ಪುಟ:ಅಶೋಕ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ವಿಷಯವಾಗಿ ಹಲವು ಸಂಗತಿಗಳಿರುವವು, ಅಶೋಕಾವದಾನದಲ್ಲಿ ಹೇಳಿದ ವಿಷ ಯವು ಭರತಖಂಡದ್ದೆಂದೂ ಮಹಾವಂಶ, ದ್ವೀಪವಂಶಗಳಲ್ಲಿ ಹೇಳಿದ ವಿಷಯವು ಸಿಂಹಲದ್ದೆಂದೂ ಐತಿಹಾಸಿಕರು ಹೇಳುವರು, ಪ್ರಾಚೀನ ಗ್ರಂಥಗಳಲ್ಲಿ ಹಲವು ಬೆಳೆಸಿ ಹೇಳಿದ ವಿಷಯಗಳಿದ್ದರೂ ಸ್ಫೂಲಮಾನದಿಂದ ಅವುಗಳಲ್ಲಿ ಕೆಲಮಟ್ಟಿಗೆ ಐತಿಹಾ ಸಿಕ ಸತ್ಯವು ಇರುವದು, ಇನ್ನು ಯಾವ ವಿಷಯವು ಇತಿಹಾಸದೃಷ್ಟಿಯಿಂದ ನಿಜ ವೆಂದು ಗ್ರಹಿಸಲು ಅರ್ಹವಾಗಿರುವದೋ, ಆ ವಿಷಯದಲ್ಲಿಯೇ ಹಲವೆಡೆಯಲ್ಲಿ ಮತ ಭೇದವು ಕಂಡುಬರುವದು. ಆದದರಿಂದ ಈ ಎರಡು ಗ್ರಂಥಗಳ ವರ್ಣನೆಗಳಲ್ಲಿ ಬರುವ ಭೇದವನ್ನು ಆಲೋಚಿಸುವದು ಅವಶ್ಯವು. ಮಹಾವಂಶದಲ್ಲಿ ಚಂದ್ರಗುಪ್ತನು ಮೌರ್ಯವಂಶಸ್ಥಾಪಕನೂ, ಅಶೋಕನ ಪಿತಾಮಹನೂ ಎಂದು ಹೇಳಿದೆ, ಹಿಂದುಪುರಾಣಗಳಲ್ಲಿಯೂ ಬೇರೆ ಸಂಸ್ಕೃತ ಗ್ರಂಥ ಗಳಲ್ಲಿಯೂ ಇದು ಹಲವೆಡೆಗಳಲ್ಲಿ ಉಲ್ಲೇಖಿಸಲ್ಪಟ್ಟಿರುವದು. ಆದರೆ ಅಶೋಕಾವದಾ ನದಲ್ಲಿ ಚಂದ್ರಗುಪ್ತನ ಹೆಸರೇ ಇಲ್ಲ. ಗ್ರೀಕ ವಕೀಲನಾದ ಮೆಗಾಸ್ಪಿನೀಸನೂ, ಬೇರೆ ಗ್ರೀಕ ಲೇಖಕರೂ ಮೌರ್ಯ ಚಂದ್ರಗುಪ್ತನ ಇತಿಹಾಸವನ್ನು ವಿಸ್ತಾರವಾಗಿ ಹೇಳಿ ರುವರು. ಆ ಎಲ್ಲ ವಿವರಣೆಯನ್ನೊದಲು ಚಂದ್ರಗುಪ್ತನ ಅಸ್ತಿತ್ವದ ವಿಷಯವಾಗಿ ಯಾರಿಗೂ ಸಂಶಯವು ಬರುವಂತೆ ಇಲ್ಲ. ಮಹಾವಂಶದಲ್ಲಿ ಬಿಂದುಸಾರರಾಜನಿಗೆ ಸುಭದ್ರಾ೦ಗಿಯ ಹೊರತು ಬೇರೆ ೧೫ ಜನ ರಾಣಿಯರಿದ್ದರೆಂದು ಹೇಳಿದೆ. ಆದರೆ ಅಶೋಕಾವದಾನದಲ್ಲಿ ಅಶೋ ಕನ ತಾಯಿಯಾದ ಸುಭದ್ರಾಂಗಿಯ ಹೆಸರು ಮಾತ್ರ ಕಂಡುಬರುವದು, ಮಹಾವಂಶದ ಮತದಂತೆ ಬಿಂದುಸಾರನಿಗೆ ಒಪ್ಪಿಗೆ ೧೦೧ ಜನ ಮಕ್ಕಳಿದ್ದರು. ಹಿರಿಯನ ಹೆಸರು ಸುಮನನು, ಕಿರಿಯನ ಹೆಸರು ತಿಷ್ಯನು. ಆದರೆ ಅವದಾನದಲ್ಲಿ ಹಿರಿಯನ ಹೆಸರು ಸುಸೀಮನು, ಇದಲ್ಲದೆ ಅವದಾನದಲ್ಲಿ ಸುಭದ್ರಾಂಗಿಯ ಮಕ್ಕಳಾದ ಅಶೋಕ ಮತ್ತು ವಿಗತಾಶೋಕ ಇವರ ಹೆಸರುಗಳು ಕಂಡುಬರುವವು. ಮಹಾವಂಶದಲ್ಲಿ ಅಶೋಕನು ತಂದೆಯ ಮರಣಕಾಲದಲ್ಲಿ ಉಜ್ಜಯಿನಿಯಲ್ಲಿ ರಾಜಪ್ರತಿನಿಧಿಯಾಗಿ ಇದ್ದನೆಂದೂ, ತಂದೆಯ ಮರಣವಾರ್ತೆಯನ್ನು ಕೇಳಿ ಬೇಗನೆ ಪಾಟಲಿಪುತ್ರಕ್ಕೆ ಬಂದು ಸುಮನನನ್ನೂ ಬೇರೆ ೯೯ ಜನ ಅಣ್ಣ ತಮ್ಮಂದಿರನ್ನೂ ಕೊಂದು ಮಗಧದ ಸಿಂಹಾಸನ ವನ್ನೆ ರಿದನೆಂದೂ ಹೇಳಿರುವದು, ಆದರೆ ಅವದಾನದಲ್ಲಿ-ತಂದೆಯ ಮರಣ ಸಮಯ ದಲ್ಲಿ ಅಶೋಕನು ಪಾಟಲಿಪುತ್ರದಲ್ಲಿ ಇದ್ದನೆಂದೂ, ಸುಸೀಮನು ತಕ್ಷಶಿಲೆಯಿಂದ ಬರು ತಾನೆಂಬದನ್ನು ಕೇಳಿ ಮಂತ್ರಿಗಳ ಸಹಾಯದಿಂದ ಸುಪ್ರೀಮನ ಮುತ್ತಿಗೆಯನ್ನು ವ್ಯರ್ಥ ಪಡಿಸಿದನೆಂದೂ ಹೇಳಿದೆ. ಮಹಾವಂಶ, ಅವದಾನ ಗ್ರಂಥಗಳ ವರ್ಣನೆಯಲ್ಲಿ ಈ ಮೇರೆಗೆ ಭೇದವು ಕಂಡುಬರುವದು. ಆದರೆ ಈ ಭೇದದಲ್ಲಿ ಅಶೋಕನು ವಿರೋಧವಿ