ಪುಟ:ಅಶೋಕ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. •••••••••3, ಡಿದನು. ಅವನು ೫೪ ವರ್ಷ ರಾಜ್ಯವಾಳಿದನು. ಬುದ್ಧದೇವನ ನಿರ್ಮಾಣವಾದ ತರು ವಾಯ ೨೩೪ನೆಯ ವರ್ಷ ಧರ್ಮಶೋಕನು ಮಗಧದ ಸಿಂಹಾಸನದ ಮೇಲೆ ಇದ್ದನು. ಮೊದಮೊದಲು ಆತನು ಕಾರನೂ ನಿಷ್ಟುರನೂ ಆಗಿದ್ದನು; ಎಷ್ಟೋ ಜನರ ಕೊಲೆಮಾಡಿದನು, ಮುಂದೆ ಆತನ ಜೀವನದಲ್ಲಿ ಆಶ್ಚರ್ಯಕರವಾದ ಬದಲಾವಣೆ ಯುಂಟಾಯಿತು. ದಯೆಯೂ, ಧರ್ಮವೂ ಆತನಲ್ಲಿ ನೆಲೆಗೊಂಡವು. ಅರ್ಹತ್.ಯಶ ನಿಂದ ಈ ಬದಲಾವಣೆಯುಂಟಾಯಿತು. ಧರ್ಮಾಶೋಕನು ಪಟ್ಟವೇರಿದ ೩೦ ವರ್ಷಗಳ ತರುವಾಯ ಆತನ ಪಟ್ಟದರ ಸಿಯು ಒಬ್ಬ ಮಗನನ್ನು ಹಡೆದಳು. ಕೂಸು ಸರ್ವಲಕ್ಷಣ ಸಂಪನ್ನ ವಾಗಿತ್ತು. ದೈವ ಜ ರು ಈ ಕೂಸಿನ ಶರೀರದಲ್ಲಿ ರಾಜಚಿಹ್ನಗಳು ಇರುವವೆಂದೂ, ಈ ಮಗನು ಮುಂದೆ ತಂದೆಯು ಬದುಕಿರುವಾಗಲೇ ಸಿಂಹಾಸನವೇರುವನೆಂದೂ ಹೇಳಿದರು. ಬಳಿಕ ಈ ಹುಡುಗನು ಕಾಲಕ್ರಮದಿಂದ ತನ್ನನ್ನೇ ಸಿಂಹಾಸನದಿಂದ ತಳ್ಳಿ ಅರಸನಾಗಬಹುದೆಂಬ ಭಯದಿಂದ ಆತನು ಮಗನನ್ನು ದೂರ ಬಿಟ್ಟು ಬರುವದಕ್ಕೆ ಆಜ್ಞಾಪಿಸಿದನು. ಆ ಬಾಲಕನಿಗೆ ಭೂದೇವಿಯು ತಾನೇ ಮೊಲೆಯುಣಿಸಿದಳೆಂದು ಪ್ರವಾದವುಂಟು. ಇದ ರಿಂದಲೇ ಆ ಬಾಲಕನಿಗೆ 14 ಕುಸ್ತನ ” ಎಂಬ ಹೆಸರು ಬಿತ್ತು. { Kusthana ). ಈ ಕಾಲದಲ್ಲಿ ರ್ಗ್ಯಾ( Rgya ) ಎಂಬ ಒಬ್ಬ ಅರಸನು ಚೀನದೇಶದಲ್ಲಿ ಅಳು ತಿದ್ದನು. ಆತನಿಗೆ ೯೯೯ ಜನ ಗಂಡು ಮಕ್ಕಳಿದ್ದರು. ಆತನು ವೈಶ್ರವಣನ ಬಳಿಯಲ್ಲಿ ಇನ್ನೊಬ್ಬ ಮಗನನ್ನು ಕೇಳಿಕೊಂಡನು. ಯಾಕಂದರೆ ಆ ಒಬ್ಬ ಮಗನು ಕೂಡಿದರೆ ೧೦೦೦ ಜನ ಮಕ್ಕಳಾಗುತ್ತಿದ್ದರು. ವೈಶ್ರವಣನು ಬಿಡಲ್ಪಟ್ಟ ಆ ಹುಡುಗ ( ಕುಸ್ತನ ) ನನ್ನು ತೆಗೆದುಕೊಂಡು ಹೋಗಿ ಚೀನದ ರಾಜನಿಗೆ ಕೊಟ್ಟನು. ಆತನೂ ಮಗನಂತೆ ಆ ಬಾಲಕನನ್ನು ಕಾಪಾಡಿದನು. ಆ ಬಾಲಕನೇ ಮುಂದೆ ಖೋಟಾನ ( Licyul ) ರಾಜ್ಯವನ್ನು ಸ್ಥಾಪಿಸಿ ಅಲ್ಲಿ ಆಳಿದನು. ಈ ಸ್ಥಳದಲ್ಲಿಯೇ ಧರ್ಮಾಶೋಕನ ಮಂತ್ರಿ ಯಾದ ಯಶನೆಂಬವನು ೭ಸಾವಿರ ಜನ ಅನುಚರರೊಡನೆ ಆತನನ್ನು ಕೂಡಿಕೊಂಡ ನು, ಕುಸ್ತನನು ಖೋಟಾನ ರಾಜನಾಗಿದ್ದನು, ಮತ್ತು ಅದೇ ಕಾಲದಿಂದ ವೈಶ್ರವಣ ಮತ್ತು ಶ್ರೀಮಹಾದೇವಿ ಇವರು ಅಲ್ಲಿಯ ಮುಖ್ಯ ದೇವದೇವಿಯರಾಗಿ ಪೂಜಿಸಲ್ಪ ಟೂರು. ಬ್ರಹ್ಮದೇಶದಲ್ಲಿಯ ಕಥೆಯು.* ಚಂದ್ರಗುಪ್ತನು ೨೪ ವರ್ಷ ಅಪ್ರತಿಹತವಾಗಿ ಮಗಧವನ್ನಾಳಿಹೋದ ಬಳಿಕ ಅವನ ಮಗನಾದ ಬಿಂದುಸಾರನು ೧೬ ವರ್ಷದ ವಯಸ್ಸಿನಲ್ಲಿ ಸಿಂಹಾಸನವನ್ನೇರಿದನು. ಬಿಂದುಸಾರನು ೨೭ ವರ್ಷ ರಾಜ್ಯವಾಳಿದನು. ಆತನಿಗೆ ಒಟ್ಟಿಗೆ ೧೦೧ ಜನ ಗಂಡು + Life of Gautama Buddha by Bishop Bigandet,