ಪುಟ:ಅಶೋಕ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ಉಲ್ಲೇಖವಿಲ್ಲ. ಕುನಾಲನ ಉಪಾಖ್ಯಾನವು ಕೇವಲ ಭರತಖಂಡದ ಗ್ರಂಥಗಳಲ್ಲಿಯೂ ಜೈನಗ್ರಂಥಗಳಲ್ಲಿಯೂ, ತಿಷ್ಯರಕ್ಷಿತೆಯ ಪ್ರಸಂಗವು ಎರಡೂ ಗ್ರಂಥನೆಗಳ ಲ್ಲಿಯೂ ದೊರೆಯುವದು. ಅಶೋಕನ ಆಳಿಕೆಯಲ್ಲಿ ಮಹತ್ತರವೆನಿಸಿದ ಬೌದ್ಧ ಮಹಾ ಸಭೆಯ ಉಲ್ಲೇಖವು ಸಿಂಹಲಗ್ರಂಥಗಳಲ್ಲಿ ಮಾತ್ರ ದೊರೆಯುವದು, ಈ ಮೇರೆಗೆ ಎರಡೂ ಪ್ರಕಾರದ ಗ್ರಂಥಗಳಲ್ಲಿರುವ ಹೆಚ್ಚು ಕಡಿಮೆಯು ಸಂಕ್ಷೇಪವಾಗಿ ತೋರಿಸ ಲ್ಪಟ್ಟಿತು. - ಈ ಎಲ್ಲ ವಿಚಿತ್ರವಾದ ಭಿನ್ನ ಭಿನ್ನ ವರ್ಣನೆಗಳು, ಪರ್ವತಗಳ ಮೇಲೆ ಕೊರೆ ಯಿಸಿದ ಲಿಪಿಗಳು, ಸ್ಥಂಭಗಳ ಮೇಲೆ ಕೊರೆಯಿಸಿದ ಲಿಪಿಗಳು, ಭರತಖಂಡದ ಗ್ರಂಥ ಗಳು, ಪರದೇಶದ ಐತಿಹಾಸಿಕರು ಬರೆದ ಇತಿಹಾಸಗಳು ಇವೆಲ್ಲವುಗಳ ಸಮಾಲೋಚ ನೆಯನ್ನು ಮಾಡಲು ನಿಜವಾದ ಇತಿಹಾಸವನ್ನು ಕಂಡುಹಿಡಿಯಬಹುದಾಗಿದೆ. ಮುಂದಿನ ಅಧ್ಯಾಯಗಳಲ್ಲಿ ಅದನ್ನೇ ವಿವರಿಸುವದಕ್ಕೆ ಪ್ರಯತ್ನಿಸುವೆವು. ••• 14*7 / 7, 4 - Y ೩ನೆಯ ಅಧ್ಯಾಯ.


manama

ಅಂಗದೇಶ– ಸುಭದ್ರಾಂ ಗೀರಾಣಿಯು. gpgh2xxe ತCN 2No] Aತಿ ಎಚ ಪಾನದೀ ತೀರದಲ್ಲಿದ್ದ ಚಂಪಕನಗರವು ಅಂಗದೇಶದ ಪ್ರಾಚೀನ ರಾಜಧಾನಿಯು, ಪ್ರಾಕೃತಿಕ ಸೌಂದರ್ಯವುಳ್ಳ, ಬಹು ರಮಣೀ ಯವಾದ ಈ ಚಂಪಕನಗರವು ಭರತಖಂಡಕ್ಕೆ ಚಂಪಕಪುಷ್ಪ ಪಳ ಮಾಲೆಯಂತೆ ಒಪ್ಪುತ್ತಿತ್ತು. ಗಗ್ಗ ರಾ* ರಾಣಿಯು ತನ್ನ ಹೆಸರಿ ಈPRRYಕನ ನಿಂದ ಚಂಪಕನಗರದಲ್ಲಿ ಒಂದು ಸುಂದರವಾದ ಪುಷ್ಕರಿಣಿ ಯನ್ನು ಕಡಿಸಿದ್ದಳು. ಅದರ ದಂಡೆಯ ಮೇಲಿದ್ದ ಚಂಪಕಾದಿ ಪುಷ್ಪವೃಕ್ಷಗಳು ಮಂದಮಾರುತನಿಂದ ಸುತ್ತಲು ಸುಗಂಧವನ್ನು ಬೀರುತ್ತಿದ್ದವು, ಚಂಪಕನಗರದ ಈ ರಮಣೀಯವಾದ ಪ್ರದೇಶಕ್ಕೆ ಮೆಚ್ಚಿ ಎಷ್ಟೊ ಸನ್ಯಾಸಿಗಳೂ, ಸಾಧುಗಳೂ ಇಲ್ಲಿಗೆ ಬಂದು ಆರಾಮಗಳಲ್ಲಿ ವಾಸಿಸುತ್ತಿದ್ದರು. ಈ ನಗರವು ಮಿಥಿಲೆಯಿಂದ

  1. Rhys Divds Buddhist India P. 35 |

t IDialogues of Buddha ಪರಿವ್ರಾಜಕರು ಮಳೆಗಾಲದಲ್ಲಿ ಈ ಚಂಪಕನಗರದ ಗಕೂರಾ ಸರೋವರದ ದಂಡೆಯ ಮೇಲೆ ಆಶ್ರಮಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಈ ಆಶ್ರಮಗಳು ಬಹು ಕಾಲ ಇದ್ದವು. ಕಾದಂಬರಿ, ದಶಕ ಮಾರ ಚರಿತ್ರಗಳಲ್ಲಿ ಈ ಆಶ್ರಮಗಳ ಉಲ್ಲೇಖವಿರುವದು, $ ಜಾತಕ ಉಪಾಖ್ಯಾನ.