ಪುಟ:ಅಶೋಕ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ಅಶೋಕ ಅಥವಾ ಪ್ರಿಯದರ್ಶಿ +++++MY ++ ೪ನೆಯ ಅಧ್ಯಾಯ. ನrryurrifilMIn 5:13ಐ 13,535762172NITMCSI: 57.ಡಿಸಿಸilಪiiಂಸ್: `ಸಿತತೆ nEHH8758 51.31:3413423 ಅಶೋಕನ ಬಾಲ್ಯಜೀವನ- ತಕ್ಷಶಿಲೆಯಲ್ಲಿ ದಂಗೆಯನ್ನು ಶಾಂತಪಡಿಸಿದ್ದು, ತಿಭಾಶಾಲಿಯಾದ ಯಾವ ಮಹಾಪುರುಷನ ವಿಜಯಪತಾಕೆಗಳು ಹಿಮಾಲಯದಿಂದ ಸಿಂಹಲದವರೆಗೆ ಹಾರಾಡುತ್ತಿದ್ದವೋ, ಯಾ ವಾತನು ಸ್ಥಾಪಿಸಿದ ಕೀರ್ತಿಸ್ತಂಭಗಳೂ, ಕಟ್ಟಡಗಳೂ ಪ್ರಾಚೀ ನೇತಿಹಾಸಕ್ಕೆ ಗೌರವವನ್ನು ೦ಟುಮಾಡಿರುವವೋ, ಯಾವನು ಪ್ರಾಣಿಮಾತ್ರದಲ್ಲಿ ತೋರಿಸಿದ ದಯೆಯೂ, ರಾಜ್ಯ ಶಾಸನದಲ್ಲಿ ತೋರಿಸಿದ ಸಮತೆಯೂ ಭರತಖಂಡಕ್ಕೆ ಶ್ರೇಷ್ಠತೆಯನ್ನು ೦ಟುಮಾಡಿದವೋ ಅಂಥ ಮಹಾತ್ಮನ ಬಾಲ್ಯಕಾಲದ ಯಾವ ವಿಶೇಷ ವಿಷಯಗಳೂ ಎಲ್ಲಿಯೂ ಉಲ್ಲೇಖಿಸಲ್ಪ ಡದಿರುವದಕ್ಕೆ ವಿಷಾದಿಸಬೇಕಾಗಿದೆ. ಅಶೋಕಾವದಾನದ ಹೊರತು ಹಿಂದುಪುರಾಣ ಗಳು, ಜೈನಗ್ರಂಥಗಳು, ತಿಬೇಟದ ಇತಿಹಾಸಗಳು ಚೀನಪ್ರವಾಸಿಗಳು ಬರೆದಿಟ್ಟ ವರ್ಣನೆಗಳು ಇವುಗಳಲ್ಲಿ ಅಶೋಕನ ವಿಷಯವಾಗಿ ಕೆಲವು ಸಂಗತಿಗಳು ಉಲ್ಲೇಖಿ ಸಲ್ಪಟ್ಟಿರುವವು, ಅವುಗಳಿಂದ ಗೊತ್ತಾಗುವ ಅಶೋಕನ ಬಾಲ್ಯಜೀವನ, ಯೌವನ ದಲ್ಲಿ ಮಾಡಿದ ಕಾರ್ಯಗಳು ಇವುಗಳ ವಿಷಯವಾಗಿ ಕೆಳಗೆ ಸಂಕ್ಷೇಪವಾಗಿ ವಿವರಿ ಸಲ್ಪಡುವದು. ಭಾಗೀರಥೀ ಶೋಣಗಳ ಸಂಗಮಸ್ಥಳದಲ್ಲಿ ಉನ್ನತವಾದ ಪ್ರಾಸಾದಗಳಿಂದ ಕಂಗೊಳಿಸುವ ಪಾಟಲಿಪುತ್ರ ರಾಜಧಾನಿಯಲ್ಲಿ ಅಶೋಕನು ಬೆಳೆದನು. ಆ ಕಾಲದ ವಿವರಣೆಯನ್ನು ಓದಲು ಅರಮನೆಗೆ ಸಮೀಪವಾಗಿದ್ದ ದುರ್ಗದಲ್ಲಿ ಅಸಂಖ್ಯ ಸೈನಿ ಕರೂ, ನಾನಾ ಪ್ರಕಾರದ ಆಯುಧಗಳಿಂದ ತುಂಬಿದ ಶಸ್ತ್ರಾಗಾರಗಳೂ, ರಣೋನ್ಮತ್ತ ವಾದ ಆನೆ ಕುದುರೆಗಳೂ ಮೌರ್ಯ ಸಾಮ್ರಾಜ್ಯದ ಪ್ರತಾಪವನ್ನು ವ್ಯಕ್ತಪಡಿಸುತ್ತಿದ್ದ ವೆಂದೂ, ಅರಮನೆಯಲ್ಲಿ ಸಾವಿರಾರು ಜನ ಬ್ರಾಹ್ಮಣರ ಕಂಠಗಳಿಂದ ಹೊರಡುವ ವೇದಘೋಷವು ಜನರ ಮನಸ್ಸಿನಲ್ಲಿ ಅತೀಂದ್ರಿಯವಾದ ಒಂದು ಶ್ರೇಷ್ಠ ಭಾವವನ್ನು ಉಂಟುಮಾಡುತ್ತಿತ್ತೆಂದೂ ತಿಳಿಯುವದು, ಮುಂದೆ ಬರೆದಿರುವ ಸಂಗತಿಗಳನ್ನು ಓದಲು ಅಶೋಕನು ಬಾಲ್ಯದಲ್ಲಿ ಉಳಿದ ರಾಜಕುಮಾರರೊಡನೆ ರಾಜಪುತ್ರೋಚಿತ ವಾದ ಶಿಕ್ಷಣವನ್ನು ಪಡೆದಿದ್ದನೆಂದೂ, ಪರ್ವತಗಳ ಮೇಲೆ ಕೊರೆದ ತಿಲಾಲಿಪಿಗಳಿಂದ ಅಶೋಕನು ಬಹಳವಾಗಿ ಬೇಟೆಗೆ ಮೆಚ್ಚಿದವನೆಂದೂ ಗೊತ್ತಾಗುವದು.