ಪುಟ:ಅಶೋಕ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ಂ ಅಶೋಕ ಅಥವಾ ಪ್ರಿಯದರ್ಶಿ. +/v + + • • • •/v /////yyyy-** ff೪-vv • • • • • • • • - f v - - ಆ Y + ° ೪ + G /*/*v 4 *y///*/44 ೨ನೆಯ ಅಧ್ಯಾಯ. - ಅಶೋಕಾನದಾನ ಮತ್ತು ಮಹಾವಂಶ ಇವುಗಳಲ್ಲಿರುವ ಅಶೋಕಚರಿತ್ರ ಭೇದವು. &, ಶೋಕನ ವಿಷಯವಾಗಿ ಉಲ್ಲೇಖವಿರುವ ಬೇರೆ ಬೇರೆ ಗ್ರಂಥಗಳಲ್ಲಿ ಅಶೋಕಾವದಾನವೂ,* ಮಹಾವಂಶವೂ • ಮುಖ್ಯವಾದಂಥವು, ಐತಿ ಹಾಸಿಕರು ಈ ಎರಡು ಗ್ರಂಥಗಳನ್ನವಲಂಬಿಸಿ ಅಶೋಕಚರಿತ್ರದ ಚರ್ಚೆಯನ್ನು ಮಾಡುವರು, ಮೇಲೆ ಹೇಳಿದ ಗ್ರಂಥಗಳಲ್ಲಿ ಅಶೋಕನ + ನೇಪಾಳದಲ್ಲಿದ್ದ ಬೌದ್ದ ಪುಸ್ತಕಗಳಲ್ಲಿ ಅಶೋಕಾನದಾನವು ಒಂದು ಪ್ರಸಿದ್ಧ ಬೌದ್ಧಗ್ರಂಥವು. ಪ್ರಸಿದ್ಧ ಇತಿಹಾಸಜ್ಞನಾದ ಹಜಸನ್ ಸಾಹೇಬನು ನೇಪಾಳದಲ್ಲಿ ಈ ಎಲ್ಲ ಪುಸ್ತಕಗಳ ಹಸ್ತಲಿಖತಪ್ರತಿ ಗಳನ್ನು ಸಂಗ್ರಹಿಸಿ ಅವುಗಳಲ್ಲಿಯ ಕೆಲವನ್ನು ವಿಸಿಯಾಟಕ್ಕೆ ಸೋಸಾಯಟಿಗೆ ಕೊಟ್ಟ ರುವನು. ಡಾ. ರಾಜೇಂದ್ರ ಲಾಲ ಮಿತ್ರರು ಈ ಎಲ್ಲ ಪುಸ್ತಕಗಳ ಸಾರಾಂಶವನ್ನು ಇಂಗ್ಲಿಷ್ ಭಾಷೆಯಲ್ಲಿ ಪರಿವರ್ತಿಸಿ CC Nepalese Buddhist Literature ' ಎಂಬ ಪುಸ್ತಕವನ್ನು ಬರೆದಿರುವರು. ಈ ಅವದಾನ ಪುಸ್ತಕದಲ್ಲಿ ೯೬೬೦ ಶ್ಲೋಕಗಳಿರುವವು, ನೆವಾರಿ ಲಿಪಿಯಲ್ಲಿ ಇದು ಬರೆಯಲ್ಪಟ್ಟಿರುವದು, ಇದರ ಆಕಾ ರವು ೧೬!'<೫' ಇರುವದು, ಇದರಲ್ಲಿ ಅಶೋಕನ ಬಾಲ್ಯ, ಬೌದ್ಧಧರ್ಮದ ದೀಕ್ಷ, ಬೌದ್ರ ನೀತಿ ಮೊದ ಲಾದ ವಿಷಯಗಳನ್ನು ಕುರಿತು ಉಪಗುಪ್ತನೊಡನೆ ಆದ ಸ೦ಭಾಷಣ ಮೊದಲಾದವು ವಿಸ್ತಾರವಾಗಿ ಹೇಳ ಇಟ್ಟಿವೆ. ಗ್ರಂಥಕಾರನ ಹೆಸರು ಎಲ್ಲಿಯೂ ಇಲ್ಲ, ಆದರೂ ಪಾಟಲಿಪುತ್ರದ ಬಳಿಯಲ್ಲಿ ಗಂಗಾ ತೀರದಲ್ಲಿ ಉಪಕ೦ತಾರಾಮದೊಳಗಿನ ಕುಕ್ಕುಟವಿಹಾರದಲ್ಲಿರುವಾಗ ಜಯಶ್ರೀ ಎಂಬ ಭಿಕ್ಷುವು ತನ್ನ ಬಳಿಗೆ ಬಂದಿದ್ದ ಶೋತೃಗಳಿಗೆ ಹೇಳಿದ ಅಶೋಕ ಚರಿತ್ರವೇ ಗ್ರಂಥದ ಪ್ರತಿಪಾದ್ಯವಿಷಯವು, ನೇಪಾಲದಲ್ಲಿದ್ದ ಅವದಾನ ಗ್ರಂಥಗಳೆಲ್ಲ ಬಹುತರ ಪಾಲಿ ವಿನಯಪಿಟಕದ ಹಾಗೆಯೇ ಇರುವವು ಅವುಗಳಲ್ಲಿ ಬೌದ್ದ ರೀತಿ, ನೀತಿ, ಆಚಾರ ವ್ಯವಹಾರಗಳು ಕಥಯರೂಪದಿಂದ ವರ್ಣಿತವಾಗಿರುವವು. ಬೌದ್ಧ ಧರ್ಮದ ಇತಿಹಾಸವೂ ಸ್ವಲ್ಪ ಮಟ್ಟಿಗೆ ಇವುಗಳಲ್ಲಿರುವದು. ಭಿಕ್ಷುಸಂಪ್ರದಾಯದ ಉತ್ಪತ್ತಿ, ಬೆಳವಣಿಗೆ ಈ ವಿಷಯಗಳೂ ಅವು ಗಳಲ್ಲಿ ಉಂಟು, ಈ ಅವದಾನಗ್ರಂಥಗಳು ಪ್ರಕಟಿಸಲ್ಪಟ್ಟರೆ ಮಹಾಯಾನ ಸಾಂಪ್ರದಾಯದ ಎಷ್ಟೋ ಸ೦ಗತಿಗಳು ತಿಳಿಯಬಹುದು. • ಮಹಾವಂಶವು ಸಿ೦ಹಲದ ಪ್ರಸಿದ್ದ ಇತಿಹಾಸಗ್ರ೦ಥವು. ಪ್ರಾಚೀನಕಾಲದ ಸಂಗತಿಗಳು ಬಿದ ರಲ್ಲಿ ಅತಿ ಸ್ಪಷ್ಟವಾಗಿಯೂ ವಿಸ್ತಾರವಾಗಿ ವರ್ಣಿಸಲ್ಪಟ್ಟಿವೆ. ಐತಿಹಾಸಿಕ ಪಂಡಿತರೆಲ್ಲರೂ ಇದು ಪ್ರಮಾಣಭೂತವಾದ ಇತಿಹಾಸಗ್ರಂಥವೆಂದು ಒಪ್ಪುವರು. ಮಹಾವಂಶವು ಸಿಂಹಲದ ಇತಿಹಾಸಗ್ರಂಥ ವಾಗಿದ್ದರೂ ಭರತವರ್ಷದ ಹಲವು ಐತಿಹಾಸಿಕ ವಿಷಯಗಳು ಇದರಲ್ಲಿರುವವು, ಕೆಲವು ಹೊಸ ಸಂಗತಿ ಗಳನ್ನು ಇದರಿಂದ ತಿಳಿದುಕೊಳ್ಳಬಹುದು. ಈ ಗ್ರಂಥವು ಪಾಲಿಭಾಷೆಯಲ್ಲಿರುವದು, ಮಹಾನಾಮ ನ೦ಬವನು ಗ್ರಂಥಕಾರನು. ಕ್ರಿ. ೪೫೯ರಿ೦ದ ೪೭೭ರವರೆಗಿನ ಕಾಲದಲ್ಲಿ ಇದು ರಚಿತವಾಯಿ: ತು. ಇದು ಬಹು ವಿಸ್ತಾರವಾದ ಗ್ರಂಥವು, ಐತಿಹಾಸಿಕರು ಇದರಲ್ಲಿ ೩ ವಿಭಾಗಗಳನ್ನು ಮಾಡುವರು. ಮೊದಲನೆಯ ಭಾಗವು ಕ್ರಿ. ಪೂ. ೫೪೩ರಿಂದ ಆರಂಭವಾಗಿ ಕ್ರಿ. ೩೦ರವರೆಗೆ ಈ ಭಾಗದ ಕರ್ತೃವೇ ಮಹಾನಾಮಸು. ಮಹಾವಂಶಓಕೆ ಎಂಬ ಪ್ರಸಿದ್ದವಾದ ಟೀಕಾ ಪುಸ್ತಕವೊಂದು ಉಂಟು. ಮೂಲದಲ್ಲಿ ಅತಿ ಸಂಕ್ಷೇಪ ವಾಗಿ ವರ್ಣಿತವಾದ ಐತಿಹಾಸಿಕ ವಿಷಯಗಳು ಈ ಕಯಲ್ಲಿ ಬಹು ವಿಸ್ತಾರವಾಗಿ ವರ್ಣಿಸಲ್ಪಟ್ಟಿವೆ.