill Life of Buddha.