ಪುಟ:ಅಶೋಕ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49. ಅಶೋಕ ಅಥವಾ ಪ್ರಿಯದರ್ಶಿ ಲ್ಲದೆ ಸಿಂಹಾಸನವನ್ನೇರಲಿಲ್ಲೆಂಬ ಸಂಗತಿಯು ಮಾತ್ರ ನಿಜವೆಂಬದನ್ನು ಕಂಡುಹಿಡಿ ಯಬಹುದು, ಮತ್ತು ಅಶೋಕನ ಮಲಅಣ್ಣನು ಸುಸೀಮನಾಗಲಿ, ಸುಮನನಾಗಲಿ; ಆತನು ತಂತ್ರದಿಂದ ಕೊಲ್ಲಲ್ಪಟ್ಟನೆಂದು ಗೊತ್ತಾಗುವದು. ಅಶೋಕನು ೯೯ ಜನ ತನ್ನ ಅಣ್ಣ ತಮ್ಮಂದಿರನ್ನು ಕೊಂದನೆಂದು ಮಹಾವಂಶದಲ್ಲಿ ಹೇಳಿದೆ. ಆದರೆ ಅವದಾನದಲ್ಲಿ ಈ ವಿಷಯವನ್ನು ಹೇಳಿರದಿದ್ದರೂ ಆತನ ಕ್ರೂರತನವು ಬೇರೆ ರೀತಿಯಿಂದ ಹೇಳಲ್ಪ ಟ್ವಿದೆ. ಸ್ಕೂಲಮಾನದಿಂದ ಎರಡೂ ವರ್ಣನೆಗಳಿಂದ ಅಶೋಕನು ಮೊದಲು ನರಘಾ ತಕ ನಿರ್ದಯಸ್ವಭಾವದವನಿದ್ದನೆಂದು ವ್ಯಕ್ತವಾಗುತ್ತದೆ. ಮಹಾವಂಶದ ಮತದಂತೆ ಬಿಂದುಸಾರನ ಮರಣವಾದ ೪ವರ್ಷಗಳ ತರುವಾಯ ಅಶೋಕನ ಪಟ್ಟಾಭಿಷೇಕವಾ ಯಿತು. ಈ ನಾಲ್ಕು ವರ್ಷಗಳ ವಿಲಂಬಕ್ಕೆ ಕಾರಣವೇನೆಂಬದನ್ನು ಮಹಾವಂಶಕಾ ರನು ಏನೂ ಹೇಳಿಲ್ಲ. ಶಾಸನಗಳಲ್ಲಿಯೂ ಇದಕ್ಕೆ ಉತ್ತರವು ದೊರೆಯುವದಿಲ್ಲ. ಮಹಾವಂಶದಲ್ಲಿ ಅಶೋಕನು ರಾಜ್ಯಾಭಿಷೇಕ ಕಾಲಕ್ಕೆ ಬೌದ್ಧ ಧರ್ಮವನ್ನು ಸ್ವೀಕರಿ ಸಿದ್ದನೆಂದೂ ಯುವರಾಜನಾದ ಸುಮನನ ಮಗನಾದ ನಿಗೊಧನೆಂಬ ೭ವರ್ಷದ ಬಾಲಭಿಕ್ಷುವು ಅಶೋಕನಿಗೆ ಬೌದ್ಧ ಧರ್ಮ ದ ದೀಕ್ಷೆಯನ್ನು ಕೊಟ್ಟನೆಂದೂ ಹೇಳಿದೆ. ಅವದಾನದಲ್ಲಿ ಒಬ್ಬ ಅಲೌಕಿಕಶಕ್ತಿಯುಳ್ಳ ಭಿಕ್ಷುವಿನಿಂದ ಅಶೋಕನ ಜೀವನದಲ್ಲಿ. ಬದಲಾವಣೆಯುಂಟಾಯಿತೆಂದು ಹೇಳಿದೆ. ಪ್ರಸಿದ್ಧ ಚೀನ ಪ್ರವಾಸಿಯಾದ ಹುಯೆನ್ ತ್ಯಾಂಗನು ಉಪಗುಪ್ತ ಭಿಕ್ಷುವು ಅಶೋಕನ ದೀಕ್ಷಾಗುರುವೆಂದು ವರ್ಣಿಸಿರುವನು. ಆದರೆ ಮಹಾವಂಶದಲ್ಲಿಯೂ, ಶಾಸನಗಳಲ್ಲಿಯೂ ಇದರ ಉಲ್ಲೇಖವೇನೂ ಇಲ್ಲ. ಮಹಾವಂಶದಲ್ಲಿ ಮೌದ್ದಲಿ ಪುತ್ರ ತಿಷ್ಯನು ಬೌದ್ದ ಸಂಪ್ರದಾಯದ ನಾಯಕನೆಂದು ವರ್ಣಿಸಲ್ಪಟ್ಟಿರುವನು. ಇವನು ಅಶೋಕಾರಾಮದಲ್ಲಿದ್ದಾಗ ಅಶೋಕನಿಗೆ ಬೌದ್ಧ ಧರ್ಮದ ಉಪದೇಶವನ್ನು ಕೊಟ್ಟಿದ್ದನೆಂದೂ ವರ್ಣಿಸಲ್ಪಟ್ಟಿದೆ. ಆದರೆ ಭರತಖಂಡದ ಗ್ರಂಥಗಳಲ್ಲಿ ಈ ಕಥೆಯ ಉಲ್ಲೇಖವೇ ಇಲ್ಲ. ಅಶೋಕಾವಧಾನದಲ್ಲಿ ಉಪಗುಪ್ತನೊಡನೆ ಅಶೋಕನು ತೀರ್ಥಯಾತ್ರೆಯನ್ನು ಮಾಡಿದನೆಂದು ಹೇಳಿದೆ. ಮಹಾವಂಶದಲ್ಲಿ ಇದರ ಉಲ್ಲೇಖವಿಲ್ಲ. ಭರತಖಂಡದ ಗ್ರಂಥಗಳಲ್ಲಿ ಮಹೇಂದ್ರನು ಅಶೋಕನ ತಮ್ಮನೆಂದು ಉಲ್ಲೇಖವದೆ, ಹುಯೆನ್ ತ್ಯಾಂಗನು ತನ್ನ ಪ್ರವಾಸವರ್ಣನೆಯಲ್ಲಿ ಮಹೇಂದ್ರನು ಅಶೋಕನ ತಮ್ಮನೆಂದು ಹೇಳಿರುವನು. ಆದರೆ ಮಹಾವಂಶ ಮತದಂತೆ ಮಹೇಂದ್ರನು ಅಶೋಕನ ಮಗನು. ಮಹೇಂದ್ರನು ಸಿಂಹಲಕ್ಕೆ ಹೋದದ್ದು ಎರಡೂ ಕಡೆಗಳಲ್ಲಿಯೂ ಹೇಳಲ್ಪಟ್ಟಿದೆ. ಮಹಾವಂಶದಲ್ಲಿ-ಅಶೋಕನ ರಾಜ್ಯಾಭಿಷೇಕವಾದ ಬಳಿಕ ಕ್ರಿ.ಪೂ. ೨೬೮ರಲ್ಲಿ ಅಶೋ ಕನ ತಮ್ಮನಾದ ತಿಷ್ಯನೂ, ಅಣ್ಣನ ಮಗನಾದ ಅಗ್ನಿ ಬ್ರಹ್ಮನೂ, ಮೊಮ್ಮಗನಾದ ಸುಮನನೂ ಬೌದ್ಧ ಧರ್ಮವನ್ನು ಸ್ವೀಕರಿಸಿದರೆಂದು ಹೇಳಿದೆ. ಅವದಾನದಲ್ಲಿ ಇದರ