ಪುಟ:ಅಶೋಕ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ wwwMMMIMMwwwsvwww೦೦೦ ೯ ಹರದಾರಿ ದೂರದಲ್ಲಿತ್ತು, ಈಗಿನ ಇತಿಹಾಸಜ್ಞರು ಭಾಗಲಪುರದ ಸಮೀಪದಲ್ಲಿ ರುವ ಈಗಿನ +ಚಂಪಾಗ್ರಾಮವು ಪ್ರಾಚೀನ ಚಂಪಕನಗರವೆಂದು ಹೇಳುವರು. ಅವರ ಈ ಮತವು ನಿಜವೆಂದು ನಿರ್ಣಯಿಸುವದು ಅಸಾಧ್ಯವು, ಬುದ್ದದೇವನ ಕಾಲದ ವಿವರಣೆಯನ್ನು ನೋಡಿದರೆ {ಅಂಗದೇಶವು ಮಗಧದೇಶದ ಪೂರ್ವಕ್ಕೆ ಬಹು ದೂ ಶದ ವರೆಗೆ ಹಬ್ಬಿತ್ತೆಂದೂ, ಶಿಶುನಾಗವಂಶದ ಅರಸರ ಕಾಲದಲ್ಲಿ ಅದು ಮಗಧ ಸಾಮ್ರಾಜ್ಯಕ್ಕೆ ಸೇರಿಸಲ್ಪಟ್ಟಿತೆಂದೂ ತಿಳಿಯುವದು, ಅಂಗರಾಜನು ಆ ಕಾಲಕ್ಕೆ ಮಗಧ ರಾಜರ ಮಾಂಡಲಿಕನಾಗಿದ್ದನು. ಆ ಕಾಲದಲ್ಲಿ ಅಂಗರಾಜನು ಮಹಾನುಭಾವನಾ ಗಿಯೂ, ಔದಾರ್ಯ ದಯಾದಾಕ್ಷಿಣ್ಯಾದಿ ಗುಣಗಳುಳ್ಳವನಾಗಿಯೂ ಇದ್ದನೆಂಬ ದಕ್ಕೆ ಪ್ರಮಾಣಗಳುಂಟು. ಒಬ್ಬಾನೊಬ್ಬ ಬ್ರಾಹ್ಮಣನ ದುಃಖವನ್ನು ನೋಡಿ ಮರುಗಿ ಅಂಗರಾಜನು ನಿಷ್ಕರ*ಬ್ರಹ್ಮತ್ತರ-ಭೂಮಿದಾನಮಾಡಿದ್ದನೆಂದು ಉಲ್ಲೇಖವಿದೆ. ಈ ಕಾಲದಲ್ಲಿ ಕಾಶ್ಮೀರದೇಶದಲ್ಲಿ ಸೃಷ್ಟಿ ಸೌಂದರ್ಯದಿಂದ ಪರಮಸುಂದರವೆನಿಸಿದ್ದ ಚಂಪಕನಗರದ ಹೆಸರಿನಿಂದ ಅಂಗಾಧಿಪತಿಯು ತನ್ನ ರಾಜಧಾನಿಗೆ ಚಂಪಕವೆಂಬ ಹೆಸರಿಟ್ಟನೆಂದು ಪ್ರವಾದವುಂಟು, ಪ್ರಾಚೀನೇತಿಹಾಸವನ್ನು ನೋಡಿದರೆ ಬಹುದೂರ + ಚಂಪಕನಗರದ ಈ ಪ್ರಾಚೀನ ವರ್ಣನೆಗೂ, ಭಾಗಲಪುರದ ಬಳಿಯಲ್ಲಿರುವ ಈಗಿನ ಚಂಪಾ ಗ್ರಾಮಕ್ಕೂ ಸರಿಬೀಳುವದಿಲ್ಲ. ಮೇಲೆ ಉಲ್ಲೇಖಿಸಿದ ಚಂಪಾನದಿಯ ಅಸ್ತಿತ್ವವು ಕೂಡ ಈಗ ಅಲ್ಲಿ ಇಲ್ಲ. ಕನಿಂಗಹ್ಯಾಮ್ ಹೇಳುವದೇನೆಂದರೆ- ಪ್ರಾಚೀನ ಚಂಪಾನಗರದ ಬದಿಯಲ್ಲಿ ಭಾಗೀರಥಿಯ ಒಂದು ಶಾಖೆಯು ಹರಿದಿತ್ತು, ಅದಕ್ಕೆ ಚಂಪಾನದಿಯೆಂಬ ಹೆಸರಿತ್ತೆಂದು ತೋರುವದು. + ಅಂಗರಾಜ್ಯವು ಬಹು ಪ್ರಾಚೀನ ಪ್ರದೇಶವು, ರಾಮಾಯಣ, ಮಹಾಭಾರತಗಳಲ್ಲಿ ಹಲವೆಡೆಗ ಇಲ್ಲಿ ಇದರ ಉಲ್ಲೇಖವುಂಟು, ರಾಮಾಯಣದ ಬಾಲಕಾಂಡದಲ್ಲಿ--ದಶರಥಮಹಾರಾಜನು ತನ್ನ ಮಗ ಛಾದ ಶಾಂತೆಯನ್ನು ಅಂಗರಾಜನಾದ ಲೋಮಪಾದನಿಗೆ ಪಾಲನೆಗಾಗಿ ಕೊಟ್ಟಿದ್ದನೆಂದು ಹೇಳಿದೆ. ಮಾಲಿನಿ ಎಂಬದು ಅಂಗದೇಶದ ಪ್ರಾಚೀನ ರಾಜಧಾನಿಯು, ಮಹಾಭಾರತದ ಶಾ೦ತಿಪರ್ವದಲ್ಲಿ-ಮಗಧ ರಾಜನಾದ ಜರಾಸಂಧನು ಈ ಮಾಲಿನೀನಗರಿಯನ್ನು ಕರ್ಣನಿಗೆ ಕೊಟ್ಟ ನೆಂದು ಹೇಳಿದೆ. ಬಳಿಕ ಲೋಮಪಾದನ ಮಗನ ಮೊಮ್ಮಗನಾದ ಚಂಪನೆ೦ಬವನಿಂದ ಆ ನಗರಕ್ಕೆ ಚ೦ಪಕವೆಂಬ ಹೆಸರು ಬಂದಿತು. ಭಾಗವತ ಪುರಾಣದ ಮತದಂತೆ ಆಜ್ಞಾಕುವಂಶದ ಹರಿತನ ಮಗನಾದ ಚಂಹನೆಂಬವನು ಚಂಪಾನಗರವನ್ನು ಸ್ಥಾಪಿಸಿದನು. ಮು೦ದಿನ ಕಾಲದಲ್ಲಿ ಇದು ಜೈನರ ತೀರ್ಥವಾಯಿತು. ಬುದ್ದದೇವನ ಕಾಲಕ್ಕೆ ಬ್ರಹ್ಮದತ್ತನು ಅಂಗದೇಶದ ರಾಜನಾಗಿದ್ದನು. ಈಗಿನ ಮೊಂಗೀರ ಮತ್ತು ಭಾಗಲಪುರ ಜಿಲ್ಲೆ ಗಳೇ ಪ್ರಾಚೀನ ಅ೦ಗರಾಜ್ಯವು, ಮೊ೦ಗೀರದ ಪ್ರಾಚೀನಕಾಲದ ಹೆಸರು ಮೊದಾಗಿವೆ. ಇದಕ್ಕೆ ಕಷ್ಟ ಹರಣಪರ್ವತವೆಂದೂ ಎಷ್ಟೋ ಕಡೆಗೆ ಉಲ್ಲೇಖವಿರುವದು, ಈ ದೇಶದಲ್ಲಿಯೇ ಸೂತನಾದ ಅಧಿರಥನು ಕುಂತೀಪುತ್ರನಾದ ಕರ್ಣನನ್ನು ಸಲಹಿದನು. Journal, Asiatic Society: Bengal 1897. # ಮಜ್ಜಿಮನಿಕಾಯ; ಮತ್ತು Rhys Davids Buddhist India,