ಪುಟ:ಅಶೋಕ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, Y೫ ದಲ್ಲಿರುವ ಕೋಚೀನಚೀನದಲ್ಲಿ ಕೂಡ ಭಾರತೀಯರು ಉಪನಿವೇಶ (ವಸಾಹತು) ಮಾಡಿದಾಗ ಅಲ್ಲಿಯೂ ಚಂಪಕವೆಂಬ ಹೆಸರಿನಿಂದ ಒಂದು ನಗರವನ್ನು ಸ್ಥಾಪಿಸಿದ್ದ ರೆಂದು ಕಂಡುಬರುವದು, ಇದರಿಂದ ಅಂಗದೇಶವೂ, ಅದರ ರಾಜಧಾನಿಯಾದ ಚಂಪಕನಗರವೂ ಒಂದುಕಾಲದಲ್ಲಿ ಅತಿಸಮೃದ್ಧವಾದ ಪ್ರದೇಶವಾಗಿದ್ದವೆಂದು ತೋರುವದು. ಅಶೋಕನ ತಾಯಿಯಾದ ಸುಭದ್ರಾಂಗೀರಾಣಿಯು ಈ ಚಂಪಕನಗರದ ಒಬ್ಬ ದರಿದ್ರ ಬ್ರಾಹ್ಮಣನ ಮಗಳಾಗಿದ್ದಳೆಂದು ಅಶೋಕಾವದಾನದಲ್ಲಿರುವ ಅಶೋಕ ಚರಿತ್ರೆಯಲ್ಲಿ ಹೇಳಿದೆ. ಒಬ್ಬಾನೊಬ್ಬ ಜೋಯಿಸನು ಈ ಸುಲಕ್ಷಣೆಯಾದ ಸುಭ ದ್ರಾಂಗಿಯನ್ನು ನೋಡಿ ಈಕೆಯು ಮುಂದೆ ಪಟ್ಟದರಸಿಯಾಗುವಳೆಂದೂ, ಈಕೆಯ ಇಬ್ಬರು ಮಕ್ಕಳಲ್ಲಿ ಒಬ್ಬನು ಸಮುದ್ರಾಂಕಿತ ಪೃಥ್ವಿಯ ಚಕ್ರವರ್ತಿಯೂ, ಇನ್ನೊ ಬ್ಬನು ಸಂಸಾರವನ್ನು ತೊರೆದು ವಿರಕ್ತನಾಗಿ ಕಾಲಕಳೆವವನೂ ಆಗುವರೆಂದೂ ಭವಿಷ್ಯ ಹೇಳಿದ್ದನು. ಸುಭದ್ರಾಂಗಿಗೆ ಪ್ರಾಯವು ಬಂದೊಡನೆಯೆ ಆ ಬ್ರಾಹ್ಮಣನು ಯಾವದೋ ಒಂದು ರೀತಿಯಿಂದ ಮಗಳನ್ನು ರಾಜಾಂತಃಪುರದಲ್ಲಿ ಸೇರಿಸಿದನು. ಮುಂದೆ ಬಿಂದುಸಾರರಾಜನು ಅವಳ ಪಾಣಿಗ್ರಹಣಮಾಡಿ ಮುಖ್ಯ ಮಹಿಷಿಯನ್ನಾಗಿ ಮಾಡಿಕೊಂಡನೆಂಬದರ ಹೊರತು ಸುಭದ್ರಾಂಗಿಯ ವಿಷಯವಾಗಿ ಇನ್ನಾವ ಸಂಗತಿ ಯೂ ಗೊತ್ತಾಗಿಲ್ಲ. ಕಾಲಕ್ರಮದಿಂದ ಸುಭದ್ರಾಂಗಿಗೆ ಇಬ್ಬರು ಮಕ್ಕಳು ಹುಟ್ಟಿ ದರು, ಹಿರಿಯನ ಹೆಸರು ಅಶೋಕ; ಕಿರಿಯನ ಹೆಸರು ವಿಗತಾಶೋಕ ಇಲ್ಲವೆ ವೀತಶೋಕ, ಈ ಇಬ್ಬರಲ್ಲದೆ ಬಿಂದುಸಾರನಿಗೆ ಬೇರೆ ಕೆಲವು ಜನ ಮಕ್ಕಳಿದ್ದರು. ಅಶೋಕನ ಮಲತಾಯಿಯ ಮಗನಾದ ಸುಸೀಮನೆಂಬವನು ಬಿಂದುಸಾರನ ಅತ್ಯಂತ ಪ್ರೀತಿಯ ಮಗನೆಂದು ಆದರಿಸಲ್ಪಡುತ್ತಿದ್ದನು. ರಾಜನು ಅವನಿಗೇ ಮಗಧದ ಯುವ ರಾಜಪಟ್ಟವನ್ನು ಕಟ್ಟಿದ್ದನು. ↑ ]-Tsing's Travels.